ಬೆಂಗಳೂರು (ಡಿ. 06): ಅನುಷ್ಕಾ ಶರ್ಮಾ -ವಿರಾಟ್ ಕೊಹ್ಲಿ ಮದುವೆಯಾಗಿ ಡಿ. 11 ಕ್ಕೆ ವರ್ಷ ತುಂಬುತ್ತದೆ. ಮೊದಲನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. 

'ಮದುವೆಯಾಗ್ಬೇಡಿ' ಒಂದೇ ವರ್ಷಕ್ಕೆ ವಿರುಷ್ಕಾ ಸುಸ್ತು!

ಈ ಮಧ್ಯೆ ಅನುಷ್ಕಾ ಶರ್ಮಾ ಗರ್ಭಿಣಿ ಎನ್ನುವ ಸುದ್ದಿ ಹರಿದಾಡುತ್ತಿದೆ. ಮದುವೆಯಾದ ವರ್ಷಕ್ಕೆ ಸಿಹಿ ಸುದ್ಧಿ ಕೊಡುತ್ತಿದ್ದಾರೆ ಎಂದು ತಮಾಷೆಯಾಗಿ ಕಾಲೆಳೆಯಲಾಗಿತ್ತು. ಆದರೂ ಅನುಷ್ಕಾ ತುಟಿಕ್ ಪಿಟಿಕ್ ಎಂದಿರಲಿಲ್ಲ. ಇದೀಗ ತಮ್ಮ ಪ್ರೆಗ್ನೆನ್ಸಿ ಬಗ್ಗೆ ಮೌನ ಮುರಿದಿದ್ದಾರೆ. 

ವಿರುಷ್ಕಾ ಜೋಡಿಯಿಂದ ಶೀಘ್ರದಲ್ಲೇ ಸಿಹಿ ಸುದ್ದಿ..!

ಯಾವಾಗಲೂ ಜನ ವದಂತಿಗಳನ್ನು ಹಬ್ಬಿಸುತ್ತಲೇ ಇರುತ್ತಾರೆ. ನಾನು ಪ್ರಗ್ನೆಂಟ್ ಎಂಬೆಲ್ಲಾ ವದಂತಿಗಳೆಲ್ಲಾ ’ಸಿಲ್ಲಿ’ ಎಂದಿದ್ದಾರೆ. ಇಂತಹ ವಿಚಾರಗಳನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ. ತಿಂಗಳು ಕಳೆದಂತೆ ಗೊತ್ತಾಗುತ್ತದೆ. ಯಾರು ಏನೇ ವದಂತಿ ಹಬ್ಬಿಸಬಹುದು, ಬರೆದುಕೊಳ್ಳಬಹುದು ಆದರೆ ಅವೆಲ್ಲ ಸುಳ್ಳು. ಅವರೇ ಫೂಲ್ ಆಗುತ್ತಾರೆ ಎಂದು ಅನುಷ್ಕಾ ಪ್ರತಿಕ್ರಿಯಿಸಿದ್ದಾರೆ. 

ಕೊಹ್ಲಿ ಬರ್ತ್‌ಡೇ-ದೇವರಿಗೆ ಧನ್ಯವಾದ ಅರ್ಪಿಸಿದ ಅನುಷ್ಕಾ ಶರ್ಮಾ!

ಈ ವರ್ಷ ಅನುಷ್ಕಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಪರಿ, ಸಂಜು, ಸುಯ್ ಧಾಗಾಮತ್ತು ,ಮೇಡ್ ಇನ್ ಇಂಡಿಯಾ ಚಿತ್ರಗಳು ಬಿಡುಗಡೆಯಾಗಿವೆ. ಜೀರೋ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ.