ಇಲ್ಲಿರುವ ಫೋಟೋ ನೋಡಿದ ತಕ್ಷಣ ಸೀರಿಯಲ್​ ಪ್ರೇಮಿಗಳಿಗೆ ಈ ಬಾಲನಟಿ ಯಾರು ಎಂದು ತಿಳಿಯುವುದು ಕಷ್ಟವೇನಲ್ಲ. ಈಕೆ ಯಾರೆಂದು ಗುರುತಿಸುವಿರಾ? 

ಇಲ್ಲಿರುವ ಫೋಟೋ ನೋಡಿದ ತಕ್ಷಣ ಸೀರಿಯಲ್​ ಪ್ರೇಮಿಗಳಿಗೆ ಈ ಬಾಲನಟಿ ಯಾರು ಎಂದು ತಿಳಿಯುವುದು ಕಷ್ಟವೇನಲ್ಲ. ಈಚೆಗಷ್ಟೇ 18 ವರ್ಷ ತುಂಬಿ ಪಿಯುಸಿ ಮುಗಿಸಿ ಸಕತ್​ ಸದ್ದು ಮಾಡಿದ್ದಾಳೆ ಈಕೆ. ಅಷ್ಟು ಹೇಳಿದ ಮೇಲೆ ಇವಳು ಯಾರು ಎಂದು ಹಲವರಿಗೆ ತಿಳಿದಿರಬಹುದು. ಹೌದು. ಇವಳೇ ಭಾಗ್ಯಲಕ್ಷ್ಮಿ ಸೀರಿಯಲ್​ ತನ್ವಿ. ಪಿಯುಸಿಯ ಕಾಮರ್ಸ್​ ವಿಭಾಗದಲ್ಲಿ ಶೇಕಡಾ 91 ತೆಗೆದು ಸಕತ್​ ಸುದ್ದಿಯಾಗಿರುವ, ತನ್ವಿ ಎಂದೇ ಫೇಮಸ್​ ಆಗಿರೋ ಈಕೆಯ ಹೆಸರು ಅಮೃತ ವರ್ಷಿನಿ ಗೌಡ. ಈಗಿನ ಬಹುತೇಕ ಮಕ್ಕಳು ಶೇಕಡಾ 90ರ ಮೇಲೆ ತೆಗೆಯುವುದು ಸಾಮಾನ್ಯವಾಗಿದೆ. ಆದರೆ ಒಂದೆಡೆ ಶೂಟಿಂಗ್​ ಬಿಜಿಯ ನಡುವೆಯೇ, ಇಷ್ಟು ಅಂಕ ಗಳಿಸಿರುವ ಕಾರಣ ತನ್ವಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿತ್ತು. ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ತನ್ವಿ, ತನ್ನ ಸುಂದರ ಅಭಿನಯದಿಂದ ಒಂದು ಸಲ ಅಮ್ಮನ ಪರ, ಮತ್ತೊಮ್ಮೆ ಅಪ್ಪನ ಪರ, ಮಗದೊಮ್ಮೆ ಗೊಂದಲಗೂಡಾಗಿರುವ ಮನಸ್ಸು... ಹೀಗೆ ಎಲ್ಲಾ ರೀತಿಯ ಅಭಿನಯಕ್ಕೂ ಸೈ ಎನಿಸಿಕೊಂಡಿದ್ದಾಳೆ. ಶಿಕ್ಷಣದ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈಕೆ ಅದೇ ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲೂ (social media) ಸಕತ್​ ಆಕ್ಟೀವ್.

Add Asianetnews Kannada as a Preferred SourcegooglePreferred

ಇದೀಗ ಈಗ ಇನ್ನೊಂದು ರೀಲ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ ಭಾಗ್ಯ ಮತ್ತು ತಾಂಡವ್​ ಪುತ್ರಿ. ಅಮ್ಮ ಹಳ್ಳಿಯ ಗುಗ್ಗು ಎಂದು ಹೀಯಾಳಿಸುತ್ತಲೇ ಅಮ್ಮನನ್ನು ಕಂಡರೆ ಇಷ್ಟಪಡದಿದ್ದ ತನ್ವಿ ಬದಲಾಗಿ ವರ್ಷವೇ ಕಳೆದಿದೆ. ಈಗ ಅಮ್ಮ ಎಂದರೆ ಪಂಚಪ್ರಾಣ. ಅಮ್ಮನ ಮಹತ್ವ ತಿಳಿದಿದೆ. ಮಕ್ಕಳಿಗಾಗಿ ಅಮ್ಮ ಪಡುತ್ತಿರುವ ಕಷ್ಟದ ಅರ್ಥವಾಗಿದೆ. ಅಮ್ಮ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವ ಅರಿವಾಗುವಷ್ಟರಲ್ಲಿಯೇ ಕಥೆ ವಿಭಿನ್ನ ರೀತಿಯ ಟರ್ನ್​ ತೆಗೆದುಕೊಳ್ಳುತ್ತಲೇ ಇದೆ. ಅದೇನೆ ಇದ್ದರೂ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾಳೆ ಅಮೃತಾ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಗಳನ್ನು ಪಡೆದಿರುವ ಈಕೆ, ಈ ಹಿಂದೆ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ರೂ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಮುಂದೊಂದು ದಿನ ನಾಯಕಿಯಾಗಿ ಕಾಣಿಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.

