Asianet Suvarna News Asianet Suvarna News

ಸಿನಿಮಾ ಬಿಡುಗಡೆ ಮುನ್ನವೆ ಬಾಹುಬಲಿಯನ್ನು ಕಟ್ಟಪ್ಪ ಕೊಂದ ರಹಸ್ಯ ಲೀಕ್ ಆಯ್ತು!

ಈ ವಾರ ಏ.28ರಂದು ಬಾಹುಬಲಿ -2 ಬಿಡುಗಡೆಯಾಗಲಿದೆ. ಚಿತ್ರ ನೋಡಿದ ಮೇಲೆ ಬಾಹುಬಲಿಯನ್ನು ಕೊಂದ ರಹಸ್ಯ ಗೊತ್ತಾಗಲಿದೆ ಎಂಬುವವರಿಗೆ ಸ್ವಲ್ಪ ಖುಷಿಯ ಸುದ್ದಿ. ಬಾಹುಬಲಿಯನ್ನು ಕೊಂದ ರಹಸ್ಯ ಈಗಾಗಲೆ ಹೈದರಾಬಾದ್'ನಾದ್ಯಂತ ಹರಿದಾಡುತ್ತಿದೆ.

Bahubali 2 movie story LEAKED mystery why Kattappa killed
  • Facebook
  • Twitter
  • Whatsapp

ಹೈದರಾಬಾದ್(ಏ.24): ಬಾಹುಬಲಿ-1 ಚಿತ್ರ ಬಿಡುಗಡೆಯಾದಾಗಿನಿಂದ ಚಿತ್ರದ ಪ್ರಮುಖ ಪಾತ್ರಧಾರಿ ಹಾಗೂ ನಿಷ್ಠಾವಂತನಾದ ಕಟ್ಟಪ್ಪ ಏಕೆ ಬಾಹುಬಲಿಯನ್ನು ಕೊಂದ ಎಂಬ ಪ್ರಶ್ನೆ ಚಿತ್ರ ನೋಡಿದ ಎಲ್ಲರಿಗೂ ಕಾಡುತ್ತಲೆ ಇದೆ.

ಈ ವಾರ ಏ.28ರಂದು ಬಾಹುಬಲಿ -2 ಬಿಡುಗಡೆಯಾಗಲಿದೆ. ಚಿತ್ರ ನೋಡಿದ ಮೇಲೆ ಬಾಹುಬಲಿಯನ್ನು ಕೊಂದ ರಹಸ್ಯ ಗೊತ್ತಾಗಲಿದೆ ಎಂಬುವವರಿಗೆ ಸ್ವಲ್ಪ ಖುಷಿಯ ಸುದ್ದಿ. ಬಾಹುಬಲಿಯನ್ನು ಕೊಂದ ರಹಸ್ಯ ಈಗಾಗಲೆ ಹೈದರಾಬಾದ್'ನಾದ್ಯಂತ ಹರಿದಾಡುತ್ತಿದೆ.

ಜನರಾಡುವ ರಹಸ್ಯ ಸುದ್ದಿ ಈಗಿದೆ 'ಶಿವಗಾಮಿಯಿಂದಲೆ ಬಾಹುಬಲಿಯನ್ನು ಕಟ್ಟಪ್ಪ ಸಾಯಿಸಿದ್ದು.ಬಾಹುಬಲಿ ವಿರುದ್ಧವಾಗಿ ಶಿವಗಾಮಿಗೆ ಬಲ್ಲಾಳ ದೇವ ಹಾಗೂ ಆತನ ತಂದೆ ಬಿಜ್ಜಳ ದೇವ ಸುಳ್ಳು ಹೇಳುತ್ತಾರಂತೆ. ಅದನ್ನು ನಂಬಿದ ಶಿವಗಾಮಿ,ಬಾಹುಬಲಿಯನ್ನು ಸಾಯಿಸುವಂತೆ ಕಟ್ಟಪ್ಪನಿಗೆ ಆದೇಶಸುತ್ತಾರಂತೆ. ಇದುವೇ ಬಾಹುಬಲಿಯನ್ನು ಕಟ್ಟಪ್ಪ ಸಾಯಿಸಲು ಪ್ರಮುಖ ಕಾರಣ.

ಆದರೆ ಇದು ಎಷ್ಟರ ಮಟ್ಟಿಗೆ ನಿಜವೋ ಎಂಬುದನ್ನು ಏ.28ರಂದು ಸಿನಿಮಾ ಬಿಡುಗಡೆಯಾದಾಗಲೆ ಕಾಯಬೇಕು. ಏಕೆಂದರೆ ಸಿನಿಮಾ ಪ್ರಪಂಚದಲ್ಲಿ ಗಾಸಿಪ್ ಸುದ್ದಿಗಳಿಗೆ ಬರವಿಲ್ಲ.  

Follow Us:
Download App:
  • android
  • ios