‘ಹೆಬ್ಬುಲಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಟಾಲಿವುಡ್ ನಟಿ ಅಮಲಾ ಪೌಲ್ 2014 ರಲ್ಲಿ ಖ್ಯಾತ ನಿರ್ದೇಶಕ ವಿಜಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರ ನಡುವೆ ಮನಸ್ತಾಪಗಳು ಬಂದು 2017 ರಲ್ಲಿ ವಿಚ್ಛೇದನ ಪಡೆದುಕೊಂಡರು.

 

ಸಿನಿ ಗಾಸಿಪ್ ಪ್ರಕಾರ ಅಮಲಾ ಪೌಲ್ ಇನ್ನೊಂದು ಮದುವೆಯಾಗುತ್ತಿದ್ದಾರೆ. ಆದರೆ ಇದೀಗ ಮ್ಯಾಟರ್ ರಿವರ್ಸ್ ಆಗಿದೆ. ಸ್ವತಃ ವಿಜಯ್ ಊಹಾಪೋಹ ಮಾತುಗಳಿಗೆ ಬ್ರೇಕ್‌ ಹಾಕಿ ಮತ್ತೊಂದು ಮದುವೆಯಾಗುತ್ತಿರುವುದರ ಬಗ್ಗೆ ಬಹಿರಂಗಪಡಿಸಿದ್ದಾರೆ.

ಅಮಲಾ ಪೌಲ್ ಕೈಯಲ್ಲಿ ಸಿಗರೇಟ್... ಇದು ಸಿನಿಮಾ ಶೂಟಿಂಗ್ ಅಲ್ಲ!

 

ನಿರ್ದೇಶಕ ವಿಜಯ್ ಕೈ ಹಿಡಿಯುತ್ತಿರುವುದು ಚೆನ್ನೈನಲ್ಲಿ ವೈದ್ಯೆಯಾಗಿರುವ ಐಶ್ವರ್ಯಳನ್ನು. ಜುಲೈ 11 ರಂದು ಆಪ್ತರ ಸಮ್ಮುಖದಲ್ಲಿ ಖಾಸಗಿಯಾಗಿ ಮದುವೆ ಆಗುತ್ತಿದ್ದಾರೆ.

ಈ ಹಿಂದೆ ವಿಜಯ್ ನಟಿ ಸಾಯಿ ಪಲ್ಲವಿಯನ್ನು ಮದುವೆ ಆಗುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಇದರ ಬಗ್ಗೆ ಇಬ್ಬರೂ ಸ್ಪಷ್ಟೀಕರಣ ಕೊಟ್ಟಿದ್ದಾರೆ. ವಿಜಯ್ ಸಿನಿಮಾದವರ ಸಹವಾಸನೇ ಬೇಡ ಎಂದು ವೈದ್ಯೆಯ ಕೈ ಹಿಡಿಯುತ್ತಿದ್ದಾರೆ.

ಅಭಿಮಾನಿಗಳಿಗೆ ಶಾಕ್ ಕೊಟ್ಟ ಅಮಲಾ ಬೋಲ್ಡ್ ಟೀಸರ್