ಬೆಂಗಳೂರು (ಆ. 11):  ಆಗಸ್ಟ್ 15 ರಂದು ಭಾರತಿ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅನಿರುದ್ಧ ಜತಕರ, ಭಾರತಿಯವರ ಕುರಿತು ಸಾಕ್ಷ್ಯಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಭಾರತಿ ಅವರು ಭಾರತೀಯ
ಚಿತ್ರರಂಗದಲ್ಲಿ ಐದು ದಶಕಗಳಿಂದ ಕಲಾಸೇವೆ ಮಾಡಿರುವುದರ ಹಿನ್ನೆಲೆಯಲ್ಲಿ ಈ ಸಾಕ್ಷ್ಯಚಿತ್ರ ನಿರ್ಮಾಣ ಆಗುತ್ತಿದೆ.

ಅವರ ಕೌಟುಂಬಿಕ ಬದುಕು, ಅಧ್ಯಾತ್ಮಿಕ ನಿಲುವು, ಸಾಮಾಜಿಕ ಸ್ಪಂದನೆ, ಚಿತ್ರರಂಗದ ಅನುಭವ, ಬಾಲ್ಯದ ಬದುಕು- ಎಲ್ಲವನ್ನೂ ಈ ಸಾಕ್ಷ್ಯಚಿತ್ರ ಒಳಗೊಳ್ಳಲಿದೆ. ಭಾರತಿಯವರ ಜೊತೆ ಕೆಲಸ ಮಾಡಿದ ಕಲಾವಿದರು, ಅವರ
ಕುಟುಂಬಪರಿವಾರ- ಎಲ್ಲರನ್ನೂ ಮಾತಾಡಿಸಿ, ಸಮಗ್ರವಾದ ಸಾಕ್ಷ್ಯಚಿತ್ರವನ್ನು ಅನಿರುದ್ಧ್ ನಿರ್ದೇಶಿಸಲಿದ್ದಾರೆ. 

ಅನಿರುದ್ಧ್ ಈಗಾಗಲೇ ಕೀರ್ತಿ ಇನ್ನೋವೇಷನ್ ಸಂಸ್ಥೆಗಾಗಿ ಐದು ಕಿರುಚಿತ್ರಗಳನ್ನು ಬರೆದು ನಿರ್ದೇಶಿಸಿದ್ದಾರೆ. ಇದು ಅವರ ನಿರ್ದೇಶನದ ಆರನೇ ಚಿತ್ರವಾಗಿ ಮೂಡಿಬರಲಿದೆ. ಈ ಮಧ್ಯೆ ಸ್ವಾತಂತ್ರ್ಯ ದಿನಕ್ಕೆ ಸಂಬಂಧಿಸಿದ ಒಂದು ಹಾಡಿನಲ್ಲಿ ಅನಿರುದ್ಧ್ ಕಾಣಿಸಿಕೊಳ್ಳುತ್ತಿದ್ದಾರೆ. 48 ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ಮಾಡಿಕೊಡುವ ಹಾಡು ಅದು.