Asianet Suvarna News Asianet Suvarna News

ಅಜಯ್-ಕಾಜೋಲ್ ಸುಖ ಸಂಸಾರದ ಬಗ್ಗೆ ಯಾರಿಗೂ ಗೊತ್ತಿರದ ಗುಟ್ಟು!

ಮದುವೆಯಾದ ಮೇಲೆ ಗಂಡನಿಗಾಗಿ ಹೆಂಡತಿ, ಹೆಂಡತಿಗಾಗಿ ಗಂಡ ಬದಲಾಗಬೇಕು. ಒಬ್ಬರ ಇಷ್ಟಕಷ್ಟಗಳಿಗೆ ಮತ್ತೊಬ್ಬರು ತಮ್ಮ ಇಷ್ಟಕಷ್ಟಗಳನ್ನು ಬಲಿ ಕೊಡಬೇಕು. ಒಬ್ಬರಿಗೆ ಮತ್ತೊಬ್ಬರು ಹೊಂದಿಕೊಂಡು ಹೋಗಬೇಕು ಎಂದು ಎಲ್ಲಾ ಕಡೆಗಳಲ್ಲೂ ಬಹುತೇಕ ಹೇಳುತ್ತಾರೆ. ಇದೇ ಸುಖಿ ಸಂಸಾರದ ಗುಟ್ಟು ಎಂದು ನಂಬಿಸಲಾಗಿದೆ ಕೂಡ. ಆದರೆ ನಟ ಅಜಯ್‌ ದೇವಗನ್‌ ಸುಖಿ ಸಂಸಾರಕ್ಕೆ ಮತ್ತೊಂದು ಟಿಫ್ಸ್‌ ಕೊಟ್ಟಿದ್ದಾರೆ.

Ajay Devgan and Kajol revels Happy family  secrets
Author
Bangalore, First Published Jul 16, 2019, 10:49 AM IST
  • Facebook
  • Twitter
  • Whatsapp

ಅಜಯ್‌ ದೇವಗನ್‌ ಮತ್ತು ಕಾಜೋಲ್‌ ದೇವಗನ್‌ ದಾಂಪತ್ಯಕ್ಕೆ ಸರಿಯಾಗಿ ಹನ್ನೆರಡು ವರ್ಷ ತುಂಬಿದೆ. ಬಾಲಿವುಡ್‌ನ ಮಟ್ಟಿಗೆ ಹನ್ನೆರಡು ಎನ್ನುವುದು ದೊಡ್ಡ ಅವಧಿಯೇ ಸರಿ. ಇಬ್ಬರು ನಟ-ನಟಿಯರಾಗಿ ತಮ್ಮ ತಮ್ಮ ಅಸ್ಮಿತೆಗಳನ್ನು ಕಾಪಾಡಿಕೊಂಡು ಒಟ್ಟಾಗಿ ಸಾಗುವಾಗ ಸಣ್ಣ ಪುಟ್ಟವಿರಸ ಸಹಜ. ಇದರ ನಡುವಲ್ಲೂ ಅವರದ್ದು ಅನ್ಯೋನ್ಯ ಜೋಡಿ. ಇದು ಸಾಧ್ಯವಾಗಿದ್ದು ಹೇಗೆ ಎಂದು ದೇವಗನ್‌ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Ajay Devgan and Kajol revels Happy family  secrets

‘ನಾನು ಮತ್ತು ಕಾಜೋಲ್‌ ಮದುವೆಯಾದಾಗ ಹೇಗಿದ್ದೆವೋ ಈಗಲೂ ಹಾಗೆಯೇ ಇದ್ದೇವೆ. ನನಗಾಗಿ ಅವಳು, ಅವಳಿಗಾಗಿ ನಾನು ಏನೂ ಬದಲಾವಣೆ ಮಾಡಿಕೊಂಡಿಲ್ಲ. ನಾನು ನಾನಾಗಿಯೇ ಇದ್ದೇನೆ, ಅವಳು ಅವಳಾಗಿಯೇ ಇದ್ದಾಳೆ. ಇದೇ ನಮ್ಮ ಸಂಸಾರದ ಆನಂದದ ಗುಟ್ಟು’ ಎಂದು ಹೇಳುವ ಮೂಲಕ ಸಂಸಾರದಲ್ಲಿ ಸಂತೋಷ ಇರಬೇಕಾದಾರೆ ವೈಯಕ್ತಿಕವಾಗಿ ಇಬ್ಬರಿಗೂ ಪರಸ್ಪರ ಗೌರವ, ಮನ್ನಣೆ ಇರಬೇಕು ಎಂದು ಸಾರಿದ್ದಾರೆ.

ಬೇರೆ ಹುಡುಗಿ ಮೇಲೆ ಕಣ್ಣಾಕುವ ಅಜಯ್ ಗೆ ಪೊಸೆಸಿವ್ ಕಾಜೋಲ್ ರಿಯಾಕ್ಷನ್ ಇದು!

Follow Us:
Download App:
  • android
  • ios