ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಅಮಿತಾಭ್ ಬಚ್ಚನ್ ಕವಿತೆ!
ಮಾರಣಾಂತಿಕ ಕೊರೋನಾ ವೈರಸ್ ಸೋಂಕನ್ನು ದೂರ ಮಾಡಲು ಅಮಿತಾಭ್ ಬಚ್ಚನ್ ಬರೆದ ಕವಿತೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಎಲ್ಲೇ ನೋಡಿದರು ಕೊರೋನಾ ಎಂಬ ಮಾತೇ ಕೇಳಿ ಬರುತ್ತಿದೆ. ಇದನ್ನು ತಪ್ಪಿಸಿ ಆರೋಗ್ಯವಾಗಿರಲು ಈಗಾಗಲೆ ಸಾಕಷ್ಟು ವೈದ್ಯರು, ಸಿನಿ ತಾರೆಯರು ಸಲಹೆ ನೀಡಿದ್ದಾರೆ. ಈ ನಡುವೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಬರೆದ ಸಾಲುಗಳು ವೈರಲ್ ಆಗುತ್ತಿದೆ.
ಅಮಲಿನ ಲೋಕ, ಮಾವನಿಗೆ ಮುಜುಗರ ತಂದ ಐಶ್ವರ್ಯಾ, ಪೋಟೋಸ್ ರಿವೀಲ್!
'ಎಲ್ಲರಿಗೂ ನಮಸ್ಕಾರ, ನಾನು ಅಮಿತಾಭ್ ಬಚ್ಚನ್, ಇಲ್ಲಿ ಕರೋನಾ ವೈರಸ್ ಸಂಬಂಧ ಹಲವಾರು ದಿನಗಳಿಂದ ಭಾರೀ ಚರ್ಚೆ, ನಷ್ಟ ಸಂಭವಿಸುತ್ತಿದೆ. ಅನೇಕರು ತಮ್ಮ ಮನೆಗೆ ಧಾವಿಸಿದ್ದಾರೆ, ಹಾಗೂ ಭಯಗೊಂಡಿದ್ದಾರೆ ಹಾಗೂ ಚಿಂತೆಗೀಡಾಗಿದ್ದಾರೆ. ಹೀಗಿರುವಾಗ ಇಂದು ಬೆಳಗ್ಗೆ ಈ ಕುರಿತು ಏನಾದರೂ ಮಾತನಾಡಬೇಕು ಎಂದು ನನಗೂ ಅನಿಸಿತು. ಹೀಗಾಗಿ ಸುಮ್ಮನೆ ಕುಳಿತುಕೊಂಡಿದ್ದಾಗ ಒಂದೆರಡು ಸಾಲು ಬರೆದಿದ್ದೇನೆ. ಇದನ್ನು ಕೊಡುಗೆಯಾಗಿ ನಿಮಗೆ ನೀಡಲಿಚ್ಛಿಸುತ್ತೇನೆ. ಅನೇಕರು ಈ ಕುರಿತು ನಾನಾ ಔಷಧಿ ಸೂಚಿಸುತ್ತಾರೆ. ಆದರೆ ಏನು ಮಾಡಬೇಕು? ಏನು ಮಾಡಬಾರದೆಂದು ಹೇಳುವವರಾರು?' ಎಂದು ಹೇಳುತ್ತಾ ಬಿಹಾರಿ ಭಾಷೆಯಲ್ಲಿ ಕವಿತೆ ಸಾಲುಗಳನ್ನು ಹೇಳಿದ್ದಾರೆ.
ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ವೈರಸ್ ಸದ್ಯ ವಿಶ್ವದಾದ್ಯಂತ ಹರಡುತ್ತಿದೆ. ಲಕ್ಷಾಂತರ ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡು, ಸಾವಿರಾರು ಮಂದಿ ಸಾವಿಗೀಡಾಗುತ್ತಿದ್ದಾರೆ. ಭಾರತದಲ್ಲಿ ಇದುವರೆಗೂ ಕೊರೋನಾ ವೈರಸ್‌ನಿಂದ ಇಬ್ಬರು ಬಲಿಯಾಗಿದ್ದಾರೆ. ಸೋಂಕಿತರನ್ನು ಐಸೋಲೇಷನ್ ವಾರ್ಡ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಅಷ್ಟೇ ಅಲ್ಲದೆ ಖ್ಯಾತ ಗಾಯಕ ನರೇಂದ್ರ ಚಂಚಲ್ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಕೊರೋನಾ ವೈರಸ್ ಬಗ್ಗೆ ಭಜನೆ ರೀತಿಯಲ್ಲಿ ಹೇಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.