ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಹಾಗೂ ತನ್ವಿ ಪಾತ್ರಧಾರಿಗಳು ಸಕತ್ ರೀಲ್ಸ್ ಮಾಡಿದ್ದು, ಅಭಿಮಾನಿಗಳು ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ವಿಡಿಯೋ ವೈರಲ್ ಆಗಿದೆ ನೋಡಿ...
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಸದ್ಯ ತಂಗಿ ಪೂಜಾ ಮದುವೆಯ ಗೊಂದಲ ನಡೆಯುತ್ತಿದೆ. ಪೂಜಾಳ ಮದುವೆಗಾಗಿ ಲಕ್ಷ ಲಕ್ಷ ಹಣ ಹೊಂದಿಸಲು ಪರದಾಡುತ್ತಿದ್ದಾಳೆ. ಈ ಮದುವೆಯನ್ನು ಮಾಡದೇ ಇರುವಂತೆ ಕನ್ನಿಕಾ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾಳೆ. ತನ್ನ ಅಣ್ಣ ಆದಿಯ ತಲೆಗೆ ಭಾಗ್ಯ ಮತ್ತು ಆಕೆಯ ಕುಟುಂಬದ ವಿರುದ್ಧ ಇನ್ನಿಲ್ಲದಂಥ ಸುಳ್ಳುಗಳನ್ನು ಹೇಳಿ, ಅದನ್ನು ಆತ ನಂಬುವಂತೆ ಮಾಡಿದ್ದಾಳೆ. ಇದೇ ಕಾರಣಕ್ಕೆ ಆದಿ ಕೂಡ ಈ ಮದುವೆಯನ್ನು ನಿಲ್ಲಿಸಲು ತಂತ್ರ ರೂಪಿಸುತ್ತಿದ್ದಾನೆ. ಕಿಶನ್ ಮತ್ತು ಪೂಜಾ ಮದುವೆಗೆ ಹಣ ಹೊಂದಿಸಲು ಸಾಧ್ಯವಾಗದ ಕಾರಣ, ಖುದ್ದು ಪೂಜಾ ಮತ್ತು ಮಾವ ಕಿಶನ್ ಮನೆಗೆ ಹೋಗಿ ಅಷ್ಟು ಹಣ ಹೊಂದಿಸೋದು ಕಷ್ಟ. ಆದ್ದರಿಂದ ಮದುವೆ ನಿಲ್ಲಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಮುಂದೇನಾಗುತ್ತದೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ಭಾಗ್ಯ ಮತ್ತು ಆದಿ ಜೋಡಿಯಾಗಲಿ ಎಂದು ಹಾರೈಸ್ತಿರೋ ಅಭಿಮಾನಿಗಳು ಮದ್ವೆ ಯಾವಾಗ ಕೇಳ್ತಿದ್ದಾರೆ.
ಸೀರಿಯಲ್ ಕಥೆ ಏನೇ ಇರಲಿ... ಇದರ ನಡುವೆಯೇ, ಭಾಗ್ಯ ಮತ್ತು ತನ್ವಿ ಸದಾ ರೀಲ್ಸ್ ಮಾಡುತ್ತಲೇ ಸಕತ್ ಖುಷಿಯಾಗಿರುತ್ತಾರೆ. ಭಾಗ್ಯಲಕ್ಷ್ಮಿಯ ಪಾತ್ರಧಾರಿ ಸುಷ್ಮಾ ಕೆ.ರಾವ್. ಇವರ ನಿರೂಪಣಾ ಶೈಲಿ ಟಿ.ವಿ. ವೀಕ್ಷಕರಿಗೆ ಚಿರಪರಿಚಿತ. ಚಿಕ್ಕಮಗಳೂರಿನ ಕೊಪ್ಪ ಸುಷ್ಮಾ ಅವರು, ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.
ಸುಷ್ಮಾ ರಾವ್ ನಿರ್ದೇಶಕ ಪ್ರೀತಂ ಗುಬ್ಬಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಹಲವು ವರ್ಷಗಳ ಅವರಿಂದ ವಿಚ್ಛೇದನ ಪಡೆದರು. ಕಳೆದ ಹತ್ತು ವರ್ಷಗಳಿಂದ ವೈಯಕ್ತಿಕ ಕಾರಣಗಳಿಂದ ನಟನೆಯಿಂದ ದೂರವಿದ್ದಾರೆ. ಇನ್ನು ತನ್ವಿಯ ಬಗ್ಗೆ ಹೇಳುವುದಾದರೆ ಈಕೆಯ ರಿಯಲ್ ಹೆಸರು ಅಮೃತಾ ಗೌಡ. ಅಮೃತಾ ಗೌಡ ನಿಜ ಜೀವನದಲ್ಲೂ ಶಾಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಜುಕೇಶನ್ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಶಿಯಲ್ ಮೀಡಿಯಾದಲ್ಲೂ (social media) ಆಕ್ಟೀವ್ ಆಗಿದ್ದಾರೆ.
ಅಮೃತಾ ಹೆಚ್ಚಾಗಿ ತನ್ನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಹಾರ್ ಗೌಡ ಜೊತೆ, ಭಾಗ್ಯಲಕ್ಷ್ಮಿ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಗಳನ್ನು ಪಡೆದಿರುವ ಈ ಬಾಲಕಲಾವಿದೆ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ರೂ ಈಕೆಯ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದೀಗ ಸೀರಿಯಲ್ ಅಮ್ಮ-ಮಗಳ ರೀಲ್ಸ್ ನೋಡಿ ಮುಂದೊಂದು ದಿನ ನಾಯಕಿಯಾಗಿ ಕಾಣಿಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.
