ಸದ್ಯಕ್ಕೆ  ಸ್ವಿಟ್ಜರ್ಲ್ಯಾಂಡ್ ನ  ಆರೋರ ನಗರದ ಬ್ಯೂಟಿಫುಲ್ ಲೋಕೆಶನ್ ಗಲ್ಲಿ ಐಂದ್ರಿತಾ ರೇ ಹಾಗು ಅರ್ಬಾಜ್ ಖಾನ್ ಸನ್ನಿ ವೇಶಗಳ ಚಿತ್ರೀಕರಣ ಮಾಡಲಾಗುತ್ತಿದೆ.

ಕನ್ನಡ ಚಿತ್ರರಂಗದ ಡ್ರೀಮ್ ಗರ್ಲ್ ಐಂದ್ರಿತಾ ರೇ, ಅಲ್ಲೊಂದು ಇಲ್ಲೊಂದು ಚಿತ್ರದಲ್ಲಿ ಪ್ರತ್ಯಕ್ಷವಾಗಿದ್ದು ಬಿಟ್ರೆ, ಸದ್ಯ, ಹೆಚ್ಚೇನೂ ಸಿನಿಮಾ ಮಾಡ್ತಿಲ್ಲ ಅಂತಾ ಗಾಂಧಿನಗರ ಮಾತನಾಡಿಕೊಳ್ಳುತ್ತಿದ್ರು. ಇದರ ಬೆನ್ನಲ್ಲೇ ಐಂದ್ರಿತಾ ರೇ ಈಗ ಗುಡ್ ನ್ಯೂಸ್ ವೊಂದನ್ನ ಕೊಟ್ಟಿದ್ದಾರೆ. ಸೈಲೆಂಟಾಗಿ ಬಾಲಿವುಡ್ ಅಂಗಳಕ್ಕೆ ಜಿಗಿದು ಹೊಸ ಪಯಣ ಆರಂಭಿಸಿದ್ದಾರೆ.

ಇದೇ ಮೊದಲ ಬಾರಿಗೆ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಐಂದ್ರಿತಾ ರೇ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.ಇನ್ನೂ ಹೆಸರಿಡದ ಈ ಚಿತ್ರಕ್ಕೆ ಇಬ್ಬರು ನಾಯಕರು. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮತ್ತು ಶಾಂದರ್ ಖ್ಯಾತಿಯ ವಿಕಾಸ್ ಶರ್ಮಾ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಬಾಜ್ ಖಾನ್ ಗೆ ಐಂದ್ರಿತಾ ಜೋಡಿಯಾಗಿರೋದು ವಿಶೇಷ.

ಸದ್ಯಕ್ಕೆ ಸ್ವಿಟ್ಜರ್ಲ್ಯಾಂಡ್ ನ ಆರೋರ ನಗರದ ಬ್ಯೂಟಿಫುಲ್ ಲೋಕೆಶನ್ ಗಲ್ಲಿ ಐಂದ್ರಿತಾ ರೇ ಹಾಗು ಅರ್ಬಾಜ್ ಖಾನ್ ಸನ್ನಿ ವೇಶಗಳ ಚಿತ್ರೀಕರಣ ಮಾಡಲಾಗುತ್ತಿದೆ. ಕನ್ನಡದಲ್ಲಿ ಇತ್ತೀಚೆಗೆ ನಿರುತ್ತರ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಐಂದ್ರಿತಾ ರೇ, ಈಗ ಬಾಲಿವುಡ್ ಚಿತ್ರರಂಗದಲ್ಲಿ ಐಂದ್ರಿತಾ ಹೊಸ ಅಧ್ಯಾಯ ಶುರು ಮಾಡಿದ್ದಾರೆ.