MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • ಅಂಬಾನಿ ಮಧ್ಯಮ ವರ್ಗದ ಕುಟುಂಬವಾದರೆ.. ಅನಂತ್-ರಾಧಿಕಾ ಮದುವೆ ಹೇಗಿರುತ್ತೆ ಗೊತ್ತಾ? AI ಮ್ಯಾಜಿಕ್ ನೋಡಿ ಜನತೆ ಶಾಕ್

ಅಂಬಾನಿ ಮಧ್ಯಮ ವರ್ಗದ ಕುಟುಂಬವಾದರೆ.. ಅನಂತ್-ರಾಧಿಕಾ ಮದುವೆ ಹೇಗಿರುತ್ತೆ ಗೊತ್ತಾ? AI ಮ್ಯಾಜಿಕ್ ನೋಡಿ ಜನತೆ ಶಾಕ್

ಮುಕೇಶ್ ಅಂಬಾನಿ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಾಗಿದ್ದರೆ ಮಗನ ಮದುವೆಯನ್ನು ಸರಳವಾಗಿ ಮಾಡಿದರೆ ಹೇಗಿರುತ್ತೆ ಗೊತ್ತಾ? AIನಲ್ಲಿ ಮೂಡಿಬಂದ ಫೋಟೋಗಳನ್ನು ನೋಡಿದ್ರೆ ನಿಮಗೆ ಆಶ್ಚರ್ಯವಾಗುತ್ತದೆ.

3 Min read
Mahmad Rafik
Published : Jul 14 2024, 12:27 PM IST
Share this Photo Gallery
  • FB
  • TW
  • Linkdin
  • Whatsapp
117

ಶ್ರೀಮಂತ ಕುಟುಂಬದ ಕುಡಿ ಅನಂತ್ ಅಂಬಾನಿ ಮದುವೆ ಜುಲೈ 12ರಂದು ನಡೆದಿದ್ದು, ಈ ವಿವಾಹಕ್ಕಾಗಿ ಕುಟುಂಬ 5 ಸಾವಿರ ಕೋಟಿ ಅಧಿಕ ಹಣ ಖರ್ಚು ಮಾಡಿದೆ. ಉದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಜೊತೆ ಅನಂತ್ ಅಂಬಾನಿ ಮದುವೆ ನಡೆದಿದೆ.

217

ಜುಲೈ 15ರಂದು ಮುಂಬೈನ ಜಿಯೋ ಕಲ್ಚರಲ್ ಸೆಂಟರ್‌ನಲ್ಲಿ ವಿವಾಹ ಆರತಕ್ಷತೆ ನಡೆಯಲಿದೆ. ಮದುವೆಯಲ್ಲಿ ಚಿತ್ರರಂಗದ ಕಲಾವಿದರು, ರಾಜಕೀಯ ಮುಖಂಡರು, ಕ್ರಿಕೆಟಗರು ಸೇರಿದಂತೆ ವಿದೇಶಿ ಗಣ್ಯರು ಸಹ ಭಾಗವಹಿಸಿದ್ದರು.  ರಜನಿಕಾಂತ್, ನಯನತಾರಾ, ಅಟ್ಲಿ, ಸಲ್ಮಾನ್ ಖಾನ್, ಶಾರುಖ್ ಖಾನ್, ರಣಬೀರ್ ಕಪೂರ್, ಕತ್ರಿನಾ, ಅಜಯ್ ದೇವಗನ್, ಜಾನ್ ಅಬ್ರಹಾಂ, ಯಶ್, ರಶ್ಮಿಕಾ ಮಂದಣ್ಣ, ಮಹೇಶ್ ಬಾಬು, ವೆಂಕಟೇಶ್ ಸೇರಿದಂತೆ ಇಡೀ ಚಿತ್ರರಂಗ ಮದುವೆಗೆ ಹಾಜರಾಗಿತ್ತು. 

317

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಈ ವರ್ಷದ ಅದ್ಧೂರಿ ವಿವಾಹ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಜಗತ್ತಿನ ಅದ್ಧೂರಿ ಮದುವೆಗಳಲ್ಲಿ ಇದು ಸಹ ಒಂದಾಗಲಿದೆ. ಮಾರ್ಚ್‌ನಿಂದಲೇ ಮದುವೆ ಸಮಾರಂಭ ಶುರುವಾಗಿದೆ.

