ಸ್ಯಾಂಡಲ್ ವುಡ್ ನ ಬೇಬಿ ಡಾಲ್ ಐಂದ್ರಿತಾ ರೇ ಸಂಭಾವನೆ ವಿಚಾರದಲ್ಲಿಯೇ ವಿವಾದದವನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನ ಬೇಬಿ ಡಾಲ್ ಐಂದ್ರಿತಾ ರೇ ಸಂಭಾವನೆ ವಿಚಾರದಲ್ಲಿಯೇ ವಿವಾದದವನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ.

ನಟ ಜಗ್ಗೇಶ್ ಹಾಗೂ ನಟಿ ಐಂದ್ರಿತಾ ರೇ ಅಭಿನಯದ ಮೇಲುಕೋಟೆ ಮಂಜ ಚಿತ್ರದ, ಪ್ರಚಾರಕ್ಕೆ ಬರಲು 5 ಲಕ್ಷ ರೂಪಾಯಿ ಕೊಡುವಂತೆ ನಿರ್ಮಾಪಕರ ಬಳಿ ನಟಿ ಐಂದ್ರಿತಾ ರೇ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿತ್ತು. ಆದರೆ ಇದು ಶುದ್ಧ ಸುಳ್ಳು ಅಂತ ನಟಿ ಐಂದ್ರಿತಾ ರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಸಂಭಾವನೆಯಲ್ಲಿ ನನಗೆ ಬರಬೇಕಾದ 5 ಲಕ್ಷ ರೂಪಾಯಿ ಇನ್ನೂ ಬಂದಿಲ್ಲ. ಅದನ್ನು ಬಿಟ್ಟು ಎಕ್ಸ್ ಟ್ರಾ ಕೇಳಿಲ್ಲ'' ಅಂತ ನಟಿ ಐಂದ್ರಿತಾ ರೇ ಟ್ವೀಟ್ ಮಾಡಿದ್ದಾರೆ. ಆದರೆ ನಟ, ನಿರ್ದೇಶಕ ಜಗ್ಗೇಶ್ ಜೊತೆ ನಟಿ ಐಂದ್ರಿತಾ ರೇ ನಡೆಸಿರುವ ವಾಟ್ಸ್ ಆಪ್ ಸಂಭಾಷಣೆ ಕೂಡ ಈಗ ಜಗಜ್ಜಾಹೀರಾಗಿದೆ. 5 ಲಕ್ಷ ಕೊಡುವವರೆಗೂ ಚಿತ್ರ ಬಿಡುಗಡೆಗೆ ಬಿಡುವುದಿಲ್ಲ. 5 ಲಕ್ಷ ಸ್ಮಾಲ್ ಅಮೌಂಟ್ ಅಲ್ಲ. ಅದನ್ನ ಕೊಡುವವರೆಗೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಅಂತ ಎಂದೇ ಜಗ್ಗೇಶ್ ರವರ ಬಳಿ ಐಂದ್ರಿತಾ ರೇ ಹೇಳಿದ್ದಾರೆ. ಆದರೆ ಚಿತ್ರತಂಡ ಮಾತ್ರ ಐಂದ್ರಿತಾ ರೇಗೆ ಕ್ಯಾರೇ ಅನ್ನುತ್ತಿಲ್ಲ.

Scroll to load tweet…
Scroll to load tweet…
Scroll to load tweet…
Scroll to load tweet…