ಬ್ರೇಕ್ ಕೆ ಬಾದ್ ಅನುಷ್ಕಾ ಫಿಟ್'ನೆಸ್; ಮದುವೆ ನಂತ್ರ ಅನುಷ್ಕಾ ಫಿಟ್'ನೆಸ್ ಸೀಕ್ರೆಟ್ಸ್ ಇಲ್ಲಿದೆ

Anushka Sharma Fitness Secret
Highlights

ಹುಡುಗಿಯರು ಮದುವೆ ಆದ್ಮೇಲೆ ಸೋಮಾರಿಗಳಾಗ್ತಾರೆ, ಫಿಟ್‌'ನೆಸ್ ಮೈಂಟೇನ್ ಮಾಡಲ್ಲ ಅನ್ನೋ ಮಾತಿದೆ. ಆದರೆ ಅನುಷ್ಕಾ ಶರ್ಮಾ ಹೀಗಲ್ಲ. ತನ್ನ ಫಿಟ್‌'ನೆಸ್ ಜೊತೆಗೆ ಗಂಡ ವಿರಾಟ್ ಕೊಹ್ಲಿ ಫಿಟ್‌'ನೆಸ್ ಬಗ್ಗೆಯೂ ಕಾಳಜಿ ಮಾಡ್ತಾರೆ. ಇಂತಿಪ್ಪ ಅನುಷ್ಕಾಳ ಮದುವೆ ನಂತರದ ಫಿಟ್‌'ನೆಸ್ ಡೀಟೈಲ್ಸ್ ಇಲ್ಲಿದೆ.

ಯೋಗ, ಜಿಮ್, ಡಾನ್ಸ್ ಫಿಟ್‌'ನೆಸ್ ಸೀಕ್ರೆಟ್: ನೀಳ ಕಾಲಿನ ಸುಂದರಿ ಅನುಷ್ಕಾ ತನ್ನ ಫಿಟ್‌ನೆಸ್‌ ಅನ್ನು ಒಂಚೂರೂ ಕುಂದುಬರದಂತೆ ಮೈಂಟೇನ್ ಮಾಡಲು ಯೋಗ ಮುಖ್ಯ ಕಾರಣ. ದೇಹದ ಫ್ಲೆಕ್ಸಿಬಿಲಿಟಿಯನ್ನು ಹೆಚ್ಚಿಸುವಲ್ಲಿ ಯೋಗದ ಪಾತ್ರ ದೊಡ್ಡದು ಅನ್ನೋದು ಇವರ ಅನುಭವದ ಮಾತು. ಯೋಗ ಒಂದಿದ್ರೆ ಸಾಕು, ಜಿಮ್ ಎಲ್ಲ ಬೇಕೇ ಇಲ್ಲ ಅನ್ನೋ ಚೆಲುವೆ, ತಾನು ಮಾತ್ರ ಜಿಮ್ ಮಿಸ್ ಮಾಡಲ್ಲ. ವಾರದ ಎಲ್ಲ ದಿನ ಯೋಗ ಮಾಡಿದ್ರೆ ನಾಲ್ಕು ದಿನ ಜಿಮ್‌'ನಲ್ಲಿ ವರ್ಕೌಟ್ ಮಾಡ್ತಾರೆ. ತೂಕ ಕಡಿಮೆ ಮಾಡಿಕೊಳ್ಳೋದು ಹಾಗೂ ಶಕ್ತಿ ಹೆಚ್ಚಿಸಿಕೊಳ್ಳೋದು ಈ ವರ್ಕೌಟ್‌'ನಿಂದ ಇವರಿಗೆ ಸಾಧ್ಯ ಆಗ್ತಿದೆಯಂತೆ. ಶೂಟಿಂಗ್ ಇಲ್ಲಾಂದ್ರೆ ವಾಕಿಂಗ್, ಜಾಕಿಂಗ್‌ ಅನ್ನೂ ಮಾಡ್ತಾರೆ.

ಜಂಕ್‌ಫುಡ್ ತಿನ್ನೋದೆ ಇಲ್ಲ: ‘ಹೆಲ್ದಿಯಾಗಿರ್ಬೇಕೋ, ಕರಿದ ಪದಾರ್ಥಗಳಿಗೆ ಗುಡ್‌ಬೈ ಹೇಳಿ’ ಅನ್ನೋದು ಅನುಷ್ಕಾ ನೇರ ಮಾತು. ಹಣ್ಣಿನ ಜ್ಯೂಸ್ ಜೊತೆಗೆ ಎಗ್‌'ವೈಟ್‌'ಅನ್ನು ಬೆಳಗಿನ ಉಪಹಾರಕ್ಕೆ ಸೇವಿಸ್ತಾರೆ. ಜೊತೆಗೆ ಚೀಸ್‌'ಟೋಸ್ಟ್ ಮತ್ತು ಎಳನೀರು ಕುಡಿಯೋ ಅಭ್ಯಾಸ. ಶೂಟಿಂಗ್ ಹತ್ರ ಇದ್ರೆ ಮಧ್ಯಾಹ್ನ ಮನೆ ಊಟ. ಚಪಾತಿ, ದಾಲ್, ಸಲಾಡ್ಸ್. ಸಂಜೆ ಹಣ್ಣು, ಪೋಷಕಾಂಶ ಇರುವ ಆಹಾರ ಸೇವಿಸಿದ್ರೆ, ರಾತ್ರಿ ಮಾತ್ರ 1 ಲೋಟ ಹಾಲು ಕುಡಿದು ಮಲಗ್ತಾರೆ.

loader