Asianet Suvarna News Asianet Suvarna News

ಆಗಸ್ಟ್‌ನಲ್ಲಿ ಶಿಲ್ಪಾ ಶೆಟ್ಟಿ ಕೊಡ್ತಾರೆ ಗುಡ್‌ ನ್ಯೂಸ್!

ನಮ್ಮ ಮಂಗಳೂರು ಮೂಲದ ಚೆಲುವೆ ಶಿಲ್ಪಾ ಶೆಟ್ಟಿಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚು ದಶಕಗಳೇ ಕಳೆದಿವೆ. 2014ರಲ್ಲಿ ತೆರೆಗೆ ಬಂದಿದ್ದ ‘ದಿಶ್‌ ಕಿಯೋನ್‌’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಶಿಲ್ಪ ನಾಪತ್ತೆ.

Actress Shilpa Shetty to make bollywood come back
Author
Bangalore, First Published Jul 20, 2019, 11:13 AM IST
  • Facebook
  • Twitter
  • Whatsapp

ಹಿಂದಿಯ ಡ್ಯಾನ್ಸ್‌ ರಿಯಾಲಿಟಿ ಶೋ ಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಷ್ಟೇ ತಮ್ಮನ್ನು ತಾವು ಸೀಮಿತ ಮಾಡಿಕೊಂಡಿದ್ದ ಶಿಲ್ಪ ಈ ಚಿತ್ರವೊಂದರ ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಭರ್ಜರಿ ಕಂ ಬ್ಯಾಕ್‌ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಅದರಂತೆ ಮುಂದಿನ ತಿಂಗಳು ಆಗಸ್ಟ್‌ನಿಂದ ಚಿತ್ರೀಕರಣದಲ್ಲಿಯೂ ಅವರು ಬ್ಯುಸಿಯಾಗಿಬಿಡಲಿದ್ದಾರೆ.

ಸೂಪರ್ ಡ್ಯಾನ್ಸರ್' ವಿನ್ನರ್ ಕಾಲಿಗೆ ಮುತ್ತಿಟ್ಟ ನಟಿ; ಫೋಟೋ ವೈರಲ್

ದಿಲ್ಚಿತ್‌ ದೋಸಾಂಜ್‌ ಮತ್ತು ಯಾಮಿ ಗೌತಮ್‌ ಮುಖ್ಯ ಪಾತ್ರದಲ್ಲಿ ಇರುವ ಹರೂನ್‌ ನಿರ್ದೇಶನ ಮಾಡಲು ಮುಂದಾಗಿರುವ ಚಿತ್ರದಲ್ಲಿ ಬರಹಗಾರ್ತಿಯಾಗಿ ಶಿಲ್ಪಾ ಬಣ್ಣ ಹಚ್ಚಲಿದ್ದಾರೆ. ಇದು ಚಿತ್ರದ ಪ್ರಮುಖ ಪಾತ್ರವಾಗಿದ್ದು ಕತೆ ಕೇಳಿಯೇ ಶಿಲ್ಪ ಈ ಪಾತ್ರಕ್ಕೆ ಯಸ್‌ ಅಂದಿದ್ದಾರೆ. ಇನ್ನೂ ಚಿತ್ರದ ಟೈಟಲ್‌, ಶೆಡ್ಯೂಲ್‌ ಯಾವುದೂ ಫೈನಲ್‌ ಆಗಿಲ್ಲ. ಆದರೆ ಈ ವರ್ಷದ ಒಳಗೆ ಚಿತ್ರ ತೆರೆಗೆ ಬರುವುದು ಪಕ್ಕ. ಅಲ್ಲಿಗೆ ಶಿಲ್ಪಾ ಶೆಟ್ಟಿಮತ್ತೊಂದು ರೂಪದಲ್ಲಿ ಬಾಲಿವುಡ್‌ಗೆ ರೀ ಎಂಟ್ರಿಯಾಗಲಿದ್ದಾರೆ.

Actress Shilpa Shetty to make bollywood come back

 

Follow Us:
Download App:
  • android
  • ios