ಬೆಂಗಳೂರು[ಜ.27] ಬಿಗ್‌ ಬಾಸ್ ಕಳೆದ ಸೀಸನ್ ಅಂದರೆ ಸೀಸನ್ 5 ರಲ್ಲಿ ಪ್ರದರ್ಶನ ನೀಡಿದ್ದ ಕಿರುತೆರೆ ಕಲಾವಿದ ಜಗನ್ ಮದುವೆಗೆ ಸಿದ್ಧವಾಗಿದ್ದಾರೆ.

ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿವೆ. ಬಹುಕಾಲದ ಗೆಳತಿ ರಕ್ಷಿತಾ ಅವರನ್ನು ಜಗನ್ ಮದುವೆಯಾಗಲಿದ್ದಾರೆ. ಸೀಸನ್ 5 ರಲ್ಲಿ ಜಗನ್ ಎಲ್ಲರ ಮನ ಗೆದ್ದಿದ್ದದ್ದರು.

ಗಾಂಧಾರಿ ಧಾರಾವಾಹಿ ಮೂಲಕ ಜಗನ್ ಕಿರುತೆರೆಯಲ್ಲಿ ಹೆಸರು ಮಾಡಿದ್ದರು. ನೃತ್ಯ ಶೋ ನಲ್ಲೂ ಭಾಗವಹಿಸಿದ್ದ ಜಗನ್ ಬಿಗ್‌ ಬಾಸ್ 5 ರ ಸುಂದರಾಂಗನಾಗಿ ಹೊರಹೊಮ್ಮಿದ್ದರು. ಕಿರಿತೆರೆ ಕಲಾವಿದೆ, ನಿರೂಪಕಿ ಅನುಪಮಾ ಗೌಡ ಅವರೊಂದಿಗೂ ಹಿಂದೆ ಜಗನ್ ಹೆಸರು ಕೇಳಿ ಬಂದಿತ್ತು.

 

 
 
 
 
 
 
 
 
 
 
 
 
 

MINE 💍❤️ @rakshitha_muniyappa ❤️R❤️

A post shared by Jagan (@jaganathc) on Jan 27, 2019 at 3:10am PST