ವೈರಲ್‌ ಹಾಡು ಕಚ್ಚಾಬಾದಾಮ್ ಗಾಯಕನಿಗೆ ಮೂರು ಲಕ್ಷ ನೀಡಿದ ಮ್ಯೂಸಿಕ್ ಕಂಪನಿ

  • ಕಚ್ಚಾ ಬಾದಾಮ್‌ ಹಾಡಿನ ಗಾಯಕನ ಗುರುತಿಸಿದ ಸಂಸ್ಥೆ
  • ಗೋಧೂಳಿಬೆಲ ಮ್ಯೂಸಿಕ್‌ ಸಂಸ್ಥೆಯಿಂದ 3 ಲಕ್ಷ ನಗದು
  • ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದ್ದ ಹಾಡು
Kacha Badam Singer Bhuban Badyakar Receives Rs 3 Lakh From Music Company akb

ಕಚ್ಚಾ ಬಾದಾಮ್‌ ಹಾಡಿದ ನಿಜವಾದ ಗಾಯಕ ಭುವನ್ ಬಡ್ಯಾಕರ್‌ (Bhuban Badyakar) ಅವರನ್ನು ಸಂಗೀತಾ ಸಂಸ್ಥೆಯೊಂದು ಗುರುತಿಸಿ ಮೂರು ಲಕ್ಷ ನಗದು ಹಣವನ್ನು ನೀಡಿದೆ. ಕಚ್ಚಾ ಬಾದಾಮ್‌ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ, ಯಾರ ಮೊಬೈಲ್‌ ವಾಟ್ಸಾಪ್‌ ಸ್ಟೇಟಸ್‌, ಫೇಸ್ಬುಕ್‌ ಸ್ಟೋರಿ, ಯೂಟ್ಯೂಬ್‌  ಹೀಗೆ ಸಾಮಾಜಿಕ ಜಾಲತಾಣದ ಯಾವ ಮೂಲೆ ಮೂಲೆಯೂ ಸೇರಿದಂತೆ ಎಲ್ಲಿ ನೋಡಿದರಲ್ಲಿ ಕಚ್ಚಾ ಬಾದಾಮ್ ಹಾಡಿನದ್ದೇ ಗುನುಗು. ಅಷ್ಟೊಂದು ಫೇಮಸ್‌ ಆಗಿದ್ದ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರನ ಈ ಹಾಡು ಯುವ ಸಮೂಹದಲ್ಲಿ ಬಿರುಗಾಳಿ ಎಬ್ಬಿಸಿ ಎಲ್ಲರ ಮೆಚ್ಚಿನ ಹಾಡಾಗಿ ಪ್ರತಿಯೊಬ್ಬರು ಇದನ್ನು ಗುನುಗುವಂತಾಗಿತ್ತು. 

ಆದರೆ ಈ ಹಾಡನ್ನು ಬಳಸಿಕೊಂಡು ಸಂಗೀತಾ ಕಂಪನಿಗಳು ಅದಕ್ಕೆ ಹಲವು ರಿಮಿಕ್ಸ್‌ ಮಾಡಿ ಕೋಟ್ಯಾಂತರ ದುಡ್ಡು ಮಾಡಿದ್ದರು. ಆದರೆ ಮೂಲ ಗಾಯಕ ಭುವನ್‌ ಬಡ್ಯಾಕರ್ ಅವರಿಗೆ ಮಾತ್ರ ಇದರಿಂದ ನಯಾಪೈಸೆಯೂ ಸಿಕ್ಕಿರಲಿಲ್ಲ. ಅವರು ಕಡಲೆಕಾಯಿ ಮಾರುತ್ತಲೇ ಇರಬೇಕಾಯಿತು. ಆದರೆ ಈಗ ಗೋಧೂಳಿಬೆಲೆ ಎಂಬ ಸಂಗೀತಾ ಸಂಸ್ಥೆಯೊಂದು ಕಚ್ಚಾ ಬಾದಾಮ್‌ನ ಮೂಲ ಹಾಡುಗಾರನನ್ನು ಗುರುತಿಸಿ ಅವರಿಗೆ ಬಹುಮಾನ ನೀಡಿದೆ. ಈ ಹಾಡು ತನ್ನ ಸೂಪರ್ ಕ್ಯಾಚಿ ಜಿಂಗಲ್‌ನಿಂದಾಗಿ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ  ಭುವನ್ ಬಡ್ಯಾಕರ್ ಅವರನ್ನು ಗಾಯಕನಾಗಿ ತ್ವರಿತವಾಗಿ ಪ್ರಚಾರಕ್ಕೆ ತಂದಿತು. ತಮ್ಮ ಹಾಡಿಗೆ ಈಗ ಅವರು ಪ್ರತಿಫಲ ಪಡೆಯುವ ಸಮಯ ಕೊನೆಗೂ ಬಂದಿದ್ದು, ಹಾಡಿನ ರೀಮಿಕ್ಸ್ ಆವೃತ್ತಿಯನ್ನು ರಚಿಸಿದ ಗೋಧೂಳಿಬೆಳ ಸಂಗೀತಾ ಸಂಸ್ಥೆ ಭುವನ್‌ಗೆ 3 ಲಕ್ಷ ರೂ.ಬಹುಮಾನವನ್ನು ನೀಡಿದೆ.


