ನಟಿ ಶೃತಿ ಹರಿಹರನ್ ಪ್ರೆಗ್ನೆನ್ಸಿ ವಿಚಾರವನ್ನು ಬಹಿರಂಗಪಡಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಈಗ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬೇಬಿ ಶವರ್ ವಿಡಿಯೋ ರಿವೀಲ್ ಮಾಡಿದ್ದಾರೆ.
'ಲೂಸಿಯಾ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಶೃತಿ ಹರಿಹರನ್ ನೋಡ ನೋಡುತ್ತಿದ್ದಂತೆ ಕೈ ಚಾಚಿದಷ್ಟು ಅವಕಾಶಗಳು ಅವರ ಪಾಲಾಗಿತ್ತು. ಯಶಸ್ಸಿನ ಉತ್ತುಂಗದಲ್ಲಿರುವಾಗ #MeToo ಆರೋಪದ ನಂತರ ಸಿನಿಮಾ ರಂಗದಿಂದ ದೂರ ಉಳಿದರು.
ತಾಯಾಗ್ತಿದ್ದಾರೆ ಶ್ರುತಿ ಹರಿಹನ್, ಗಂಡನ ಹೆಸರು ಬಹಿರಂಗ
ಸಿನಿಮಾದಿಂದ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಿಂದಲೂ ದೂರ ಉಳಿದರು. ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.
ಕೆಲ ದಿನಗಳ ಹಿಂದೆ ತಾನು ಗರ್ಭಿಣಿಯಾದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು 'ಇದೊಂದು ಹೊಸ ಪ್ರಯಾಣದ ಆರಂಭ. ಕ್ಲಾರಿಟಿಗಿಂತ ಕೆಲವೊಮ್ಮೆ ಬ್ಲರ್ ಆಗಿರುವುದೇ ಉತ್ತಮ ' ಎಂದು ಹೇಳಿಕೊಂಡಿದ್ದಾರೆ. ಇನ್ನು ಮೇಡಂ ಸೀಮಂತಾ ಆಯ್ತಾ? ಬೇಬಿ ಶವರ್? ಎಂದು ಕೇಳುತ್ತಿದ್ದವರಿಗೆ ವಿಡಿಯೋ ರಿವೀಲ್ ಮಾಡಿ ಉತ್ತರ ನೀಡಿದ್ದಾರೆ.
'#MajorThrowback ಆಪ್ತ ಗೆಳೆಯರು ಕೊಂಚ ಮೋಜು-ಮಸ್ತಿ ಬೇಕೆಂದು ಮಾಡಿದ ಬೇಬಿ ಶವರ್ ಇದು. #ThePermitRoomBangalore ನಲ್ಲಿ ತುಂಬಾ ದಿನಗಳಿಂದ ತಿನ್ನಬೇಕೆಂದು ಬಯಕೆ ಇತ್ತು. ಅದರಲ್ಲೂ ಮೊಸರನ್ನ ಸಿಕ್ಕಾಪಟ್ಟೆ ಇಷ್ಟವಾಯ್ತು. ಥ್ಯಾಂಕ್ಸ್' ಎಂದು ಬರೆದುಕೊಂಡಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jul 18, 2019, 12:49 PM IST