Asianet Suvarna News Asianet Suvarna News

ತನುಶ್ರೀ ದತ್ತಾ ವಿರುದ್ಧ ಮಾತನಾಡಿದರಾ ಅಕ್ಷಯ್ ಕುಮಾರ್?

ತನುಶ್ರೀ ದತ್ತಾ ವಿರುದ್ಧ ಮಾತನಾಡಿದರಾ ಅಕ್ಷಯ್ ಕುಮಾರ್? | ವಿಡಿಯೋ ತಿರುಚಲಾಗಿದೆ ಎಂದು ಆರೋಪಿಸಿ ಸೈಬರ್ ವಿಭಾಗಕ್ಕೆ ದೂರು ನೀಡಿದ ಅಕ್ಷಯ್ | ನಿಜಕ್ಕೂ ನಡೆದಿದ್ದೇನು? 

Akshay Kumar files complaint against a morphed video against Tanushree Dutta
Author
Bengaluru, First Published Oct 8, 2018, 2:20 PM IST

ಬೆಂಗಳೂರು (ಅ. 08): ನಟಿ ತನುಶ್ರೀ ದತ್ತ  ವಿರುದ್ಧವಾಗಿ ನಟ ಅಕ್ಷಯ್ ಕುಮಾರ್ ಮಾತನಾಒಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಈ ಬಗ್ಗೆ ಅಕ್ಷಯ್ ಕುಮಾರ್ ಬಾಂದ್ರಾ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಬಾಲಿವುಡ್ ’ಕ್ವೀನ್’ ಮೇಲೆ ಲೈಂಗಿಕ ದೌರ್ಜನ್ಯ?

ಇದು ಹಳೆಯ ವಿಡಿಯೋ. ಖ್ಯಾತ ನಟಿಯೊಬ್ಬಳ ಬಗ್ಗೆ ನಾನು ಮಾತನಾಡುತ್ತಿದ್ದೆ. ಅದನ್ನು ಎಡಿಟ್ ಮಾಡಲಾಗಿದೆ. ತನುಶ್ರೀ ದತ್ತಾ ಹೆಸರು ಸೇರಿಸಿ ಇಡೀ ವಿಡಿಯೋವನ್ನು ತಿರುಚಲಾಗಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.  ದೂರು ದಾಖಲಾದ ಬಳಿಕ ಈ ವಿಡಿಯೋವನ್ನು ಯುಟ್ಯೂಬ್ ನಿಂದ ಡಿಲೀಟ್ ಮಾಡಲಾಗಿದೆ. 

ಬ್ರಾ ಎಸೆದಿದ್ದ ನಿರ್ಮಾಪಕ, ಬಾಲಿವುಡ್ ನಟಿ ಹೇಳಿದ ಬಿಕಿನಿ ನೋವು!

ಈ ವಿಡಿಯೋ ನೋಡಿದವರಿಗೆ ಅಕ್ಷಯ್ ಕುಮಾರ್ ತನುಶ್ರೀ ದತ್ತಾ ವಿರುದ್ಧವಾಗಿ ಮಾತನಾಡಿದಂತೆ ಭಾಸವಾಗುತ್ತದೆ. ಆದರೆ ಅಕ್ಷಯ್ ಆ ರೀತಿ ಮಾತನಾಡಿಯೇ ಇಲ್ಲ. ಈ ಬಗ್ಗೆ ಸೈಬರ್ ಅಧಿಕಾರಿಗಳು ಯುಟ್ಯೂಬ್ ನಲ್ಲಿ ಹುಡುಕಾಡಿದಾಗ ವಿಡಿಯೋ ಸಿಕ್ಕಿಲ್ಲ. ಇದರ ಅಸಲಿ ವಿಡಿಯೋ ಇದ್ದರೆ ಕೊಡಿ ಎಂದು ಅಧಿಕಾರಿಗಳು ಪೊಲೀಸರನ್ನು ಕೇಳಿದ್ದಾರೆ.   

Latest Videos
Follow Us:
Download App:
  • android
  • ios