417

ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮಗನಾಗಿ ಅನಂತ್ ಮದುವೆಯಾಗುತ್ತಿದ್ದಾರೆ. ಒಂದು ವೇಳೆ ಅಂಬಾನಿ ಮಧ್ಯಮ ವರ್ಗದ ಕುಟುಂಬದವರಾಗಿದ್ದರೆ, ಎಲ್ಲ ಮದುವೆಗಳಂತೆ ಇದು ಸಹ ಒಂದಾಗಿತ್ತು. ಇದು ಸರಳ ಮದುವೆಯಾಗಿದ್ರೆ ಫೋಟೋಗಳು ಹೇಗಿರುತ್ತಿತ್ತು ಗೊತ್ತಾ? (Photo Credit- ಶಾಹಿದ್‌ ಎಸ್‌ಕೆ ಐ)

517

ಅಂಬಾನಿಯವರ ವಿವಾಹ ಸಮಾರಂಭವನ್ನು ಮೆಗಾಲೊಡಾನ್ ಕ್ರಿಯೇಟಿವ್ ಟೆಕ್ ಕಂಪನಿ ಮುಖ್ಯಸ್ಥ ``ಎಐ'' (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಶಾಹಿದ್ ಎಸ್‌ಕೆ ವಿನ್ಯಾಸಗೊಳಿಸಿದ್ದಾರೆ. ಶಾಹಿದ್ ಎಸ್‌ಕೆ ಲಿಂಕ್ಡ್ ಇನ್ ಖಾತೆಯಲ್ಲಿ ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. (Photo Credit- ಶಾಹಿದ್‌ ಎಸ್‌ಕೆ ಐ)

617

ವೈರಲ್ ಆಗಿರುವ ಫೋಟೋ ನೋಡಿದ ನೆಟ್ಟಿಗರು, ಸರಳ ಮದುವೆಗೆ ಫಿದಾ ಆಗಿದ್ದಾರೆ. ಹಲವು ಹಿಂದಿ ಸಿನಿಮಾಗಳ ಮದುವೆ ಲುಕ್‌ನಲ್ಲಿ ಅಂಬಾನಿ ಕುಟುಂಬ ಕಂಡು ಬಂದಿದೆ. ಫೋಟೋ ನೋಡಿದ ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. (photo credit- sahid sk AI)

717
photo credit- sahid sk AI

photo credit- sahid sk AI

ಈ AI ಚಿತ್ರಗಳನ್ನು 2006 ರ ಬಾಲಿವುಡ್ ಚಲನಚಿತ್ರ 'ವಿವಾಹ'ದ ಫೋಟೋಗಳನ್ನು ಆಧರಿಸಿ ರಚಿಸಿದ್ದಾರೆ. ಅಂಬಾನಿ ಕುಟುಂಬವನ್ನು ತುಂಬಾ ಸಹಜವಾಗಿ ಮಧ್ಯಮ ವರ್ಗದ ಕುಟುಂಬವನ್ನಾಗಿ ಮಾಡಿದರು. ವಿವಾಹ ಚಿತ್ರದಲ್ಲಿ ಶಾಹಿದ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. (photo credit- sahid sk AI)

817

AI ರಚಿಸಿದ ಈ ಫೋಟೋಗಳಲ್ಲಿ ಅಂಬಾನಿ ಕುಟುಂಬದ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಹಿಂದಿಯ ವಿವಾಹ ಸಿನಿಮಾ ನೋಡಿದವರಿಗೆ ಆ ಚಿತ್ರದ ಸನ್ನಿವೇಶಗಳು ಕಣ್ಮುಂದೆ ಬರುತ್ತವೆ.  (photo credit- sahid sk AI)

917
photo credit- sahid sk AI

photo credit- sahid sk AI

ವಧು ರಾಧಿಕಾ ಮರ್ಚೆಂಟ್ ಅವರನ್ನು ರೆಡಿ ಮಾಡಿಕೊಂಡು ನೀತಾ ಅಂಬಾನಿ ಎಲ್ಲರ ಮುಂದೆ ಕರೆದುಕೊಂಡು ಬರುವ ದೃಶ್ಯ ಎಐನಲ್ಲಿ ಈ ರೀತಿಯಾಗಿ ಮೂಡಿ ಬಂದಿದೆ.  (photo credit- sahid sk AI)

1017
photo credit- sahid sk AI

photo credit- sahid sk AI

ಇನ್ನು ವಧುವಿನ ಮದುವೆ ಬಟ್ಟೆಯನ್ನು ವರನ ತಂದೆ ಮುಕೇಶ್ ಅಂಬಾನಿ ಸಂಪ್ರದಾಯಬದ್ಧವಾಗಿ ಸ್ವೀಕರಿಸುವ ದೃಶ್ಯ ಇದಾಗಿದೆ.  (photo credit- sahid sk AI)

