ಆರನೇ ವಾರದ ಆರಂಭದಲ್ಲಿ ಬಿಗ್ ಬಾಸ್ ಮನೆ ಮಂದಿಗೆಲ್ಲ ಶಾಕ್ ನೀಡಿದ್ದರು. ಆಟವೊಂದನ್ನು ನಡೆಸಿ ಅದನ್ನೇ ನಾಮಿನೇಶನ್ ಪ್ರಕ್ರಿಯೆ ಎಂದು ಹೇಳೀ ಮುಗಿಸಿದ್ದರು. ಆದರೆ  ಆ್ಯಂಡಿ ಮಾತ್ರ ಬಿಗ್ ಬಾಸ್‌ನ ಎಲ್ಲ ಆಟಗಳಿಂದ ಬಚಾವ್ ಆದರು.

ಒಬ್ಬರಿಗೆ ಹಾರ ಹಾಕುವ ಇಬ್ಬರಿಗೆ ಮಸಿ ಬಳಿಯುವಂತೆ ಬಿಗ್ ಬಾಸ್ ಕೇಳಿಕೊಂಡ ನಂತರ ಒಬ್ಬಬ್ಬರೆ ಸ್ಪರ್ಧಿಗಳು ಕಾರಣ ಕೊಡುತ್ತ ಆದೇಶ ಪಾಲಿಸಿದರು. ಯಾರ ಮುಖಕ್ಕೆ ಮಸಿ ಬಳಿಯಲಾಗಿದೆಯೋ ಅವರು ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆದ ಸದಸ್ಯರು ಎಂದು ಪರಿಗಣಿಸಲಾಯಿತು.

ಈ ನಡುವೆ ಅಕ್ಷತಾ ಮನೆಯ ಜೋಡಿಗಳನ್ನು ಸೆಲೆಕ್ಟ್ ಮಾಡಿ ಮಸಾಜ್ ಮಾಡಿಸಿದರು. ಕವಿತಾಗೆ ಶಶಿ ಮಸಾಜ್ ಮಾಡುತ್ತಿದ್ದುದನ್ನು ಆ್ಯಂಡಿ ವಿರೋಧಿಸಿದರು. ಆದರೆ ಅಕ್ಷತಾ ತನ್ನ ನಿರ್ಧಾರದಿಂದ ಹಿಂದೆ ಸರಿಯಲೇ ಇಲ್ಲ.

ರಾಕೇಶ್, ಆನಂದ್, ಕವಿತಾ ಮತ್ತು ಜಯಶ್ರೀ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಮನೆಯ ಕ್ಯಾಪ್ಟನ್ ಅಕ್ಷತಾ ಪಾಂಡವಪುರ ಅವರು ನೇರವಾಗಿ ನವೀನ್ ಮತ್ತು ಸೋನು ಪಾಟೀಲ್‌ರನ್ನು ನಾಮಿನೇಟ್ ಮಾಡಿದರು. ಅತಿ ಹೆಚ್ಚು ಸಾರಿ ಮಸಿ ಬಳಿಸಿಕೊಂಡರೂ ಸುರಕ್ಷಾ ಕವಚ ಬಳಸಿದ ಆ್ಯಂಡಿ ನಾಮಿನೇಶನ್ ನಿಂದ ಬಚಾವಾದರು.

ಈ ನಡುವೆ ಬಿಗ್ ಬಾಸ್ ಸವಿಸವಿ ರುಚಿ ಎಂಬ ವಿಶೇಷ ಟಾಸ್ಕ್ ನೀಡಿದರು. ಅಡುಗೆ ಮಾಡುವ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದ ಆಂಡಿ ಅವರು ಪಾಯಸಕ್ಕೆ ಸ್ವಲ್ಪ ಖಾರದ ಪುಡಿ ಹಾಕುವ ಮೂಲಕ ಮತ್ತೆ ಟಾಸ್ಕ್ ದಾರಿ ತಪ್ಪಿದ್ದು ವಾಗ್ಯುದ್ಧಕ್ಕೆ ಕಾರಣವಾಯಿತು. ಅಕ್ಷತಾ ಮತ್ತು ರಾಕೇಶ್‌ ಗಂಡ ಹಂಡತಿ ಎಂದು ಆ್ಯಂಡಿ ಕರದಿದ್ದು ಮನೆಯನ್ನು ಗಲಾಟೆಯ ಗೂಡನ್ನಾಗಿಸಿತು. ಒಬ್ಬರ ಮೇಲೆ ಒಬ್ಬರು ಬಿದ್ದು ವಾದ ಮಾಡತೊಡಗಿದರು.