ಬಿಗ್ ಬಾಸ್ ಸೀಸನ್ 6 ವಿನ್ನರ್ ಶಶಿ ಕುಮಾರ್ ಸಿನಿಮಾ ಮಾಡುವುದಾಗಿ ಕೆಲ ದಿನಗಳ ಹಿಂದೆ ಹೇಳಿದ್ದರು. ಆದರೆ ಅದ್ಯಾವ ಸಿನಿಮಾ? ನಾಯಕಿ ಯಾರು? ಎಂಬುದರ ಬಗ್ಗೆ ಎಲ್ಲಿಯೂ ಸ್ಪಷ್ಟನೆ ನೀಡಿರಲಿಲ್ಲ. ಈಗ ಶಶಿ ‘ಕೌಸಲ್ಯ ಕಲ್ಯಾಣ’ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

 

’ಕೌಸಲ್ಯ ಕಲ್ಯಾಣ’ ಒಂದು ರೊಮ್ಯಾಂಟಿಕ್ ಚಿತ್ರವಾಗಿದ್ದು, ಇದಕ್ಕೆ ನವೀನ್ ಕುಮಾರ್ ಹಾಗೂ ಗಿರೀಶ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರದಲ್ಲಿ ರಾಘವಿ ನಾಯಕಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ವಿಶೇಷವೇನೆಂದರೆ ಈ ಚಿತ್ರ ಕಥೆ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತದೆ. ಇನ್ನು ಚಿತ್ರದ ಟ್ರೈಲರ್ ರೆಡಿ ಆಗಿದ್ದು ಸಮಯ ನೋಡಿ ರಿಲೀಸ್ ಮಾಡುವುದಾಗಿ ಚಿತ್ರತಂಡ ನಿರ್ಧರಿಸಿದೆ.