ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ತೆರೆಯ ಮೇಲೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು, ನಿಜ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡವರು. ಇದೀಗ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ ಉಮಾಶ್ರೀ.
ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ತೆರೆಯ ಮೇಲೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು, ನಿಜ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡವರು. ಇದೀಗ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿರುವ ಉಮಾಶ್ರೀ, ಎರಡನೇ ಮದುವೆಯಾಗುವ ಯೋಚನೆ ಬಂದಿದ್ದರೂ ಮಕ್ಕಳಿಗಾಗಿ ಆ ನಿರ್ಧಾರದಿಂದ ಹಿಂದೆ ಸರಿದಿದ್ದ ಸಂಗತಿಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಮಕ್ಕಳಿಗಾಗಿ ಎರಡನೇ ಮದುವೆಯ ಯೋಚನೆ!
ತಮ್ಮ ವೈವಾಹಿಕ ಜೀವನದಲ್ಲಿ ಎದುರಾದ ಕಷ್ಟಗಳ ಬಳಿಕ ಮಕ್ಕಳಿಗೆ ಒಳ್ಳೆಯ ಬದುಕು ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ಉಮಾಶ್ರೀ ಪತಿಯಿಂದ ದೂರವಾಗಿದ್ದರು. ಒಂದು ಹಂತದಲ್ಲಿ ಮತ್ತೊಂದು ಮದುವೆಯಾಗುವ ಯೋಚನೆಯೂ ಅವರ ಮನಸ್ಸಿನಲ್ಲಿ ಮೂಡಿತ್ತು. ಜೀವನದಲ್ಲಿ ತನಗೂ ಒಬ್ಬರ ಆಸರೆ ಸಿಗಬಹುದು ಎಂಬ ನಿರೀಕ್ಷೆ ಅವರಲ್ಲಿತ್ತು. ಆದರೆ ಮಗಳು ಗಾಯತ್ರಿಗೆ ತನ್ನ ತಾಯಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಇಷ್ಟವಿರಲಿಲ್ಲ. ಮಗಳ ಈ ಭಾವನೆ ಉಮಾಶ್ರೀ ಅವರ ನಿರ್ಧಾರವನ್ನು ಬದಲಿಸುವಂತೆ ಮಾಡಿತು.
ಮಗಳ ಮಾತಿಗೆ ಎರಡನೇ ಮದುವೆಯ ನಿರ್ಧಾರ ಕೈಬಿಟ್ಟರು!
ಈ ಬಗ್ಗೆ ಮಾತನಾಡಿದ ಉಮಾಶ್ರೀ, ಮಕ್ಕಳಿಗೆ ಒಳ್ಳೆಯ ಬದುಕು ಕಟ್ಟಿಕೊಡಬೇಕು ಎಂಬ ಉದ್ದೇಶದಿಂದಲೇ ಪತಿಯಿಂದ ದೂರವಾಗಿದ್ದೆ. ಮತ್ತೊಂದು ಮದುವೆಯಾಗುವುದು ತಮ್ಮ ಉದ್ದೇಶವಾಗಿರಲಿಲ್ಲ. ಮಗಳ ಮಾತು ಕೇಳಿದ ಬಳಿಕ ಮಕ್ಕಳಿಗಾಗಿಯೇ ಉಳಿದುಕೊಂಡೆ ಎಂಬರ್ಥದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಕ್ಕಳು ತಮ್ಮ ಜೀವನಕ್ಕಾಗಿ ಮದುವೆಯಾಗಬೇಡಿ ಎಂದು ಸಂಪೂರ್ಣವಾಗಿ ಒತ್ತಾಯಿಸಿರಲಿಲ್ಲ. ಅದು ತಾವು ತೆಗೆದುಕೊಂಡ ವೈಯಕ್ತಿಕ ನಿರ್ಧಾರವಾಗಿತ್ತು. ತಮ್ಮ ಆಸೆಯನ್ನು ತಾವೇ ಬದಿಗಿಟ್ಟಿದ್ದಾಗಿ ಉಮಾಶ್ರೀ ಪ್ರಾಮಾಣಿಕವಾಗಿ ಹೇಳಿದ್ದಾರೆ.
ಪ್ರೀತಿ ಅಂದರೆ ಏನು? ಉಮಾಶ್ರೀ ಕೊಟ್ಟ ಉತ್ತರವೇನು?
ಸಂದರ್ಶನದಲ್ಲಿ ಪ್ರೀತಿ ಅಂದರೆ ಏನು ಎಂದು ಕೇಳಿದಾಗ ಉಮಾಶ್ರೀ ನೀಡಿದ ಉತ್ತರ ಗಮನ ಸೆಳೆಯುತ್ತದೆ. "ನಂಬಿಕೆ, ವಿಶ್ವಾಸ, ನಿರಂತರತೆ, ಅಪ್ಯಾಯತೆ, ಪರಸ್ಪರ..." ಎಂದು ಪ್ರೀತಿಯ ಅರ್ಥವನ್ನು ವಿವರಿಸಿದ್ದಾರೆ. ತಮ್ಮ ಜೀವನದಲ್ಲಿ ಈ ಗುಣಗಳು ಸಿಗಲಿಲ್ಲವೇ ಎಂಬ ಪ್ರಶ್ನೆಗೆ, ಸಿಗಲಿಲ್ಲ ಎಂಬ ನೋವನ್ನು ವ್ಯಕ್ತಪಡಿಸಿದ್ದಾರೆ.
ಉಮಾಶ್ರೀ ಅವರ ಈ ಮಾತುಗಳು ಅವರ ವೈಯಕ್ತಿಕ ಬದುಕಿನ ನೋವು, ಮಕ್ಕಳ ಮೇಲಿನ ಪ್ರೀತಿ ಮತ್ತು ಜೀವನದಲ್ಲಿ ತಮಗೆ ಸಿಗದ ಪ್ರೀತಿಯ ಕುರಿತಾದ ಭಾವನೆಗಳನ್ನು ತೆರೆದಿಟ್ಟಿವೆ.




