Asianet Suvarna News Asianet Suvarna News

'ನಾನು ನಂದಿನಿ' ಹಾಡಿನ ನಾಗವಲ್ಲಿ ವರ್ಷನ್ ನೋಡಿದ್ದೀರಾ.. ಹೊಟ್ಟೆ ಹುಣ್ಣಾಗುವಷ್ಟು ನಗೋದು ಖಂಡಿತ

'ನಾನು ನಂದಿನಿ ಬೆಂಗ್ಳೂರು ಬಂದೀನಿ...' ಹಾಡು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಟ್ರೋಲ್‌, ಮೀಮ್ಸ್‌ಗಳು ಸಹ ಕಡಿಮೆಯೇನಿಲ್ಲ. ಹಾಗೆಯೇ 'ನಾನು ನಂದಿನಿ' ಹಾಡಿನ ನಾಗವಲ್ಲಿ ವರ್ಷನ್ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಜನ ಇದನ್ನು ನೋಡಿ ಬಿದ್ದೂ ಬಿದ್ದೂ ನಗ್ತಿದ್ದಾರೆ.

Bengaluru PG girl related nanu Nandini Viral song version in Nagavalli movie version Vin
Author
First Published Sep 17, 2023, 2:55 PM IST | Last Updated Sep 17, 2023, 3:01 PM IST

ಬೆಂಗಳೂರಿಗೆ ದೂರದ ಹಳ್ಳಿಯಿಂದ ಬಂದು ಪಿಜಿಯಲ್ಲಿ ಉಳಿಯುವ ಹೆಣ್ಣು  ಮಕ್ಕಳು ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ. ಪಿಜಿಯಲ್ಲಿ ಆಹಾರ ಸರಿ ಇಲ್ಲದೆ, ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲೀಷ್ ಬಾರದೇ ಏನೆಲ್ಲಾ ಹೇಗೆಲ್ಲಾ ಗೋಳಾಡುತ್ತಾರೆ ಎಂಬುದನ್ನು ಹಾಡೊಂದು ತೆರೆದಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ. ಅದುವೇ 'ನಾನು ನಂದಿನಿ ಬೆಂಗ್ಳೂರು ಬಂದೀನಿ...' ಹಾಡು. ಈ ಹಾಡು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಎಲ್ಲಿ ನೋಡಿದ್ರಲ್ಲಿ ಇದೇ ಹಾಡಿನ ಗುಂಗು. ಜನರು ಇದೇ ಸಾಂಗ್ ಬಳಸಿ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ.. ಟ್ರೋಲ್‌, ಮೀಮ್ಸ್‌ಗಳು ಸಹ ಕಡಿಮೆಯೇನಿಲ್ಲ. 

'ನಾನು ನಂದಿನಿ' ಹಾಡಿನ ನಾಗವಲ್ಲಿ ವರ್ಷನ್
ಹಾಗೆಯೇ 'ನಾನು ನಂದಿನಿ' ಹಾಡಿನ ನಾಗವಲ್ಲಿ ವರ್ಷನ್ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಜನ ಇದನ್ನು ನೋಡಿ ಬಿದ್ದೂ ಬಿದ್ದೂ ನಗ್ತಿದ್ದಾರೆ. ನಾಗವಲ್ಲಿ ನೃತ್ಯ ಮಾಡುತ್ತಾ ಮಾತನಾಡುವ ದೃಶ್ಯಕ್ಕೆ 'ನಾನು ನಂದಿನಿ' ಹಾಡನ್ನು ಸಿಂಕ್ ಮಾಡಲಾಗಿದ್ದು ಹೊಟ್ಟೆ  ಹುಣ್ಣಾಗುವಷ್ಟು ನಗು ತರಿಸುತ್ತದೆ. ವಿಷ್ಣುವರ್ಧನ್‌, ರಮೇಶ್, ಸೌಂದರ್ಯ ಅಭಿನಯಿಸಿರುವ ಸೀನ್‌ನ್ನು ಇಲ್ಲಿ ತೋರಿಸಲಾಗಿದೆ. ಇದಕ್ಕೆ ನಾನು ನಂದಿನಿ ಹಾಡು ಅಪ್ಲೈ ಮಾಡಲಾಗಿದೆ. ವೈರಲ್ ಆಗಿರೋ ವಿಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಬೆಂಕಿ ಎಡಿಟಿಂಗ್‌' ಎಂದಿದ್ದಾರೆ. ಮತ್ತೊಬ್ಬರು, 'ದೆವ್ವಕ್ಕೆ ಸ್ಪಲ್ಪ ರೆಸ್ಪೆಕ್ಟ್‌ ಕೊಡಿ' ಅಂದಿದ್ದಾರೆ. ಹೆಚ್ಚಿನವರು ಕಾಮೆಂಟ್‌ನಲ್ಲಿ ನಗುವ ಎಮೋಜಿಯನ್ನು ಸೆಂಡ್ ಮಾಡಿದ್ದಾರೆ.

