ಸಾಗುತ ದೂರ ದೂರ ಚಿತ್ರದಲ್ಲಿ ತಾಯಿಯ ಮಮತೆ, ಪ್ರೀತಿ ಮತ್ತು ವಾತ್ಸಲ್ಯದ ಕುರಿತ ಒಂದು ಹಾಡು ಇದೆ. ಅದನ್ನು ಅಮ್ಮಂದಿರ ದಿನದ ಅಂಗವಾಗಿ ಬಿಡುಗಡೆ ಮಾಡುವ ಉದ್ದೇಶದಿಂದ ಚಿತ್ರತಂಡ ಒಂದು ಪುಟ್ಟಕಾರ್ಯಕ್ರಮ ಆಯೋಜಿಸಿತು. ಇದಕ್ಕೆ ಅನುಪ್ರಭಾಕರ್‌ ಮುಖ್ಯ ಅತಿಥಿಯಾಗಿದ್ದರೆ, ಅವರ ತಾಯಿ ಹಿರಿಯ ನಟಿ ಗಾಯಿತ್ರಿ ಪ್ರಭಾಕರ್‌ ಸಪ್ರೈಸ್‌ ಗೆಸ್ಟ್‌ ಆಗಿ ಬಂದಿದ್ದರು. ಅಂದಹಾಗೆ ಇದು ‘ಸಾಗುತ ದೂರ ದೂರ’ ಚಿತ್ರದ ಮಾತು. ಇದರ ನಿರ್ದೇಶಕ ರವಿತೇಜ.

’ಸ್ನೇಹಲೋಕ’ ಚೆಲುವೆ ಅನು ಪ್ರಭಾಕರ್ ಕಲರ್‌ಫುಲ್ ಫೋಟೋಗಳು

ಹರಿಣಿ, ಜಾನ್ವಿಜ್ಯೋತಿ, ಮಹೇಶ್‌, ಮಾ.ಆಶಿಕ್‌, ದೀಕ್ಷಿತ್‌ ಶೆಟ್ಟಿ, ಕುಮಾರ್‌ ನವೀನ್‌ ಅವರು ಚಿತ್ರದ ಮುಖ್ಯ ಕಲಾವಿದರು. ನಿರ್ದೇಶಕ ಪವನ್‌ ಒಡೆಯರ್‌ ಪತ್ನಿ ಅಪೇಕ್ಷಾ ಪುರೋಹಿತ್‌ ನಟಿಸಿದ್ದಾರೆಂಬುದು ಚಿತ್ರದ ಮುಖ್ಯ ಅಂಶಗಳಲ್ಲಿ ಒಂದು. ಇನ್ನೂ ಅಮ್ಮನ ಕುರಿತ ಮಾಡಿರುವ ಹಾಡಿಗೆ ಮಣಿಕಾಂತ್‌ ಕದ್ರಿ ಅವರು ಸಂಗೀತ ನೀಡಿದ್ದಾರೆ. ‘ಹಾಡು ತುಂಬಾ ಚೆನ್ನಾಗಿ ಬಂದಿದೆ. ಇದನ್ನು ಕೇಳಿದ ಮೇಲೆ ಬಿಡುಗಡೆ ಮಾಡಲೇ ಬೇಕು ಅನಿಸಿತು. ತಾಯಿ ಪ್ರೀತಿಗೆ ಕೊನೆ ಇಲ್ಲ. ನಾನು ಈ ಹಂತಕ್ಕೆ ಬೆಳೆದು ಬಂದಿದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ತಾಯಿ. ಅವರು ಕೊಟ್ಟಪ್ರೀತಿಯೇ ನಾನು’ ಎನ್ನುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದು ಅನುಪ್ರಭಾಕರ್‌ ಅವರು. ಅಮಿತ್‌ ಪೂಜಾರಿ ಈ ಚಿತ್ರದ ನಿರ್ಮಾಪಕರು. ಈ ಸಿನಿಮಾ ಗೆದ್ದರೆ ಮುಂದೆ ಒಳ್ಳೆಯ ಚಿತ್ರಗಳನ್ನು ಮಾಡುವ ಆಸೆ ಇದೆ ಎಂದು ನಿರ್ಮಾಪಕರು ಹೇಳಿಕೊಂಡರು. ಅಭಿಮಾನಿ ಹೆಸರಿನಲ್ಲಿ ಅನುಪ್ರಭಾಕರ್‌ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕಾಗಿ ಕಾರ್ಯಕ್ರಮಕ್ಕೆ ಬುರ್ಕಾ ತೊಟ್ಟು ಬಂದಿದ್ದು ಗಾಯಿತ್ರಿ ಪ್ರಭಾಕರ್‌ ಎಂಬುದು ವೇದಿಕೆಗೆ ಬರುವ ಮುನ್ನವೇ ಗೊತ್ತಾಯಿತು.

ಯಶ್ ಸ್ಟಾರ್‌ ಆಗ್ತಾರೆ: ದಶಕದ ಹಿಂದೆಯೇ ಭವಿಷ್ಯ ನುಡಿದಿದ್ದ ನಟಿ!

ಕಣ್ಣಿಗೆ ಗ್ಲಿಸಿರನ್‌ ಹಾಕಿಕೊಂಡು ನಟಿಸುವ ದೃಶ್ಯದಲ್ಲಿ ಬ್ಯುಸಿ ಇದ್ದೆ. ನಿರ್ದೆಶಕರು ಇದರ ಪರಿಕಲ್ಪನೆ ಹೇಳಿದಾಗ ಅವಳನ್ನು ನೋಡಬೇಕೆಂಬ ಬಯಕೆಯಿಂದ ದೇವನಹಳ್ಳಿಯಿಂದ ಬಂದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಗಾಯಿತ್ರಿಪ್ರಭಾಕರ್‌ ಹಾರೈಸಿದರು. ಹರಿಣಿ ಅವರು ಇಲ್ಲಿ ಅಮ್ಮನಾಗಿ ನಟಿಸಿದ್ದಾರೆ. ಬದುಕಿದ್ದಾಗ ತಾಯಿ ಬೆಲೆ ತಿಳಿಯುವುದಿಲ್ಲ. ಅವರು ಹೋದಾಗ ಫೋಟೋ ಹಾಕಿ ಪೂಜೆ ಮಾಡುವುದರಲ್ಲಿ ಯಾವ ಅರ್ಥವು ಇರುವುದಿಲ್ಲ. ಹೀಗಾಗಿ ಇದ್ದಾಗಲೇ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳುವ ಮೂಲಕ ತಾಯಿಯ ಮಮತೆಯನ್ನು ನೆನೆದಿದ್ದು ಲಹರಿ ವೇಲು ಅವರು. ಆ ನಂತರ ಎಲ್ಲರು ಚಿತ್ರದ ಕುರಿತು ಮಾತನಾಡಿದರು.