ಅತ್ತೆ ಜಯಾ ಬಚ್ಛನ್‌ ಜೊತೆ ಗಲಾಟೆ ಮಾಡಿಕೊಂಡ ಬಳಿಕ, ಐಶ್ವರ್ಯಾ ರೈ ಬಚ್ಛನ್‌ ಜಲ್ಸಾ ನಿವಾಸದಿಂದ ಹೊರಬಂದಿದ್ದಾರೆ ಎನ್ನುವ ವರದಿಗಳಿವೆ. ಪ್ರಸ್ತುತ ಐಶ್ವರ್ಯಾ ರೈ ತನ್ನ ತಾಯಿಯ ಮನೆಯಲ್ಲಿ ವಾಸವಿದ್ದು, ಕಾಲ ಕಾಲಕ್ಕೆ ಜಲ್ಸಾಗೆ ಭೇಟಿ ನೀಡುವ ಸಂಪ್ರದಾಯ ಇರಿಸಿಕೊಂಡಿದ್ದಾರೆ.

ಮುಂಬೈ (ಡಿ.15): ಒಂದು ಉತ್ತಮ ದಾಂಪತ್ಯ ವಿಚ್ಛೇದನವಾಗುವುದು ಒಳ್ಳೆಯ ವಿಚಾರವಲ್ಲ. ಅದರಲ್ಲೂ ಮಗುವನ್ನು ಹೊಂದಿರುವ ದಾಂಪತ್ಯದಲ್ಲಿ ಇಂಥ ಸಂಗತಿಗಳು ಆಗಲೇಬಾರದು. ಆದರೆ, ಬಾಲಿವುಡ್‌ನ ಅತ್ಯಂತ ಪ್ರಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲಿ ಒಂದಾಗಿರುವ ಐಶ್ವರ್ಯಾ ರೈ ಬಚ್ಛನ್‌ ಹಾಗೂ ಅಭಿಷೇಕ್‌ ಬಚ್ಛನ್‌ ತಮ್ಮ ಮಗುವಿನ ಸಲುವಾಗಿ ಮಾತ್ರವೇ ಒಟ್ಟಾಗಿ ಬದುಕುತ್ತಿದ್ದಾರೆ. ಬಹಳ ದೀರ್ಘಕಾಲದಿಂದ ಅವರ ನಡುವೆ ಭಿನ್ನಾಭಿಪ್ರಾಯಗಳು ಇವೆ. ಆದರೆ, ಈಗ ಅದು ಬ್ರೇಕ್‌ ಆಗುವ ಹಂತಕ್ಕೆ ಬಂದಿದೆ' ಎಂದು ಬಚ್ಛನ್‌ ಕುಟುಂಬಕ್ಕೆ ಬಹಳ ಆಪ್ತರಾಗಿರುವ ಮೂಲವೊಂದು ತಿಳಿಸಿದೆ. ಪತ್ರಿಕೆಯೊಂದರ ವರದಿಯ ಪ್ರಕಾರ, ಐಶ್ಚರ್ಯಾ ರೈ ಈಗಾಗಲೇ ಬಚ್ಛನ್‌ ಅವರ ಅಧಿಕೃತ ನಿವಾಸ ಜಲ್ಸಾದಿಂದ ಹೊರಹೋಗಿದ್ದಾರೆ. ತನ್ನ ತಾಯಿಯ ಮನೆಯ ಹಾಗೂ ಬಚ್ಛನ್‌ ಅವರ ಅಧಿಕೃತ ನಿವಾಸ ಜಲ್ಸಾದ ನಡುವೆ ಐಶ್ವರ್ಯಾ ರೈ ತಮ್ಮ ಸಮಯವನ್ನು ವಿಂಗಡಿಸಿಕೊಂಡಿದ್ದಾರೆ. ಜಲ್ಸಾದಲ್ಲಿಯೂ ಆಕೆ ತನ್ನ ಅತ್ತೆ-ಮಾವ ಹಾಗೂ ಪತಿಯಿಂದಲೂ ಬೇರೆಯಾಗಿ ವಾಸ ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಈಗಾಗಲೇ ಸಾಕಷಷ್ಟು ವರದಿಗಳು ಐಶ್ವರ್ಯಾ ರೈ ಹಾಗೂ ಆಕೆಯ ಅತ್ತೆ ಹಿರಿಯ ನಟಿ ಜಯಾ ಬಚ್ಛನ್‌ ನಡುವೆ ಏನೋ ಸರಿಯಿಲ್ಲ ಎಂದು ತಿಳಿದಿವೆ. ವರ್ಷಗಳ ಹಿಂದೆಯೇ ಅವರಿಬ್ಬರ ನಡುವೆ ಸಂವಹನ ಮುಗಿದು ಹೋಗಿದೆ. ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲೂ ಅವರು ಉದ್ದೇಶಪೂರ್ವಕವಾಗಿ ಒಬ್ಬರನ್ನೊಬ್ಬರು ನಿರ್ಲಕ್ಷ್ಯಿಸುತ್ತಿದ್ದಾರೆ. ಈ ಅತ್ತೆ ಮತ್ತು ಸೊಸೆಯ ನಡುವಿನ ಘರ್ಷಣೆಯ ಮಧ್ಯದಲ್ಲಿ ಸಿಲುಕಿರುವ ಅಭಿಷೇಕ್, ತನ್ನ ಹೆತ್ತವರ ಮೇಲಿನ ನಿಷ್ಠೆ ಮತ್ತು ತನ್ನ ಹೆಂಡತಿ ಮತ್ತು ಮಗಳ ಮೇಲಿನ ಜವಾಬ್ದಾರಿಗಳ ನಡುವೆ ನಲುಗಿ ಹೋಗಿದ್ದಾರೆ ಎಂದು ವರದಿಯಾಗಿದೆ. ಬಚ್ಚನ್‌ ಅವರ ಪುತ್ರಿ ಶ್ವೇತಾ ಶಾಶ್ವತವಾಗಿ ಜಲ್ಸಾದಲ್ಲಿ ನೆಲೆಸಿರುವುದರಿಂದ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಂಡಿದೆ, ಇದು ಐಶ್ವರ್ಯಾ ಮತ್ತು ಆಕೆಯ ಅತ್ತೆಯ ನಡುವಿನ ಈಗಾಗಲೇ ಅಸ್ಥಿರ ಸಂಬಂಧವನ್ನು ಇನ್ನಷ್ಟು ಉಲ್ಬಣ ಮಾಡಿದೆ.

ಆದರೆ, ಇವರಿಬ್ಬರ ನಡುವೆ ಸದ್ಯಕ್ಕೆ ವಿಚ್ಛೇದನವಾಗುವ ಲಕ್ಷಣವಿಲ್ಲ ಎಂದೂ ಮೂಗಳು ತಿಳಿಸಿವೆ. ಬಚ್ಛನ್‌ ಕುಟುಂಬಕ್ಕೆ ಹೈಪ್ರೊಫೈಲ್‌ ಸ್ಟೇಟಸ್‌ ಇದೆ. ಇದೊಂದು ವಿವಾದವಾಗುವ ಇಚ್ಛೆಯನ್ನು ಅವರು ವ್ಯಕ್ತಪಡಿಸುತ್ತಿಲ್ಲ. ಅದೇನೇ ಇದ್ದರೂ, ಐಶ್ವರ್ಯಾ ಮತ್ತು ಬಚ್ಚನ್ ಕುಟುಂಬದ ನಡುವಿನ ಗಮನಾರ್ಹ ಭಾವನಾತ್ಮಕ ಅಂತರವು ಸ್ನೇಹಿತರು ಮತ್ತು ಹಿತೈಷಿಗಳಲ್ಲಿ ಕಳವಳವನ್ನು ಉಂಟು ಮಾಡಿದೆ.

ಅಮಿತಾಭ್ ಬಚ್ಚನ್ ಅವರ 80 ನೇ ಹುಟ್ಟುಹಬ್ಬದ ಆಚರಣೆಯ ನಂತರ ಕೌಟುಂಬಿಕ ಭಿನ್ನಾಭಿಪ್ರಾಯದ ವದಂತಿಗಳು ಇನ್ನಷ್ಟು ಸ್ಪಷ್ಟವಾಗಿವೆ. ಶ್ವೇತಾ ಬಚ್ಚನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಮಿತಾಭ್ ಬಚ್ಚನ್, ಜಯಾ ಬಚ್ಚನ್ ಮತ್ತು ಮೊಮ್ಮಕ್ಕಳಾದ ಆರಾಧ್ಯ ಬಚ್ಚನ್, ನವ್ಯಾ ನವೇಲಿ ನಂದಾ ಮತ್ತು ಅಗಸ್ತ್ಯ ನಂದಾ ಅವರನ್ನು ಒಳಗೊಂಡ ಫೋಟೋವನ್ನು ಹಂಚಿಕೊಂಡಿದ್ದಾರೆ.

ಕಬಡ್ಡಿ ಪಂದ್ಯದಿಂದ ಶುರುವಾಗಿ ಮದುವೆ ಉಂಗುರ ತೆಗೆಯುವವರೆಗೆ: ಐಶ್​-ಅಭಿ ಡಿವೋರ್ಸ್​ ನಿಜವಾಯ್ತಾ?

ಇನ್ನೊಂದೆಡೆ, ಐಶ್ವರ್ಯಾ ರೈ ಬಚ್ಚನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಅದೇ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ, ಆದರೆ ಅದರಲ್ಲಿ ಸಣ್ಣ ವ್ಯತ್ಯಾಸ ಕಂಡಿತ್ತು. ಅವರ ಫೋಟೋದಲ್ಲಿ ಜಯಾ ಬಚ್ಚನ್, ನವ್ಯಾ ನವೇಲಿ ಮತ್ತು ಅಗಸ್ತ್ಯ ನಂದಾ ಅವರನ್ನು ಐಶ್ವರ್ಯಾ ರೈ ಕ್ರಾಪ್‌ ಮಾಡಿದ್ದರೆ, ಅಮಿತಾಬ್‌ ಬಚ್ಛನ್‌ ಹಾಗೂ ಆರಾಧ್ಯ ಜೊತೆ ತಾವು ಇರುವ ಫೋಟೋವನ್ನು ಹಾಕಿಕೊಂಡಿದ್ದರು. ಐಶ್ವರ್ಯಾ ಫೋಟೋ ಜೊತೆಗೆ, "ಯಾವಾಗಲೂ... ದೇವರು ಆಶೀರ್ವದಿಸಲಿ" ಎಂದು ಎಂದು ಶೀರ್ಷಿಕೆ ಹಾಕಿದ್ದರು. ಈ ನಡುವೆ ಐಶ್ವರ್ಯಾ ರೈ ಹಾಗೂ ಅಭಿಷೇಕ್‌ ಬಚ್ಛನ್‌ ಶುಕ್ರವಾರ ಸಂಜೆಯ ವೇಳೆ ಅಂಬಾನಿ ಸ್ಕೂಲ್‌ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಬೇರೆ ಬೇರೆಯಾಗುವ ವದಂತಿ ಸುಳ್ಳು ಎನ್ನವ ವರದಿಗಳೂ ಇವೆ.

ಸೊಸೆ ಐಶ್ವರ್ಯಾರನ್ನ ಅನ್‌ಫಾಲೋ ಮಾಡಿದ ವದಂತಿಗಳ ನಡುವೆ ಬಿಗ್‌ ಬಿ ರಹಸ್ಯ ಪೋಸ್ಟ್!