ನಟಿಮಣಿಯರು ತಮ್ಮ ಫೀಟ್ನೆಸ್ ಅನ್ನು ಬಿಕಿನಿ ಮೂಲಕ ಪ್ರದರ್ಶಿಸುವುದು ಕಾಮನ್. ಪೂಜಾ ಗುಪ್ತಾ ಹಾಗೂ ದಿಶಾ ಪಟಾಣಿ ಈಗಾಗಲೇ ತಮ್ಮ ಫಿಟೆನೆಸ್ ಅನ್ನು ಬಿಕನಿ ಮೂಲಕವೇ ಬಹಿರಂಗಗೊಳಿಸಿದ್ದಾಗಿದೆ. ಆಗೊಮ್ಮೆ ಈಗೊಮ್ಮೆ ಪ್ರಿಯಾಂಕ ಚೋಪ್ರಾ ಸಹ ತುಂಡುಡುಗೆ ತೊಟ್ಟು, ತಾವೂ ಏನೂ ಕಮ್ಮಿ ಇಲ್ಲವೆಂದು ಆಗಾಗ ತೋರಿಸಿರುತ್ತಾರೆ. ಇದೇ ಸಾಲಿಗೆ ಇದೀಗ ಅದಾ ಶರ್ಮಾ ಸಹ ಸೇರಿದ್ದು, ಹಿಂದಿ ಹಾಗೂ ತಮಿಳರ ಮನ ಗೆದ್ದಿದ್ದಾರೆ.
ಮೊದಲ ಚಿತ್ರ '1920' ಮೂಲಕ ನಟನಾ ಜೀವನಕ್ಕೆ ಕಾಲಿಟ್ಟು, ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಅದಾ, ಪುನೀತ್ ರಾಜ್‌ಕುಮಾರ್ ಅವರೊಂದಿಗೆ ರಣ ವಿಕ್ರಮದಲ್ಲಿಯೂ ನಟನಾ ಕೌಶಲ್ಯ ತೋರಿ, ತಾವು ಎಲ್ಲೆಡೆ ಸಲ್ಲುವವರೆಂದು ಪ್ರೂವ್ ಮಾಡಿದ್ದಾರೆ.
ಅಷ್ಟಕ್ಕೂ ಇವರ ಫಿಟ್‌ನೆಸ್ ಸಿಕ್ರೇಟ್ ಏನು?
-ಅದಾಗೆ ನೀರೇ ಮದ್ದಂತೆ. ದಿನಕ್ಕೆ 8 ಲೀ. ಕುಡೀತಾರಂತೆ.
- ಬಾದಾಮಿ ಫೇಸ್ ಪ್ಯಾಕ್ ಮತ್ತೊಂದು ಗುಟ್ಟು. ಮುಖಕ್ಕೆ ಇದರ ಫೇಸ್ ಪ್ಯಾಕ್ ಹಚ್ಚಿಕೊಳ್ಳುತ್ತಾರಂತೆ.
- ಬಾಳೆಹಣ್ಣು, ಸೇಬು ಮತ್ತು ಮಾವನ್ನು ಯಥೇಚ್ಛ ಬಳಸುವುದರಿಂದ ದೇಹಕ್ಕೆ ಅಗತ್ಯವಿರೋ ಪೋಷಕಾಂಶಗಳು ಸಿಗುತ್ತೆ ಎನ್ನುವುದು ಅದಾ ವಿಶ್ವಾಸ.
- ಸಿಂಪಲ್ ಆಗಿ, ಸಂಪ್ರದಾಯಕ್ಕೆ ತಕ್ಕಂತೆ ಬಟ್ಟೆ ತೊಡಬೇಕೆನ್ನುತ್ತಾರೆ ಅದಾ.
ತೊಟ್ಟ ಉಡುಪನ್ನು ಸಿಂಪಲ್ ಆಗಿ, ಸಂಪ್ರದಾಯಕ್ಕೆ ತಕ್ಕಂತೆ ತೊಡಬೇಕೆನ್ನುವುದು ಅದಾ ನಂಬಿಕೆ.
ಇದೀಗ ಬಿಕಿನಿ ಚಿತ್ರವೊಂದನ್ನು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇದರ ರಹಸ್ಯವೇನೆಂದು ತಿಳಿಸುವುದಾಗಿ ಹೇಳಿದ್ದಾರೆ. ಏನಿರಬಹುದು ರಹಸ್ಯ?
