ಬೆಂಗಳೂರು(ಅ.06): ಅದ್ದೂರಿ ಹಾಗೂ ಬಹದ್ದೂರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರಸವೆಯ ಬೆಳಕನ್ನು ಚೆಲ್ಲಿರುವ ಸರ್ಜಾ ಕುಟುಂಬದ ಕುಡಿ ಧ್ರುವ ಸರ್ಜಾ ಅಭಿನಯದ ಮೂರನೇ ಚಿತ್ರ ಭರ್ಜರಿ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಭರ್ಜರಿ ಆಕ್ಷನ್ ಚಿತ್ರದಲ್ಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಯಕ ಧ್ರುವ ಸರ್ಜಾಗೆ ನಾಯಕಿಯಾಗಿ ರಚಿತ ರಾಮ್ ಕಾಣಿಸಿಕೊಂಡಿದ್ದು, ಹಿಂದಿನ ಚಿತ್ರಗಳ ಹಾಗೇ ಇಲ್ಲಿಯೂ ಅದ್ಧೂರಿ ಡೈಲಾಗ್ ಗಳು, ಭರ್ಜರಿ ಫೈಟಿಂಗ್ ಗಳು ಇದೆ. ಧ್ರುವ ಸರ್ಜಾ ಹುಟ್ಟು ಹಬ್ಬದ ಅಂಗವಾಗಿ ಟೀಸರ್ ರಿಲೀಸ್ ಆಗಿದ್ದು, ಶೀಘ್ರವೆ ಹಾಡುಗಳನ್ನು ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ತಿಳಿಸಿದೆ.