ಅಂಜನಿಪುತ್ರ ಸಿನಿಮಾ ಪವರ್ ಸ್ಟಾರ್ ಸಿನಿಮಾ ಕೆರಿಯರ್ ನಲ್ಲಿ 400 ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಕರ್ನಾಟಕದ್ಯಾಂತ ಎಲ್ಲಾ ಚಿತ್ರಮಂದಿರಗಲ್ಲಿ ಅಂಜನಿಪುತ್ರ ಸಿನಿಮಾ ಜಾತ್ರೆ ನಡೆಯುತ್ತಿದೆ. 

ಪುನೀತ್ ರಾಜ್ ಕುಮಾರ್ ಸಿನಿಮಾ ಕೆರಿಯರ್'ನಲ್ಲಿ ಅಂಜನಿಪುತ್ರ ಹೊಸ ರೆಕಾರ್ಡ್​ ಮಾಡಿದೆ. ಪವರ್ ಸ್ಟಾರ್ ಇತ್ತೀಚೆಗೆ ಬಂದ ಸಿನಿಮಾಗಳ ಸಕ್ಸಸ್ ಹಿಂದಿದೆ ಒಂದು ಇಂಟ್ರಸ್ಟ್ರಿಂಗ್ ಕಥೆ.

Add Asianetnews Kannada as a Preferred SourcegooglePreferred

ಪುನೀತ್ ರಾಜ್ ಕುಮಾರ್ ಪ್ರತಿ ಸಿನಿಮಾ ರಿಲೀಸ್ ದಿನ ಆನಂದ್ ರಾವ್ ಸರ್ಕಲ್ ಬಳಿ ಇರುವ ಗಣೇಶ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುತ್ತಾರೆ. ನಂತರ ಪುನೀತ್ ಹೋಗುವುದು ಮೆಜೆಸ್ಟಿಕ್​ ನಲ್ಲಿರುವ ಅಣ್ಣಮ್ಮ ದೇವಸ್ಥಾನಕ್ಕೆ.ಅಲ್ಲಿ ಕೂಡ ಪುನೀತ್ ವಿಶೇಷ ಪೂಜೆ ಮಾಡಿಸುತ್ತಾರೆ.

ಇನ್ನು ರಾಜ್ ಕುಟುಂಬದ ಸಿನಿಮಾ ಸಕ್ಸಸ್ ಸೀಕ್ರೆಟ್ ಅಂದ್ರೆ ಅಣ್ಣಾವ್ರ ಕಾಲದಿಂದಲೂ, ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರ ಪ್ರಾಜೆಕ್ಟ್ ರೂಮ್ ಪೂಜೆ ಮಾಡುವುದು. ಈ ಪದ್ಧತಿಯನ್ನ ಪುನೀತ್ ಪ್ರತಿ ಸಿನಿಮಾ ರಿಲೀಸ್ ಆದಾಗ ಪ್ರಸನ್ನ ಚಿತ್ರಮಂದಿರದ ಪ್ರಾಜೆಕ್ಟ್ ರೂಮ್ ಪೂಜೆ ಮಾಡ್ತಾರೆ.

400 ಚಿತ್ರಮಂದಿರಗಳಲ್ಲಿಅಂಜನಿಪುತ್ರಜಾತ್ರೆ

ಅಂಜನಿಪುತ್ರ ಸಿನಿಮಾ ಪವರ್ ಸ್ಟಾರ್ ಸಿನಿಮಾ ಕೆರಿಯರ್ ನಲ್ಲಿ 400 ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಕರ್ನಾಟಕದ್ಯಾಂತ ಎಲ್ಲಾ ಚಿತ್ರಮಂದಿರಗಲ್ಲಿ ಅಂಜನಿಪುತ್ರ ಸಿನಿಮಾ ಜಾತ್ರೆ ನಡೆಯುತ್ತಿದೆ. ಎಲ್ಲ ಚಿತ್ರಮಂದಿರಗಳಲ್ಲಿ ಐದು ಶೋನಂತೆ ತುಂಬಿದ ಪ್ರದರ್ಶನಗೊಳ್ಳುತ್ತಿರುವ ಅಂಜನಿಪುತ್ರ ಮೊದಲ ದಿನವೇ ಬರೋಬ್ಬರಿ 8 ಕೋಟಿ ಕಲೆಕ್ಷನ್ ಆಗುವ ಸೂಚನೆ ಸಿಕ್ಕಿದೆ.

ಅದೇ ರೀತಿ ಗಾಂಧಿನಗರದಲ್ಲಿರುವ ತ್ರಿವೇಣಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು. ಪ್ರಸನ್ನ ನಂತರ ಪವರ್ ಸ್ಟಾರ್ ತ್ರಿವೇಣಿ ಚಿತ್ರಮಂದಿರಕ್ಕೆ ಭೇಟಿ ಅಭಿಮಾನಿಗಳ ಜೊತೆ ಕೆಲ ಹೊತ್ತು ಸಿನಿಮಾ ವೀಕ್ಷಿಸಿದರು. ಪುನೀತ್'ಗೆ ನಿರ್ದೇಶಕ ಹರ್ಷ ಸಾಥ್ ನೀಡಿದರು.