ಸೂಪರ್ ಡ್ಯಾನ್ಸರ್ ಸೀಸನ್- 3 ವಿನ್ನರ್ ಟ್ರೋಪಿ ಗೆದ್ದ 6 ವರ್ಷದ ರೂಪ್ಸಾ ಬಟಬ್ಯಾಲ್‌ಗೆ ಮೊತ್ತ ನೀಡುವ ಸಮಯದಲ್ಲಿ ವೇದಿಕೆ ಮೇಲೆ ಕಾಲಿಗೆ ಮುತ್ತಿಟ್ಟ ಮಿಸಸ್ ಕುಂದ್ರಾ ಫೋಟೋ ವೈರಲ್ ಆಗುತ್ತಿದೆ.

ಹಿಂದಿ ವಾಹಿನಿಯ ಖ್ಯಾತ ರಿಯಾಲಿಟಿ ಶೋ 'ಸೂಪರ್ ಡ್ಯಾನ್ಸ್ ಸೀಸನ್- 3' ಗ್ರ್ಯಾಂಡ್‌ ಫಿನಾಲೆ ಅದ್ಧೂರಿಯಾಗಿ ನಡೆದಿದ್ದು ವಿನ್ನರ್ ಆಗಿ ರೂಪ್ಸಾ ಬಟಬ್ಯಾಲ್‌ ಟ್ರೋಫಿ ಹಾಗೂ ರೂ. 15 ಲಕ್ಷದ ಮೊತ್ತವನ್ನು ತನ್ನದಾಗಿಸಿಕೊಂಡಿದ್ದಾರೆ.

ಅಬ್ಬಬ್ಬಾ..! ಕೋಟ್ಯಧಿಪತಿ ಮೊದಲ ಸ್ಪರ್ಧಿಗೆ ಇಷ್ಟು ಲಕ್ಷನಾ?

ಈ ವೇಳೆ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ರೂಪ್ಸಾ ಕಾಲಿಗೆ ಮುತ್ತಿಟ್ಟಿರುವ ಫೋಟೋ ಅಪ್ಲೋಡ್ ಮಾಡಿ '#DanceGodess ಕಾಲಿಗೆ ಮುತ್ತಿಡುತ್ತಿದ್ದೇನೆ. #RupsaBatabyal ಕಂಗ್ರ್ಯಾಜುಲೇಶನ್.ನನ್ನ ಡಾರ್ಲಿಂಗ್ ಬೇಬಿ ನೀನು ಈ ಗೆಲುವಿಗೆ ನೀನು ಅರ್ಹಳು ' ಎಂದು ಬರೆದುಕೊಂಡಿದ್ದಾರೆ.

Scroll to load tweet…

ರಿಯಾಲಿಟಿ ಶೋನಲ್ಲಿ ರೂಪ್ಸಾಗೆ ಗುರು ಆಗಿದ್ದ ನಿಶಾಂತ್‌ ಭಟ್‌ಗೆ 5 ಲಕ್ಷ ರೂ ಬಹುಮಾನವಾಗಿ ನೀಡಲಾಗಿದೆ ಹಾಗೂ ತೇಜಸ್ ವರ್ಮಾ ರನ್ನರ್ ಆಪ್‌ ಟ್ರೋಫಿ ಗೆದ್ದಿದ್ದಾರೆ.