ಚೆಲುವಿನ ಚಿತ್ತಾರದ ಐಶೂ ಅಮೂಲ್ಯ ಕಲ್ಯಾಣ ತಯಾರಿ ಜೋರಾಗಿದೆ. ಅಮೂಲ್ಯ ಹಾಗು ಜಗದೀಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಅಮೂಲ್ಯ ಮೆಹಂದಿ ಕಾರ್ಯಕ್ರಮಕ್ಕೆ  ಗೋಲ್ಡನ್ ಸ್ಟಾರ್ ಗಣೇಶ್ ಅವರ ರಾಜರಾಜೇಶ್ವರಿನಗರದ ಮನೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮನೆಗೆ ಕಾಲಿಡುತ್ತಿದ್ದಂತೆ ಮೆಹಂದಿ ಕಾರ್ಯಕ್ರಮದ ಮಂಟಪ ಗಮನ ಸೆಳೆಯುತ್ತದೆ. ಮೆಹಂದಿ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ನಟಿಮಣಿರು ಭಾಗವಹಿಸಲಿದ್ದಾರೆ.  ಬರುವ ಎಲ್ಲಾ ಅತಿಥಿಗಳಿಗೆ ವಿಶೇಷ ಭೋಜನ ಹಾಗು ಚಾಟ್ಸ್  ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು(ಮ.10): ಚೆಲುವಿನ ಚಿತ್ತಾರದ ಐಶೂ ಅಮೂಲ್ಯ ಕಲ್ಯಾಣ ತಯಾರಿ ಜೋರಾಗಿದೆ. ಅಮೂಲ್ಯ ಹಾಗು ಜಗದೀಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಅಮೂಲ್ಯ ಮೆಹಂದಿ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ರಾಜರಾಜೇಶ್ವರಿನಗರದ ಮನೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮನೆಗೆ ಕಾಲಿಡುತ್ತಿದ್ದಂತೆ ಮೆಹಂದಿ ಕಾರ್ಯಕ್ರಮದ ಮಂಟಪ ಗಮನ ಸೆಳೆಯುತ್ತದೆ. ಮೆಹಂದಿ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ನಟಿಮಣಿರು ಭಾಗವಹಿಸಲಿದ್ದಾರೆ. ಬರುವ ಎಲ್ಲಾ ಅತಿಥಿಗಳಿಗೆ ವಿಶೇಷ ಭೋಜನ ಹಾಗು ಚಾಟ್ಸ್ ವ್ಯವಸ್ಥೆ ಮಾಡಲಾಗಿದೆ.

ಇನ್ನು ವರ ಜಗದೀಶ್ ಮನೆಯಲ್ಲೂ ಸಡಗರ ಕಳೆ ಕಟ್ಟಿದೆ. ಗಂಡಿನ ಮನೆಯಲ್ಲಿ ಚಪ್ಪರ ಶಾಸ್ತ್ರ ಮುಗಿದಿದೆ. 12ರಂದು ಅಂದರೆ ಶುಕ್ರವಾರ ಆದಿಚುಂಚನಗಿರಿಯಲ್ಲಿ ನಡೆಯುವ ಮದುವೆ ಶಾಸ್ತ್ರಗಳನ್ನ ಲಕ್ಷ್ಮೀಕಾಂತ್ ಭಟ್ ಶಾಸ್ತ್ರಿ ನಡೆಸಿಕೊಡಲಿದ್ದಾರೆ..

ಗಣೇಶ್ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ಮುಗಿದ ಬಳಿಕ ಸಂಜೆ, ಗಣೇಶ್ ಮನೆಯಲ್ಲಿ ಸಂಗೀತ ಸಂಜೆ ಹಮ್ಮಿಕೊಳ್ಳಲಾಗಿದೆ. ಇದರ ವಿಶೇಷತೆಎಂದರೆ ಪಂಜಾಬಿ ಶೈಲಿಯ ಡೋಲು ಕುಣಿತಕ್ಕೆ ಅಮೂಲ್ಯ ಹಾಗು ಜಗದೀಶ್ ಮಸ್ತ್ ಡ್ಯಾನ್ಸ್ ಮಾಡಲಿದ್ದಾರೆ. ಒಟ್ಟಿನಲ್ಲಿ ಅಮೂಲ್ಯ ಕಲ್ಯಾಣ ಕನ್ನಡ ಚಿತ್ರರಂಗದ ಅದ್ದೂರಿತನಕ್ಕೆ ಸಾಕ್ಷಿಯಾಗಲಿದೆ..