ಅಂದಹಾಗೆ ಅಮೃತಾ, 600ಕ್ಕೆ 543 ಅಂಕ ಪಡೆದಿದ್ದಾಳೆ. ಕನ್ನಡದಲ್ಲಿ 100ಕ್ಕೆ 97 ಅಂಕ ಪಡೆದಿರುವ ಅಮೃತಾ ಗೌಡ, ಇಂಗ್ಲಿಷ್‌ನಲ್ಲಿ 81, ಎಕನಾಮಿಕ್ಸ್‌ನಲ್ಲಿ 93, ಬ್ಯುಸಿನೆಸ್ ಸ್ಟಡೀಸ್‌ನಲ್ಲಿ 83, ಅಕೌಂಟೆನ್ಸಿಯಲ್ಲಿ 94, ಸ್ಟಾಟಿಸ್ಟಿಕ್ಸ್‌ನಲ್ಲಿ 95 ಅಂಕಗಳನ್ನು ಅಮೃತಾ ಗೌಡ ಪಡೆದುಕೊಂಡಿದ್ದಾರೆ. ಅಂದಹಾಗೆ, 'ಭಾಗ್ಯಲಕ್ಷ್ಮೀ' ಸೀರಿಯಲ್​ನಲ್ಲಿ ಈಕೆ ಸದ್ಯ ಫಸ್ಟ್​ ಪಿಯುಸಿ. ಅಮ್ಮ ಭಾಗ್ಯ ಜೊತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಮೊದಲ ವರ್ಷದ ಪಿಯುಸಿ ಸೇರಿದ್ದಾಳೆ. ಆದರೆ ರಿಯಲ್ ಲೈಫ್‌ನಲ್ಲಿ ತನ್ವಿ ಪಾತ್ರ ಮಾಡಿರುವ ಅಮೃತಾ ಆಗಲೇ ಸೆಕೆಂಡ್ ಪಿಯುಸಿ ಮುಗಿಸಿದ್ದಾಳೆ.

ಕನಸಿನಲ್ಲಿಯೂ ನಾನು ಇಷ್ಟು ತೆಗೆಯುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಡಿಸ್ಟಿಂಕ್ಷನ್​ ಬರುತ್ತದೆ ಎಂದು ಗೊತ್ತಿತ್ತು. ಅಮ್ಮ ನನಗೆ ಸಿಕ್ಕಾಪಟ್ಟೆ ಪರೀಕ್ಷೆ ವೇಳೆ ಎಲ್ಲಾ ಅಮ್ಮಂದಿರಂತೆ ಟಾರ್ಚರ್​ ಕೊಡ್ತಿದ್ರು. ಓದು ಓದು ಅಂತಿದ್ರು. ಅವರಿಗೂ ನಾನು ಇಷ್ಟು ತೆಗೆಯುತ್ತೇನೆ ಎಂದು ಗೊತ್ತಿರಲಿಲ್ಲ. 90 ಪರ್ಸೆಂಟ್​ ಆದ್ರೂ ಬರಬೇಕು ನೋಡು ಎಂದಿದ್ರು. ನಾನು 91 ತೆಗೆದೆ ಎಂದು ಹೇಳಿದಾಗ ಅಮ್ಮ ಕಕ್ಕಾಬಿಕ್ಕಿಯಾಗಿ ಹೋದರು ಎಂದಿದ್ದಳು ಅಮೃತಾ. ಅಮ್ಮ ಕೂಡ ಮಾತನಾಡಿ, ನಾನು ಅವಳಿಗೆ ಪರೀಕ್ಷೆ ವೇಳೆ ಸಿಕ್ಕಾಪಟ್ಟೆ ಟಾರ್ಚರ್​ ಕೊಟ್ಟಿದ್ದೆ. ಸರಿ ಓದ್ತಾನೇ ಇರಲಿಲ್ಲ. ಅದಕ್ಕೆ ಓದು ಓದು ಅಂತ ಹಿಂಸೆ ಮಾಡ್ತಿದ್ದೆ. ತುಂಬಾ ಖುಷಿಯಾಗ್ತಿದೆ ಎಂದಿದ್ದರು.

View post on Instagram