ಬಿ- ಟೌನ್‌ನಲ್ಲಿ ಸಿಕ್ಕಾಪಟ್ಟೆ ಲವ್ಲಿ ಆಗಿ ಕಾಣಿಸಿಕೊಳ್ಳುವ ಪೇರ್ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ. ಇವರಿಬ್ಬರು ಮೊದಲ ಭೇಟಿಯಾದಾಗ ಹೇಗಿತ್ತು ಮಾತುಕತೆ?

 

ಸದಾ ತುಂಡು ಕೂದಲು ಹಾಗೂ ಗಡ್ಡದಲ್ಲಿರುವ ಆನಂದ್‌ರನ್ನು ಉದ್ದ ಕೂದಲಲ್ಲಿ ನೋಡಲಿಷ್ಟವಂತೆ ಸೋನಂಗೆ. ಮನದನ್ನೆಯನ್ನು ಮೆಚ್ಚಿಸಲೆಂದೇ ಆನಂದ್ ತಮ್ಮ ಮೊದಲ ಭೇಟಿಯಲ್ಲಿಯೇ ಉದ್ದ ಕೂದಲು ಬಿಟ್ಟಿದ್ದರಂತೆ! ಆದರೆ, ಮತ್ತೊಮ್ಮೆ ಮೀಟ್ ಆಗುವಾಗ ಬ್ಯಾಕ್ ಟು ಸ್ಕ್ವೇರ್ ಎನ್ನುವಂತೆ ತುಂಡು ಕೂದಲು, ಪುಡಿ ಗಡ್ಡದಲ್ಲಿಯೇ ಬಂದಿದ್ದರಂತೆ.

ಮೊದಲ ಭೇಟಿಯಲ್ಲಿಯೇ ಸೋನಂ ಯಾವುದೋ ಹಳೆ ಡಿಸೈನ್ ಶೂ ಧರಿಸಿದ್ದರಂತೆ. ಅದನ್ನು ಕಂಡು ಆನಂದ್ 'ಇದ್ಯಾವ ರೀತಿಯ ಶೂ ಹಾಕಿದ್ಯಾ? ' ಎಂದು ಕೇಳಿ, ತಕ್ಷಣವೇ ಒಳ್ಳೆ ಬ್ರ್ಯಾಂಡ್ ಶೂ ಆರ್ಡರ್ ಮಾಡಿದ್ದರಂತೆ. ಸದಾ ಸೋನಂ ಶೂಸ್ ಬಗ್ಗೆ ತಕರಾರು ಎತ್ತುತ್ತಿದ್ದ ಆನಂದ್ ಅವರೇ ಈಗ ಸೋನಂಗೆ ಶೂಸ್ ಆಯ್ಕೆ ಮಾಡುತ್ತಾರಂತೆ.

ಮದುವೆಯ ನಂತರ ಸೋನಂ ಕಪೂರ್ ಫುಲ್ ಹ್ಯಾಪಿ

ಇನ್ನು 'Ek Ladki Ko Dekha Toh Aisa Laga....' ಫಿಲ್ಮ್ ಚಿತ್ರೀಕರಣದಲ್ಲಿ ಬ್ಯುಸಿ ಇರೋ ಸೋನಂ ಕಾರ್ಯಕ್ರವೊಂದರಲ್ಲಿ, ಆನಂದ್ ಅವರೊಡನೆಯ ಒಡನಾಟ, ಮೊದಲ ಭೇಟಿ, ಕಾಸ್ಟ್ಯೂಮ್....ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ.