ನಟಿ ಹಾಗೂ ಬಿಜೆಪಿ ನಾಯಕ ಕೃಷ್ಣಕುಮಾರ್ ಅವರ ಪುತ್ರಿ ಅಹಾನಾ ಕೃಷ್ಣ, ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಈ ಭೇಟಿಯ ಅನುಭವವನ್ನು ಹಂಚಿಕೊಂಡಿರುವ ಅವರು, ಮೋದಿ ತಮಗೆ ಅಜ್ಜನಂತೆ ಕಂಡರು ಮತ್ತು ತುಂಬಾ ಸಲುಗೆಯಿಂದ ಮಾತನಾಡಿಸಿದರು ಎಂದು ಹೇಳಿದ್ದಾರೆ.

ಬಿಜೆಪಿ ನಾಯಕ ಹಾಗೂ ನಟ ಕೃಷ್ಣಕುಮಾರ್ ಮತ್ತು ಅವರ ಕುಟುಂಬ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಈ ಭೇಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು. ಕೃಷ್ಣಕುಮಾರ್ ತಮ್ಮ ಪತ್ನಿ ಸಿಂಧು ಕೃಷ್ಣ, ಪುತ್ರಿಯರಾದ ಅಹಾನಾ, ದಿಯಾ, ಇಶಾನಿ, ಹಂಸಿಕಾ ಹಾಗೂ ಅಳಿಯ ಅಶ್ವಿನ್ ಗಣೇಶ್ ಜೊತೆ ಮೋದಿಯವರ ಅಧಿಕೃತ ನಿವಾಸಕ್ಕೆ ತೆರಳಿ ಭೇಟಿ ಮಾಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ವಿಶ್ವ ನಾಯಕರೆಲ್ಲರೂ ಗೌರವದಿಂದ ನೋಡುವ ಭಾರತದ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿಜಿಯವರನ್ನು ಕುಟುಂಬ ಸಮೇತ ಭೇಟಿಯಾಗಿದ್ದು ನಮ್ಮ ಪುಣ್ಯ’ ಎಂದು ಕೃಷ್ಣಕುಮಾರ್ ಫೋಟೋಗಳ ಜೊತೆ ಬರೆದುಕೊಂಡಿದ್ದರು. ಈಗ, ನಟಿ ಅಹಾನಾ ಕೃಷ್ಣ ಕೂಡಾ ಪ್ರಧಾನಿ ಮೋದಿ ಜೊತೆಗಿನ ತಮ್ಮ ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ‘ವಿಶ್ವದ ಅತ್ಯಂತ ಪ್ರಭಾವಿ ನಾಯಕರೊಬ್ಬರ ಮುಂದೆ ಕೂತಿದ್ದೇವೆ ಎಂಬ ಭಾವನೆಯೇ ನಮಗೆ ಬರಲಿಲ್ಲ. ಪ್ರಧಾನಿ ನಮ್ಮೊಂದಿಗೆ ಅಷ್ಟು ಫ್ರೀಯಾಗಿ ಬೆರೆತರು’ ಎಂದು ಅಹಾನಾ ಹೇಳಿದ್ದಾರೆ.

ವೆಲ್ಕಮ್, ಆ ಜಾಯಿಯೇ

ಸಂದರ್ಶನವೊಂದರಲ್ಲಿ ಮಾತನಾಡಿದ ಅಹಾನಾ, "ಪ್ರಧಾನ ಮಂತ್ರಿಯವರನ್ನು ಭೇಟಿಯಾಗುವ ಅವಕಾಶ ಎಲ್ಲರಿಗೂ, ಯಾವಾಗಲೂ ಸಿಗುವುದಿಲ್ಲ. ಯಾವುದೋ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭೇಟಿಯಾದ ಹಾಗಲ್ಲ, ಇದು ಅವರ ನಿವಾಸದಲ್ಲೇ ನಡೆದ ಭೇಟಿ. ಸುಮಾರು 40 ನಿಮಿಷಗಳ ಕಾಲ ನಾವು ಮತ್ತು ಶ್ರೀ ನರೇಂದ್ರ ಮೋದಿ ಸರ್ ಮಾತ್ರ ಇದ್ದೆವು. ಅದು ತುಂಬಾನೇ ವೈಯಕ್ತಿಕ ಮಟ್ಟದ ಸಂಭಾಷಣೆಯಾಗಿತ್ತು, ತುಂಬಾ ಚೆನ್ನಾಗಿತ್ತು. ಬೇರೆ ಯಾರೂ ಇರಲಿಲ್ಲ. ನಾವು ರೂಮ್ ಒಳಗೆ ಕಾಲಿಟ್ಟಾಗ, ಅವರೇ ‘ವೆಲ್ಕಮ್, ಆ ಜಾಯಿಯೇ’ ಎಂದು ಸ್ವಾಗತಿಸಿದರು. ಅದು ತುಂಬಾ ಸ್ವೀಟ್ ಆಗಿತ್ತು," ಎಂದರು.

"ವಿಶ್ವದ ಅತ್ಯಂತ ಪ್ರಭಾವಿ ನಾಯಕರೊಬ್ಬರ ಮುಂದೆ ಕೂತಿದ್ದೇವೆ ಎಂಬ ಭಾವನೆಯೇ ನಮಗೆ ಬರಲಿಲ್ಲ. ಅವರು ನಮ್ಮನ್ನು ಅಷ್ಟು ಕಂಫರ್ಟಬಲ್ ಆಗಿರಿಸಿದರು. ಅವರನ್ನು ನೋಡಿದಾಗ ಒಬ್ಬ ಅಜ್ಜನ ಹಾಗೆ ಅನಿಸಿತು. ಮಾತನಾಡಲು ತುಂಬಾ ಫ್ರೀಯಾಗಿ ಫೀಲ್ ಆಯ್ತು. ಅಂತಹದ್ದೊಂದು ಎನರ್ಜಿಯನ್ನು ಅವರೇ ಸೃಷ್ಟಿಸಿದ್ದರು’ ಎಂದು ಅಹಾನಾ ವಿವರಿಸಿದ್ದಾರೆ.