ಪರಃವಾ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ನಟಿಸಲೊಂದು ಸುವರ್ಣ ಅವಕಾಶ.

ಬೆಂಗಳೂರು: ಕಿರಿಕ್ ಪಾರ್ಟಿ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ತಮ್ಮ 'ಪರಂವಾ ಸ್ಟುಡಿಯೋ' ಮೂಲಕ ನಿರ್ಮಿಸುತ್ತಿರುವ '777 ಚಾರ್ಲಿ' ಚಿತ್ರದಲ್ಲಿ ನಟಿಸಲು ಅವಕಾಶವೊಂದಿದೆ.

ಕಿರಣ್ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ನಟಿಸಲು, ಚಿತ್ರ ತಂಡ ನಟ, ನಟಿಯರ ಹುಡುಕಾಟದಲ್ಲಿದ್ದು, ಆಸಕ್ತರು ತಮ್ಮ ಭಾವಚಿತ್ರ ಹಾಗೂ ವೀಡಿಯೋಗಳನ್ನು ಕಳುಹಿಸಬಹುದು.

ಈ ಬಗ್ಗೆ ಫೇಸ್‌ಬುಕ್ ಸ್ಟೇಟಸ್ ಹಾಕಿರುವ ರಕ್ಷಿತ್, 'contact@777charlie.com'ಗೆ ಮೇಲ್ ಮಾಡಬಹುದು ಎಂದಿದ್ದಾರೆ. ಅಥವಾ ಫೇಸ್‌ಬುಕ್ ಪೇಜ್ 777 Charlieಗೆ ಮೆಸೇಜ್ ಕಳುಹಿಸಬಹುದೆಂದು ತಿಳಿಸಲಾಗಿದೆ. ಅಂದಹಾಗೆ ಡಿ.31 ನಿಮ್ಮ ಪ್ರೊಫೈಲ್ ಕಳುಹಿಸಲು ಕಡೆಯ ದಿನ.

ಚಾರ್ಲಿ ನಾಯಿಯಾಗಿದ್ದು, ಈ ಶ್ವಾನದ ಮೇಲಿನ ಕಥಾ ಹಂದರ ಇರುವ ಚಿತ್ರವಿದೆ ಎಂದು ಹೇಳಲಾಗಿದೆ.