ಬಡ ಕಡಲೆಕಾಯಿ ಮಾರಾಟಗಾರ, ಹಾಡಿನ ಮೂಲ ಸೃಷ್ಟಿಕರ್ತ ಆದರೆ ಅವನಿಗೆ ನೀಡಬೇಕಾದ ಕ್ರೆಡಿಟ್ ಅನ್ನು ಏಕೆ ನೀಡುತ್ತಿಲ್ಲ ಎಂದು  ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಇದಕ್ಕೂ ಮೊದಲು ಭುವನ್‌ ಸಾಕಷ್ಟು ಖ್ಯಾತಿ ಗಳಿಸಿದ್ದರೂ ಅವರ ಆರ್ಥಿಕ ಪರಿಸ್ಥಿತಿಯು ಸುಧಾರಿಸಿರಲಿಲ್ಲ ಮತ್ತು ಯಾರೂ ಅವರಿಗೆ ಸಹಾಯ ಮಾಡಿರಲಿಲ್ಲ.

ನಾವು ಇಂದು ಭುವನ್ ದಾದಾ ಅವರೊಂದಿಗೆ 3 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಮತ್ತು ಅವರಿಗೆ ಚೆಕ್‌ನಲ್ಲಿ 1.5 ರೂ.ಪಾವತಿಸಲಾಗಿದೆ. ಉಳಿದ ಹಣವನ್ನು ಮುಂದಿನ ವಾರ ನೀಡಲಾಗುವುದು. ಇದನ್ನು ತುಂಬಾ ಮೊದಲೇ ನೀಡಬೇಕಾಗಿತ್ತು ಎಂದು ಗೋಧೂಳಿಬೆಲ ಸಂಗೀತ (Godhulibela Music) ಸಂಸ್ಥೆಯ ಗೋಪಾಲ್ ಘೋಷ್‌ ( Gopal Ghose) ಮಾಧ್ಯಮಗಳಿಗೆ ಹೇಳಿದರು. ಭುವನ್ ಅವರು ಈ ಹೊಸ ಸಂಗೀತಾದ ಅಲೆಯಿಂದ ಏನನ್ನೂ ಪಡೆಯಲಿಲ್ಲ ಆದರೆ  ಅವರು ಹಕ್ಕುಸ್ವಾಮ್ಯವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ಪೊಲೀಸರು ಕೂಡ ಭುವನ್‌ ಅವರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದ್ದಾರೆ.

ಗಮನಾರ್ಹವಾಗಿ, ಭುವನ್ ಬಡ್ಯಾಕರ್ ಅವರು ತಮ್ಮಿಂದ ಕಡಲೆಕಾಯಿ ಖರೀದಿಸುವ ಗ್ರಾಹಕರನ್ನು ಆಕರ್ಷಿಸಲು 'ಬದಮ್ ಬದಮ್ ಕಚಾ ಬಾದಮ್' ಎಂಬ ಜಿಂಗಲ್ ಅನ್ನು ರಚಿಸಿದ್ದರು. ನಂತರ, ಸಂಗೀತಗಾರ ನಜ್ಮು ರೀಚಾಟ್ ಹಾಡಿನ ರೀಮಿಕ್ಸ್ ಅನ್ನು ರಚಿಸಿದರು. ಅದು Instagram ಅಲ್ಲಿ ಹವಾ ಸೃಷ್ಠಿ ಮಾಡಿತ್ತು. ಭಾರತ ಮಾತ್ರವಲ್ಲ, ಪ್ರಪಂಚದಾದ್ಯಂತದ ನಟರು ಮತ್ತು ಪ್ರಭಾವಿಗಳು ಈಗ ಈ ವೈರಲ್ ಬೆಂಗಾಲಿ ಹಾಡಿಗೆ ನೃತ್ಯ ವೀಡಿಯೊಗಳನ್ನು ಮಾಡುತ್ತಿದ್ದಾರೆ.

ಎಲ್ಲಾ ಕ್ರೇಜ್ ಮತ್ತು ಜನಪ್ರಿಯತೆಯಿಂದ ಭಾವುಕರಾಗಿರುವ ಭುವನ್, ಈ ಹಾಡು ಇಷ್ಟೊಂದು ಹಿಟ್ ಆಗುತ್ತದೆ ಎಂದು ತಾನು ಯೋಚಿಸಿರಲಿಲ್ಲ ಎಂದು ಹೇಳಿದ್ದಾರೆ. ನಾನು ಸವಲತ್ತು ಹೊಂದಿದ್ದೇನೆ. ನಾನು ಇಲ್ಲಿಗೆ ತಲುಪುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಎಲ್ಲಾ ದೇವರ ಕೃಪೆ. ಈ ಬಗ್ಗೆ ಕನಸು ಕಂಡಿರಲಿಲ್ಲ. ನಾನು ಅದನ್ನು ಹಾಡಾಗಿ ಮಾಡಿದ್ದೇನೆ, ಅದು ತುಂಬಾ ಹೈಲೈಟ್ ಆಗುತ್ತದೆ ಎಂದು ಎಂದಿಗೂ ಯೋಚಿಸಿರಲಿಲ್ಲ, ಎಂದು ಬಡ್ಯಾಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios