ಮದುವೆಗೆ ಬಂದ ಅನಂತ್ ಅಂಬಾನಿಯ 25 ಕುಚಿಕು ಗೆಳೆಯರಿಗೆ ಸಿಕ್ಕಿದೆ ಕೋಟಿ ಮೌಲ್ಯದ ಗಿಫ್ಟ್!

ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನಡೆದಿದೆ. ಮದುವೆಗೆ ಆಗಮಿಸಿದ ತನ್ನ 25 ಗೆಳೆಯರಿಗೆ ಅನಂತ್ ಅಂಬಾನಿ ವಿಶೇಷ ಕೋಟಿ ಮೌಲ್ಯದ ಗಿಫ್ಟ್ ನೀಡಿದ್ದಾರೆ ಎಂದು ವರದಿಯಾಗಿದೆ.

anant-ambani-gifted-watch-worth-crores-to-25 friends mrq

ಮುಂಬೈ: ಮಳೆ ನಿಂತರೂ ಮಳೆಹನಿ ನಿಲ್ಲಲ್ಲ ಎಂಬಂತೆ ಅನಂತ್ ಅಂಬಾನಿ ಮದುವೆ ಮುಗಿದ್ರೂ ವಿವಾಹ ನಂತರದ ಕಾರ್ಯಕ್ರಮಗಳು ಇನ್ನು ನಡೆಯುತ್ತಲಿವೆ. ಜುಲೈ 12ರ ಶುಕ್ರವಾರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನಡೆದಿದ್ದು, ಇದಕ್ಕೆ ಬಾಲಿವುಡ್ ತಾರೆಯರು, ಕ್ರಿಕೆಟಿಗರು ಸೇರಿದಂತೆ ದೇಶ-ವಿದೇಶದ ಗಣ್ಯರು ಭಾಗಿಯಾಗಿದ್ದರು. ಜುಲೈ 13ರಂದು ಆಶೀರ್ವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಇದೀಗ ಮದುವೆ ನಂತರದ ಕಾರ್ಯಕ್ರಮಗಳು ಶುರುವಾಗಿವೆ. 

ಅಂಬಾನಿ ಕುಟುಂಬ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ಕಾಶಿ ವಿಶ್ವನಾಥನ ಮುಂದೆ ಇರಿಸಿ ಪೂಜೆ ಮಾಡಿಸಿದ್ದರು. ನಂತರ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸೇರಿದಂತೆ ಪ್ರಮುಖ ಗಣ್ಯರ ಮನೆಗೆ ತೆರಳಿ ಆಹ್ವಾನ ನೀಡಲಾಗಿತ್ತು. ದೂರದ ಗಣ್ಯರಿಗೆ ಆಹ್ವಾನ ನೀಡಿ, ಅವರಿಗೆ ಬರುವ ವ್ಯವಸ್ಥೆಯನ್ನು ಅಂಬಾನಿ ಕುಟುಂಬವೇ ಮಾಡಿದೆ. ಮದುವೆಗೆ ಆಗಮಿಸಿದ ಅನಂತ್ ಅಂಬಾನಿಯ 25 ಕುಚಿಕು ಗೆಳೆಯರಿಗೆ ಕೋಟಿ ಕೋಟಿ ಮೌಲ್ಯದ ಗಿಫ್ಟ್ ಸಿಕ್ಕಿದೆ ಎಂದು ಏಷ್ಯಾನೆಟ್‌ನ್ಯೂಸ್‌ ಹಿಂದಿ ವರದಿ ಮಾಡಿದೆ. 

1.5 ರಿಂದ 2 ಕೋಟಿ ರೂ. ಮೌಲ್ಯದ ವಾಚ್!

ದುಬಾರಿ ಬೆಲೆಯ ಗಿಫ್ಟ್ ನೀಡಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ವರದಿಗಳ ಪ್ರಕಾರ, ವರ  ಅನಂತ್ ತನ್ನ 25 ಅತ್ಯಾಪ್ತರಿಗೆ ಲಿಮಿಟೆಡ್ ಎಡಿಷನ್ Audemard Piguet ಕೈಗಡಿಯಾರ ನೀಡಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ಆರ್ಡರ್ ಕೊಟ್ಟು ಒಟ್ಟು 25 ವಾಚ್‌ಗಳನ್ನು ತರಸಲಾಗಿತ್ತು. ಒಂದೊಂದು ವಾಚ್ ಬೆಲೆ 1.5 ರಿಂದ 2 ಕೋಟಿ ರೂಪಾಯಿ ಆಗಿದೆ ಎನ್ನಲಾಗಿದೆ. ಅಂಬಾನಿ ಕುಟುಂಬದ ಸೂಚನೆಯ ಮೇರೆಗೆ ವಿಶೇಷವಾಗಿ ಈ ವಾಚ್‌ಗಳನ್ನು ತಯಾರಿಸಲಾಗಿದೆ ಎಂದು ವರದಿಯಾಗಿದೆ. 

ದೋ ಟಕೀಲ ಶಾಟ್‌ ಪ್ಲೀಸ್: ಅಂಬಾನಿ ಮದ್ವೆಯಲ್ಲಿ ಟಕೀಲ ಕೇಳ್ತಿರುವ ಪಾಂಡ್ಯ ವೀಡಿಯೋ ವೈರಲ್

18 ಕ್ಯಾರಟ್ ಚಿನ್ನದಿಂದ ಈ ವಾಚ್ ತಯಾರಿಸಲಾಗಿದೆ. ಈ ವಾಚ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಮೂಲಗಳ ಪ್ರಕಾರ ಈ ವಿಶೇಷ ಕೈಗಡಿಯಾರವನ್ನು ಮಿಜಾನ್ ಜಾಫರಿ, ವೀರ್ ಪಹಾಡಿಯಾ, ಶಿಖರ್ ಫಹಾಡಿಯಾ, ಶಾರೂಖ್‌ ಖಾನ್, ರಣ್‌ವೀರ್ ಸಿಂಗ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಅತ್ಯಾಪ್ತರಿಗೆ ಮಾತ್ರ ನೀಡಲಾಗಿದೆ. 

ಚಿತ್ರರಂಗದ ತಾರೆಗಳ ಕಲರವ

ಅಂಬಾನಿ ಮದುವೆ ಸಮಾರಂಭದಲ್ಲಿ ಚಿತ್ರರಂಗದ ಕಲಾವಿದರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್, ಅನನ್ಯಾ ಪಾಂಡೆ, ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ರಣ್‌ಬೀರ್ ಕಪೂರ್, ಅಜಯ್ ದೇವಗನ್, ಶಾರೂಖ್ ಖಾನ್, ಆಲಿಯಾ ಭಟ್, ಟೈಗರ್ ಶ್ರಾಫ್, ಅಮಿತಾಬ್ ಬಚ್ಚನ್, ಅರ್ಜುನ್ ಕಪೂರ್, ಸಲ್ಮಾನ್ ಖಾನ್, ರಜನಿಕಾಂತ್, ಮಹೇಶ್ ಬಾಬು, ವೆಂಕಟೇಶ್, ಯಶ್ ಸೇರಿದಂತೆ ಹಲವು ಕಲಾವಿದರು ಮದುವೆಯಲ್ಲಿ ಭಾಗಿಯಾಗಿದ್ದರು.

ಅಂಬಾನಿ ಮಧ್ಯಮ ವರ್ಗದ ಕುಟುಂಬವಾದರೆ.. ಅನಂತ್-ರಾಧಿಕಾ ಮದುವೆ ಹೇಗಿರುತ್ತೆ ಗೊತ್ತಾ? AI ಮ್ಯಾಜಿಕ್ ನೋಡಿ ಜನತೆ ಶಾಕ್

anant-ambani-gifted-watch-worth-crores-to-25 friends mrq

Latest Videos
Follow Us:
Download App:
  • android
  • ios