ಮನೆ ಮಂದಿಗೆ ಬಿಗ್‌ ಶಾಕ್ ಕೊಟ್ಟ ಆ 3 ಸುದ್ದಿಗಳು!

First Published 2, Dec 2018, 6:28 PM IST
bigg-boss-kannada-season-6- 3 News Shocked Contestants
Highlights

ಬಿಗ್ ಬಾಸ್ ಮನೆ ಶನಿವಾರದ ಎಪಿಸೋಡ್‌ನಲ್ಲಿ ಅಕ್ಷರಶಃ ಶಾಕ್‌ಗೆ ಒಳಗಾಗಿತ್ತು.  ಇಡೀ ಕರ್ನಾಟಕ ಅನುಭವಿಸಿದ ಆಘಾತವನ್ನು ಮನೆ ಒಂದೆರಡು ದಿನಗಳ ನಂತರ ಅನುಭವಿಸಿತು. ಅಂಬರೀಶ್ ನಿಧನದ ಸುದ್ದಿಯನ್ನು ಅರಗಿಸಿಕೊಳ್ಳಲು ಮನೆ ಸಂಕಟ ಪಡುತ್ತಿದೆ.

ಬಿಗ್‌ ಬಾಸ್ ಮನೆ ಮಂದಿ ಈ ರೀತಿ ಶಾಕ್ ತೆಗೆದುಕೊಳ್ಳುವುದು ಇದೇ ಮೊದಲೇನಲ್ಲ. ನಿಯಮದಂತೆ ಹೊರಗಿನ ವಿಚಾರಗಳು ಒಳಗಿನ ಮನೆ ಮಂದಿಗೆ ಗೊತ್ತಾಗಬಾರದು. ಅವರ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತು ಇದೆ. ಆದರೆ ಕೆಲವೊಂದು ವಿಚಾರಗಳನ್ನು ಬಿಗ್‌ಬಾಸ್‌ ತಾವೆ ಮುಂದಾಗಿ ಹೇಳುತ್ತಾರೆ.

ನೋಟ್ ಬ್ಯಾನ್: ಸೀನನ್ 4 ರ ವೇಳೆ ಡಿ ಮಾನಿಟೈಜೇಶನ್ ಮಾಡಲಾಗಿತ್ತು. ನವೆಂಬರ್ 8 ರಂದು ನಡೆದ ಕಾರ್ಯದ ನಂತರ ದೇಶದ ಅರ್ಥ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲ ಆಗಿತ್ತು.  ಈ ವೇಳೆ ಒಂದು ವಾರದ ನಂತರ ಸ್ಪರ್ಧಿಗಳಿಗೆ ನೋಟ್ ಬ್ಯಾನ್ ವಿಚಾರ ತಿಳಿಸಲಾಘಿತ್ತು. ಮನೆಯಲ್ಲಿದ್ದ ಸಂಜನಾ ಅವರಿಗೆ ಸುದೀಪ್ ಸಾವಿರ ರೂ. ನೋಟುಗಳಲ್ಲೇ ನೀವು ಗೆದ್ದರೆ ಹಣ ನೀಡುತ್ತೇನೆ ಎಂದು ಕಾಲೆಳೆದಿದ್ದರು.

ಜಯಲಲಿತಾ ನಿಧನ: ತಮಿಳುನಾಡಿನಲ್ಲಿ ಅಮ್ಮನಾಗಿ ಮೆರೆದ ಜಯಲಲಿತಾ ನಿಧನರಾದ ಸುದ್ದಿಯನ್ನು ಮನೆ ಮಂದಿಗೆ ತಿಳಿಸಲಾಗಿತ್ತು. ಚಂದನ್‌ ಶೆಟ್ಟಿ ಜಯಗಳಿಸಿದ  ಆ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳು ಆಘಾತ ಅನುಭವಿಸಿದ್ದರು.

ಅಂಬಿ ನಿಧನ: ಅಂಬರೀಶ್ ನಿಧನದ  ಸುದ್ದಿಯನ್ನು ಈ ಬಾರಿಯ ಬಿಗ್ ಬಾಸ್ ಮನೆಗೆ ತಿಳಿಸಲಾಗಿದೆ. ಮನೆ ಮಂದಿ ಭಾನುವಾರದ ಸಂಚಿಕೆಯಲ್ಲಿ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

 

 

loader