ಮುಂಬೈ ಎಂಬ ವಾಣಿಜ್ಯ ನಗರಿ ವರುಣ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಸುಮಾರು 40 ಮಂದಿ ಮಳೆಯಿಂದ ಸಂಭವಿಸಿದ ಅವಘಡಕ್ಕೆ ಅಸುನೀಗಿದ್ದಾರೆ. ಇಂಥ ಮಳೆಯಲ್ಲಿ ಅಲ್ಲಿಗ್ ಹೊರಟಿದ್ದ ಸ್ಯಾಂಡಲ್‌ವುಡ್ ಸ್ಟೈಲಿಶ್ ನಟಿ ಸಂಜನಾ ಗರ್ಲಾನಿಗೆ ಸಾಕಪ್ಪ ಸಾಕು, ಈ ಮುಂಬೈ ಸಹವಾಸ ಎನ್ನುವಂತಾಗಿದೆ. ಈ ಘಟನೆಯನ್ನು ಸಾರ್ವಜನಿಕರೊಂದಿಗೆ IGTV ವಿಡಿಯೋ ಮೊಲಕ ಅನುಭವ ಹಂಚಿಕೊಂಡು, ಜನರಲ್ಲಿ ಮುಂಬೈಗೆ ಹೋಗದಂತೆ ಮನವಿ ಮಾಡಿಕೊಂಡಿದ್ದಾರೆ.

ಬೆಳಗ್ಗೆ 8 ಗಂಟೆಗಿದ್ದ ಫ್ಲೈಟ್ ಹಿಡಿಯಲು ಸಂಜನಾ ಇಂದಿರಾ ನಗರ ಮನೆಯಿಂದ ಬೆಳಗ್ಗೆ 5.30ಕ್ಕೇ ಬಿಟ್ಟಿದ್ದರು. ಎಂಥದ್ದೂ ಸಮಸ್ಯೆ ಆಗದಂತೆ ಮುಂಜಾಗರೂಕರಾಗಿದ್ದರು. ಆದರೆ, ಮುಂಬೈ ಮಳೆ ಕೊಟ್ಟ ಕಾಟ ಮಾತ್ರ ಅಷ್ಟಿಷ್ಟಲ್ಲ.

ಸ್ಯಾಂಡಲ್‌ವುಡ್ ಇನ್ನೊಬ್ಬ ನಟಿಯಿಂದ #MeToo ಆರೋಪ

ಒಂದು ವಾರದಿಂದ ಮುಂಬೈಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಈ ಮಳೆಗಾಲದಲ್ಲಿ ಮಾತ್ರ ಮುಂಬೈಗೇ ಹೋಗಲೇ ಬಾರದು ಎನಿಸುುಂತಾಗಿದೆಯಂತೆ! ಜೋರು ಮಳೆ ಇದ್ದ ಕಾರಣ 8ಕ್ಕೆ ಹೊರಡಬೇಕಾದ ವಿಮಾನ ಮಧ್ಯಾಹ್ನ 12ಕ್ಕೆ ಹೊರಟಿತು. ಅದಕ್ಕೂ ಹಿಂದೆ ಹೋದ ವಿಮಾನ ಲ್ಯಾಂಡ್ ಆಗಲು ಸಮಸ್ಯೆಯಾಗಿ, ಉಳಿದ ವಿಮಾನಗಳ ಹಾರಾಟವೂ ಸಾಧ್ಯವಾಗಿರಲಿಲ್ಲ. ಲೇಟಾಗಿ ಹೊರಟರೂ ಮುಂಬೈನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಮಾತ್ರ ಇಳಿದಿದ್ದು ಹೈದರಾಬಾದ್‌ನಲ್ಲಂತೆ!

ಸರಿ ಎಲ್ಲೊ ವಿಮಾನ ನಿಲ್ತಲ್ಲ, ಸಾಕು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರೆ, ಮತ್ತೊಂದು ಆಘಾತ ಈ ಪ್ರಯಾಣಿಕರಿಗೆ ಕಾದಿತ್ತಂತೆ. ಯಾರಿಗೂ ಲಗ್ಗೇಜ್ ಬರಲೇ ಇಲ್ವಂತೆ! ಹೈದರಾಬಾದ್‌ನಿಂದ ತಾವು ಸೇರಬೇಕದ ಸ್ಥಳಕ್ಕೆ ತಲುಪಲು ಸ್ವಂತ ಖರ್ಚಿನಲ್ಲಿಯೇ ವ್ಯವಸ್ಥೆ ಮಾಡಿಕೊಂಡರೂ ಎಲ್ಲವೂ ಅವ್ಯವಸ್ಥೆಯಿಂದ ಕೂಡಿತ್ತಂತೆ. ಮಳೆಯಿಂದ ಸಂಬಂಧಿಸಿದ ವಿಮಾನ ಕಂಪನಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿಲ್ಲವೆಂದು ನೋವು ತೋಡಿಕೊಂಡಿದ್ದಾರೆ. ಏನಕ್ಕೂ ಹುಷಾರಾಗಿರಿ ಎಂದು ಜನರಿಗೆ ಮನವಿ ಮಾಡಿದ್ದಾರೆ ಸಂಜನಾ.