ಪ್ರೀತಿ ಪಾತ್ರರ ಬರ್ತ್‌ಡೇಗೆ ಏನಾದರೂ ವಿಶೇಷಾತಿ ವಿಶೇಷ ಗಿಫ್ಟ್ ನೀಡಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದು ಸಾಮಾನ್ಯ. ಹಾಗೇಯೇ ಇಲ್ಲಿ ಬಾಲಿವುಡ್‌ನ ಜೋಡಿ ಎಂದೇ ಹೇಳಲಾಗುತ್ತಿರುವ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಈಗ ಮತ್ತೆ ಸುದ್ದಿಯಾಗಿರುವುದು ಕೇಕ್ ಕಾರಣಕ್ಕೆ. 

ಯಾಕೆ ಗೊತ್ತಾ? ಮೊನ್ನೆಯಷ್ಟೇ ರಣಬೀರ್ ಬರ್ತ್‌ಡೇ ಆಗಿದೆ. ಬಂಧು ಬಳಗವೆಲ್ಲಾ ಬಂದು ಹರಸಿದ್ದಾರೆ. ತಮಗೆ ಇಷ್ಟವಾದ ಗ್‌ಟಿ ಕೂಡಾ ಕೊಟ್ಟಿದ್ದಾರೆ. ಆದರೆ ಅಲಿಯಾ ಭಟ್ ಕೊಟ್ಟಿರುವ ಗ್‌ಟಿ ಏನೆಂದರೆ ಪೈನಾಪಲ್ ಗ್‌ಟಿ.

ರಣಬೀರ್‌ಗೆ ಪೈನಾಪಲ್ ಎಂದರೆ ಇಷ್ಟ ಎಂದು ತಿಳಿದಿರುವ ಅಲಿಯಾ ತಾನೇ ಖುದ್ದಾಗಿ ಅಡುಗೆ ಮನೆಯಲ್ಲಿ ಪೈನಾಪಲ್ ಕೇಕ್ ತಯಾರಿಸಿ ಅದನ್ನು ರಣಬೀರ್ ಕೈಯಿಂದ ಕಟ್ ಮಾಡಿಸಿ ಬರ್ತ್‌ಡೇ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾಳೆ. ಅಲ್ಲದೇ ಇನ್‌ಸ್ಟಾಗ್ರಾಂನಲ್ಲಿ ಹ್ಯಾಪಿ ಬರ್ತ್‌ಡೇ ಸನ್‌ಶೈನ್ ಎಂದು ಹೇಳಿ ಹರಸಿದ್ದಾಳೆ. ಇದರಿಂದ ಫುಲ್ ಖುಷ್ ಆಗಿರುವ ರಣಬೀರ್ ತನ್ನ ಗೆಳತಿ ಬೇರೆ ಯಾರೂ ಕೊಡದಂತಹ ಗ್‌ಟಿ ಕೊಟ್ಟು ತನ್ನ 36ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣಗೊಳಿಸಿದ್ದಕ್ಕೆ ಮನಸಾರೆ ಮೆಚ್ಚುಗೆ ಸೂಚಿಸಿದ್ದಾರೆ.

ಈ ಘಟನೆಯಿಂದ ತಿಳಿದು ಬಂದ ನೀತಿಯೇನೆಂದರ ಅಲಿಯಾ ಮತ್ತು ರಣಬೀರ್ ತುಂಬಾ ಹತ್ತಿರವಾಗಿದ್ದಾರೆ, ಇನ್ನೊಂದು ತಾರಾ ಜೋಡಿಯ ಮದುವೆಯನ್ನು ಜಗತ್ತು ಶೀಘ್ರವೇ ನೋಡಬಹುದು.