ನಾನು ನಂದಿನಿ ಬೆಂಗ್ಳೂರು ಬಂದೀನಿ... ವಿಕಿಪೀಡಿಯಾ ಖ್ಯಾತಿಯ ವಿಕ್ಕಿ ಈ ಹಾಡು ಫುಲ್ ವೈರಲ್

ಅಂದ ಹಾಗೆ ಈ ಹಾಡನ್ನು ಕ್ರಿಯೇಟ್ ಮಾಡಿದವರು ವಿಕಿಪಿಡಿಯಾ ಖ್ಯಾತಿಯ ವಿಕ್ಕಿ (vicky)ಎಂಬುವವರು. ಸಾಮಾಜಿಕ ಜಾಲತಾಣ ಬಳಕೆ ಮಾಡುವ ಬಹುತೇಕರಿಗೆ ಇವರ ಪರಿಚಯ ಮಾಡಬೇಕಾಗಿಲ್ಲ. ಸಾಕಷ್ಟು ಹಾಸ್ಯದ ವೀಡಿಯೋಗಳನ್ನು ಇವರು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದು, ಅವುಗಳಲ್ಲಿ ಕೆಲವೊಂದು ಸಾಕಷ್ಟು ವೈರಲ್ ಕೂಡ ಆಗಿವೆ.

ವೀಡಿಯೋದಲ್ಲೇನಿದೆ. 
'ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ ಐಟಿ  ಕೆಲಸ ಮಾಡ್ತೀನಿ, ಊಟ ಸರಿ ಇಲ್ಲ ಅಂದ್ರೂನು ತಿಂತಿನಿ ಬಂದ ದುಡ್ಡೆಲ್ಲಾ ಮನೆಗೆ ಕಳಿಸ್ತೀನಿ, ಬಾರೆ ನಂದಿನಿ ಗೋಬಿ ತಿನಿಸ್ತೀನಿ ಬೇ ಬೇ ಬೇಡ, ಬಾರೆ ನಂದಿನಿ ಬೆಂಗಳೂರು ತೋರಿಸ್ತೀನಿ, ಓಹ್ ಬೇಡ ಓಹ್ ಬೇಡ, ಬಾರೆ ನಂದಿನಿ ಪೇಡ ತಿನ್ನಿಸ್ತೀನಿ, ಬೆ ಬೆ ಬೇಡ, ಬಾರೆ ನಂದಿನಿ ಪಿಕ್ಚರ್ ತೋರಿಸ್ತೀನಿ, ಬೇಡ ಬೇಡ, ನೋಡಮ್ಮ ಇಂಗ್ಲೀಷ್ ನೀನು ಕಲಿಬೇಕು,  ಇಲ್ಲ ಅಂದ್ರೆ ಐಟಿಲಿ ಕಷ್ಟ ಆಗುತ್ತೆ ಸರ್ ನಾನು ಕನ್ನಡ ಮೀಡಿಯಾಂನಲ್ಲಿ ಓದಿದ್ದೆ. ಅದಕ್ಕೆ ನನ್ನ ಇಂಗ್ಲೀಷ್ ಅಷ್ಟಕಷ್ಟೆ,  ಐ ಕ್ಯಾನ್ ಟ್ರೈ ಐ ಕ್ಯಾನ್ ಟಾಕ್, ಬಟ್ ವಾಟ್ ಐ ಸ್ಪೀಕ್ ಇಟ್ಸ್ ಬಟ್ಲರ್ ಇಂಗ್ಲೀಷ್'  ಇದು ಈ ಹಾಡಿನ ಲಿರಿಕ್ಸ್‌ ಆಗಿದೆ.

'ನಾನು ನಂದಿನಿ' ಹಾಡಿಗೆ ಕುಣಿದ ಸಾರಾ ಅಣ್ಣಯ್ಯ, ಅಮೃತಧಾರೆ ಸೀರಿಯಲ್ ಟೀಂ ಜೊತೆ ರೀಲ್ಸ್‌

ಈ ಹಾಡನ್ನು ಇಂಗ್ಲೀಷ್‌ನ ಐಮ್‌ ಬಾರ್ಬಿ ಗರ್ಲ್‌ (I'm a barbie girl) ಎಂಬ ಹಾಡಿನ ಟ್ಯೂನ್‌ನಲ್ಲಿ ಹಾಡಲಾಗಿದೆ. ಕೇಳಲು ನೋಡಲು ಎರಡರಲ್ಲೂ ಸೊಗಸಾಗಿರುವ ಈ ಹಾಡನ್ನು ಬೆಂಗಳೂರಿನಲ್ಲಿ ಕೆಲಸ ಮಾಡುವ ಪಿಜಿಯಲ್ಲಿದ್ದು ದುಡಿಯುವ ಲಕ್ಷಾಂತರ ಜನ ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಮೆಚ್ಚಿಕೊಂಡಿದ್ದಾರೆ. ವಿಕಿಪೀಡಿಯಾ ವಿಕ್ಕಿ (vickypedia) ಒಬ್ಬರು ಹಾಸ್ಯ ಪ್ರಧಾನವಾದ ಕಂಟೆಂಟ್ ಕ್ರಿಯೇಟರ್. ಅವರ ತಂಡದ ನಟನೆ ಕೂಡ ಸೂಪರ್ ಎನಿಸಿದೆ.  ಡಾಕ್ಟರ್ ಬ್ರೋ ಖ್ಯಾತಿಯ ಗಗನ್ ಕೂಡ ಈ ವೀಡಿಯೋ ನೋಡಿ ವಾವ್ ಅದ್ಭುತ್ ಎಂದು ಕಾಮೆಂಟ್ ಮಾಡಿದ್ದಾರೆ.  

Latest Videos
Follow Us:
Download App:
  • android
  • ios