ಮುಂಬೈ (ಜು. 13): ಬಾಲಿವುಡ್ ಸೆಲೆಬ್ರಿಟಿ ಕಪಲ್’ಗಳಲ್ಲಿ ಒಬ್ಬರಾದ ಅಜಯ್ ದೇವಗನ್-ಕಾಜೋಲ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳದೇ ದಶಕಗಳೇ ಆಗಿದೆ. ದಶಕಗಳ ನಂತರ ಇಬ್ಬರು ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ತಾನಾಜಿ; ದಿ ಅನ್ ಸಂಗ್ ವಾರಿಯರ್ ಎನ್ನುವ ಚಿತ್ರದಲ್ಲಿ ಕಾಜೋಲ್ ಹಾಗೂ ಅಜಯ್ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಮೂಲಗಳ ಪ್ರಕಾರ ಅಜಯ್’ಗೆ ನಾಯಕಿಯಾಗಿ ಕಾಜೋಲ್ ಕಾಣಿಸಿಕೊಳ್ಳಲಿದ್ದಾರೆ. 

ಇದು ಮರಾಠಿ ಪ್ರಧಾನ ಚಿತ್ರವಾಗಿದ್ದು ಕಾಜೋಲ್ ಡೈಲಾಗ್ ಮರಾಠಿಗೆ ಸೂಕ್ತವಾಗಿರುವುದರಿಂದ ಈ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಕಥೆಯನ್ನು ಕೇಳಿದಾಗ ಕಾಜೋಲ್ ಖುಷಿಯಿಂದಲೇ ಒಪ್ಪೊಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಚಿತ್ರದ ಕೆಲಸ ಈಗಾಗಲೇ ಶುರುವಾಗಿದೆ. 150 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು 2019 ಕ್ಕೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಚಿತ್ರದಲ್ಲಿ ಯಾರ್ಯಾರು ನಟಿಸಲಿದ್ದಾರೆ ಎಂಬುದು ಹೊರಬೀಳಬೇಕಷ್ಟೆ.