ಮುಂಬೈ[ನ 24]  ಬಾಲಿವುಡ್ ಬೆಡಗಿ, ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಮತ್ತೆ ರಾಗಿಣಿಯಾಗಿ ರಂಜಿಸಲು ಬರುತ್ತಿದ್ದಾರೆ. ರಾಗಿಣಿ ಎಂಎಂಎಸ್ ರಿಟರ್ನ್ಸ್ ಸೀಸನ್ 2 ವೆಬ್ ಸರಣಿಯಲ್ಲಿ ಸನ್ನಿ ಧಮಾಮಾ ಮಾಡಲು ಬರುತ್ತಿದ್ದು ಟೀಸರ್  ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

2014ರಲ್ಲಿ ಸನ್ನಿ, ರಾಗಿಣಿ ಎಂಎಂಎಸ್ 2 ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದ ಬೇಬಿ ಡಾಲ್ ಹಾಡು ಟ್ರೆಂಡ್ ಸೆಟ್ ಮಾಡಿತ್ತು. ಈ ವೆಬ್ ಸರಣಿಯಲ್ಲಿ ಹಲೋ ಜಿ ಹಾಡಿಗೆ ಸನ್ನಿ ನರ್ತಿಸಲಿದ್ದಾರೆ.

ಜಾರಿದ ಮಲೈಕಾ ಅರೋರಾ ಮೇಲುಡಿಗೆ!

ಟೀಸರ್​ನಲ್ಲಿ ನಟಿ ಸನ್ನಿ ಲಿಯೋನ್​ ‘ಸನ್ನಿ ಇಲ್ಲದೆ ರಾಗಿಣಿ ಎಂಎಂಎಸ್​? ಮಾಡಲು ಸಾಧ್ಯವಿದೆಯೇ ಎಂದು ಕೇಳುವ  ಸನ್ನಿ ಲಿಯೋನ್ ಮಜಾ ಕೊಡಲು ನಾನು ಬರ್ತಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಸನ್ನಿ ಲಿಯೋನ್​ ‘ರಾಗಿಣಿ ಎಂಎಂಎಸ್​ ರಿಟರ್ನ್ಸ್​‘​​​​​​ ವೆಬ್​ ಸರಣಿ-2ರಲ್ಲಿ ಹಾಡೊಂದರಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರ? ಅಥವಾ ಪಾತ್ರ ಮಾಡಲಿದ್ದಾರೆಯೇ ಗೊತ್ತಿಲ್ಲ. ಇನ್ನು ಈ ಬಾರಿ ವರುಣ್​ ಸೂದ್​ ಮತ್ತು ದಿವ್ಯಾ ಅಗರ್​ವಾಲ್ ಲೀಡ್​ ರೋಲ್​ನಲ್ಲಿ​ ಕಾಣಿಸಿಕೊಳ್ಳಲಿದ್ದಾರೆ.ಏಕ್ತಾ ಕಪೂರ್ ಪಾಳಯದಲ್ಲಿ ಸನ್ನಿ ಕಾಣಿಸಿಕೊಳ್ಳುತ್ತಿದ್ದಾರೆ.

ತಮನ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಸನ್ನಿ ಲಿಯೋನ್ ಹೆಜ್ಜೆ ಹಾಕಿಕೊಂಡು ಬರುವ ವಿಡಿಯೋ ಶೇರ್ ಮಾಡಿಕೊಂಡು ಒಂದಿಷ್ಟು ಸಾಲುಗಳನ್ನು ಬರೆದುಕೊಂಡಿದ್ದಾರೆ.