ಬಿಗ್ ಬಾಸ್ ಸ್ಪರ್ಧಿ ಸಿಹಿಕಹಿ ಚಂದ್ರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವೇದಿಕೆಯ ಸದಸ್ಯರು ಸಮುದಾಯದ ಕ್ಷಮಾಪಣೆ ಕೇಳುವಂತೆ ಆಗ್ರಹಿಸಿದ್ದಾರೆ.

ಬಿಡದಿ(ಅ.31): ತಮ್ಮ ಸಮುದಾಯವನ್ನು ನಟ ಹಾಗೂ ಬಿಗ್'ಬಾಸ್ ಸ್ಪರ್ಧಿ ಅಪಮಾನಿಸಿದ್ದಾರೆ ಎಂದು ಜಯ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ಇನ್ನೋವೇಟಿವ್ ಫಿಲಂ ಸಿಟಿ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ಸಿಹಿಕಹಿ ಚಂದ್ರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವೇದಿಕೆಯ ಸದಸ್ಯರು ಸಮುದಾಯದ ಕ್ಷಮಾಪಣೆ ಕೇಳುವಂತೆ ಆಗ್ರಹಿಸಿದ್ದಾರೆ.

ಯಾನಿದು ವಿವಾದ

ಅ.28ರಂದು ರಾತ್ರಿ ಪ್ರಸಾರವಾದ ಬಿಗ್ ಬಾಸ್ ಸಂಚಿಕೆಯಲ್ಲಿ ಸ್ಪರ್ಧಿ ಸಿಹಿಕಹಿ ಚಂದ್ರು ಮತ್ತೊಬ್ಬ ಸ್ಪರ್ಧಿ ದಿವಾಕರ್ ಜೊತೆಗೆ ಸಂಭಾಷಣೆ ನಡೆಸುವಾಗ ದಿವಾಕರ್ ಅವರನ್ನು ‘ವಡ್ಡ’ ಎಂದು ಹೀಗಳೆದಿದ್ದಾರೆ. ಈ ಸಂದರ್ಭದಲ್ಲಿ ವಡ್ಡ ಎಂದರೆ ‘ನಿರ್ಲಕ್ಷ್ಯತನ’ ಎಂದು ವ್ಯಾಖ್ಯಾನವನ್ನೂ ಮಾಡಿದ್ದರು' ಇದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.