ಇದೆ ನನ್ನ ಕೊನೆಯ ಚಿತ್ರ ವಾಗುವ ಸಾಧ್ಯತೆ ಇದೆ. ಇನ್ನುಮುಂದೆ ಯಾವುದೇ ರೀತಿಯಾದ  ಪೋಷಕ ಪಾತ್ರಗಳಲ್ಲಿ ತಾವು ನಟನೆ ಮಾಡುವುದಿಲ್ಲ ಎಂದು ನಟ ರೆಬೆಲ್ ಸ್ಟಾರ್ ಅಂಬರೀಶ್ ಹೇಳಿದ್ದಾರೆ. 

ಮಂಡ್ಯ: ‘ಅಂಬಿ ನಿಂಗ್‌ ವಯಸ್ಸಾಯ್ತೋ’ ಚಿತ್ರ ಆಲ್‌ಮೋಸ್ಟ್‌ ನನ್ನ ಕೊನೆಯ ಚಿತ್ರ ಆಗಬಹುದು ಎಂದು ನಟ ಅಂಬರೀಶ್‌ ಹೇಳಿದ್ದಾರೆ.

‘ಇದು ಆಲ್‌ಮೋಸ್ಟ್‌ ನನ್ನ ಕೊನೆಯ ಚಿತ್ರ. ಈ ಚಿತ್ರಕ್ಕಿಂತ ಒಳ್ಳೆಯ ಪಾತ್ರ ಬಂದರೆ ಮಾತ್ರ ನಟನೆ ಮಾಡುತ್ತೇನೆ. ಪೋಷಕ ಪಾತ್ರಗಳಲ್ಲಿ ಇನ್ನು ಮುಂದೆ ನಟಿಸುವುದಿಲ್ಲ. ನಾನು ನಿರ್ಮಾಪಕರ ನಟ. ನಿರ್ಮಾಪಕರಿಗೆ ಒಳ್ಳೆಯದಾಗಲಿ ಎಂದು ಸಿನಿಮಾ ಮಾಡುತ್ತೇನೆ. ನನಗೆ 66 ವರ್ಷವಾಗಿದೆ. ವಯಸ್ಸಿಗೆ ತಕ್ಕ ಹಾಗೆ ಪಾತ್ರ ಮಾಡುತ್ತೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ದುನಿಯಾ ವಿಜಿ ಪ್ರಕರಣದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಸಿನಿಮಾ ನಟರು ರೋಲ್‌ ಮಾಡೆಲ್‌ಗಳು. ನಮ್ಮನ್ನು ನೋಡಿ ಬೇರೆಯವರು ಅನುಕರಣೆ ಮಾಡುತ್ತಾರೆ. ಹೀಗಾಗಿ ಅತ್ಯಂತ ಎಚ್ಚರಿಕೆ ಹೆಜ್ಜೆಗಳನ್ನು ಇಡುವಂತೆ ಮೊನ್ನೆ ನ್ಯಾಯಾಧೀಶರು ಹೇಳಿದ್ದಾರೆ. 

ನಾನೂ ಇದೇ ಮಾತನ್ನು ಬೆಂಬಲಿಸುತ್ತೇನೆ ಎಂದರು. ದುನಿಯಾ ವಿಜಿ ಚಿಕ್ಕವರು. ನಾನು ಹಿರಿಯನಾಗಿ ಅವರಿಗೆ ಸಲಹೆ ನೀಡಿದ್ದೇನೆ. ನಾವು ಕೂಡ ರಾಜ್‌ಕುಮಾರ್‌ರಂತಹ ಹಿರಿಯ ನಟರನ್ನು ನೋಡಿಯೇ ಕಲಿತಿದ್ದು ಎಂದು ಅಂಬರೀಶ್‌ ಹೇಳಿದರು.