1117

ಇನ್ನು ಸರಳವಾಗಿ ಎಲ್ಲೋ ದೇವಸ್ಥಾನದಲ್ಲಿ ಅನಂತ್ ಮತ್ತು ರಾಧಿಕಾ ಪರಸ್ಪರವಾಗಿ ಹಾರ ಬದಲಿಸಿಕೊಳ್ಳುವ ರೊಮ್ಯಾಂಟಿಕ್ ಸನ್ನಿವೇಶ ಎಐನಲ್ಲಿ ಈ ರೀತಿಯಾಗಿ ಕಾಣಿಸುತ್ತದೆ.  (photo credit- sahid sk AI)

1217

ವಧುವನ್ನು ತವರಿನಿಂದ ಬೀಳ್ಕೊಡುವ ಸಂದರ್ಭದ ಚಿತ್ರ ಇದಾಗಿದೆ. ಎಐನಲ್ಲಿ ನೀತಾ ಅಂಬಾನಿ ಜೊತೆ ಶ್ಲೋಕಾ ಸಿಂಪಲ್ ಆಗಿ ಕಾಣಿಸುತ್ತಿದ್ದಾರೆ. ಇಲ್ಲಿ ಯಾವುದೇ ಆಭರಣಗಳ ಪ್ರದರ್ಶನ ಕಾಣಿಸುತ್ತಿಲ್ಲ.  (photo credit- sahid sk AI)

1317

ಮೊದಲ ಬಾರಿಗೆ ಹುಡುಗಿಯನ್ನು ಕರೆದುಕೊಂಡು ಬರುವ ದೃಶ್ಯ ಇದಾಗಿದೆ. ಮದುವೆ ಸಮಾರಂಭದಲ್ಲಿ ವಜ್ರಾಭರಣಗಳಲ್ಲಿಯೇ ಮುಳುಗಿರುವ ರಾಧಿಕಾರ ಈ ಸಿಂಪಲ್ ಲುಕ್ ಎಲ್ಲರಿಗೂ ಇಷ್ಟವಾಗುತ್ತಿದೆ.  (photo credit- sahid sk AI)

1417

ವರ ಅನಂತ್ ಅಂಬಾನಿ ಕುದುರೆ ಮೇಲೆ ಬಂದು ಸ್ವಾಗತಕ್ಕಾಗಿ ಕಾಯುತ್ತಿರುವ ದೃಶ್ಯ ಇದಾಗಿದೆ.  ಭಾರತದಲ್ಲಿ ಸಾಮಾನ್ಯವಾಗಿ ಕಾಣುವ ವರನ ಲುಕ್ ಚೆನ್ನಾಗಿ ಮೂಡಿ ಬಂದಿದೆ.  (photo credit- sahid sk AI)

1517

ಇನ್ನು ಅನಂತ್ ಮದುವೆಯ ಸಮಾರಂಭದಲ್ಲಿ ನೀತಾ ಅಂಬಾನಿ ನೃತ್ಯ ಮಾಡಿದ್ದಾರೆ. ಈ ದೃಶ್ಯವೂ ಎಐನಲ್ಲಿ ಮೂಡಿ ಬಂದಿದೆ. ಕುಟುಂಬಸ್ಥರ ಜೊತೆ ನೀತಾ ಅಂಬಾನಿ ಹೆಜ್ಜೆ ಹಾಕುವ ದೃಶ್ಯ ಇದಾಗಿದೆ.  (photo credit- sahid sk AI)

1617
photo credit- sahid sk AI

photo credit- sahid sk AI

ಉತ್ತರ ಭಾರತದ ಮದುವೆಗಳಲ್ಲಿ ವರ ಕುದುರೆ ಮೇಲೆ ಕುಳಿತು ಬರುತ್ತಿದ್ದರೆ, ಆತನ ಸಂಬಂಧಿಕರು ಮುಂದೆ ಡ್ಯಾನ್ಸ್ ಮಾಡುತ್ತಿರುತ್ತಾರೆ.  (photo credit- sahid sk AI)

1717
photo credit- sahid sk AI

photo credit- sahid sk AI

ಮದುವೆ ಬಳಿಕ ವರನ ಫೋಟೋಶೂಟ್ ಮಾಡಲಾಗುತ್ತದೆ. ನೀಲಿ ಬಣ್ಣದ ಸೂಟ್‌ನಲ್ಲಿ ಅನಂತ್ ಅಂಬಾನಿ ಮಿಂಚುತ್ತಿದ್ದಾರೆ.  (photo credit- sahid sk AI)

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅನಂತ್ ಅಂಬಾನಿ
ಮುಕೇಶ್ ಅಂಬಾನಿ
ನೀತಾ ಅಂಬಾನಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved