ಬೆಂಗಳೂರು (ಫೆ. 14): ಡಿ. ಎಸ್ ಮಂಜುನಾಥ್ ನಿರ್ಮಾಣ ಮಾಡಿರೋ ಕೆಮಿಸ್ಟ್ರಿ ಆಫ್ ಕರಿಯಪ್ಪ ಮೂಲಕ ಸಂಜನಾ ಆನಂದ್ ಎಂಬ ಸಾಫ್ಟ್ ವೇರ್ ಹುಡುಗಿ ನಾಯಕಿಯಾಗಿ ಆಗಮಿಸಿದ್ದಾರೆ. 

ಪೋಸ್ಟರ್‌ಗಳಿಂದಲೇ ಗಮನ ಸೆಳೆಯುತ್ತಿದೆ ’ಕೆಮಿಸ್ಟ್ರಿ ಆಫ್ ಕರಿಯಪ್ಪ’

ಮೊದಲ ಹೆಜ್ಜೆಯಲ್ಲಿಯೇ ಗಟ್ಟಿತನ ಹೊಂದಿರೋ ಪಾತ್ರವೊಂದು ಸಿಕ್ಕ ತುಂಬು ಖುಷಿ, ಈ ಮೂಲಕವೇ ನಾಯಕಿಯಾಗಿ ನೆಲೆ ನಿಲ್ಲೋ ಭರವಸೆ ಸಂಜನಾಗಿದೆ. ಭರತನಾಟ್ಯ ಬಿಟ್ಟರೆ ನಟನೆಯ ಬಗ್ಗೆ ಅಷ್ಟಾಗಿ ಗೊತ್ತಿರದಿದ್ದ ಸಂಜನಾರನ್ನ ಚಿತ್ರತಂಡ ಪರಿಪೂರ್ಣ ನಟಿಯಾಗಿ ರೂಪಿಸಿದೆ. 

ಈ ಚಿತ್ರದಲ್ಲಿ ಅವರದ್ದು ಅದಾಗ ತಾನೇ ಮದುವೆಯಾಗಿ ಕೆಲ ತಪ್ಪು ತಿಳುವಳಿಕೆಯಿಂದ ಯಡವಟ್ಟು ಮಾಡಿಕೊಳ್ಳೋ ಹೆಣ್ಣುಮಗಳ ಪಾತ್ರ. ಅದು ಈ ಕಾಲಮಾನದ ನವ ವಿವಾಹಿತ ಹೆಣ್ಣುಮಕ್ಕಳ ಪ್ರಾತಿನಿಧಿಕ ಪಾತ್ರದಂತಿದೆಯಂತೆ.

ಸಿಕ್ಕಾಪಟ್ಟೆ ಎಂಟರ್‌ಟೇನ್ಮೆಂಟ್ ನೀಡಲಿದೆ ’ಕೆಮಿಸ್ಟ್ರಿ ಆಫ್ ಕರಿಯಪ್ಪ’!

ಮೂಲತಃ ಡೆಲ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದ ಸಂಜನಾ ಅದೆಷ್ಟೋ ಸಲ ಬೇಕಾದ ಭಾವ ಹೊಮ್ಮಿಸಲಾಗದೆ ಕ್ಯಾಮೆರಾ ಮುಂದೆ ಕೈ ಚೆಲ್ಲಿ ನಿಂತದ್ದೂ ಇದೆಯಂತೆ. ಅಂಥಾ ಸಂದರ್ಭದಲ್ಲಿ ಧೈರ್ಯ ತುಂಬಿ ನಟನೆ ತೆಗೆಸಿದ ಕೀರ್ತಿ ತಬಲಾ ನಾಣಿಯವರಿಗೇ ಸಲ್ಲಬೇಕು. ಇನ್ನುಳಿದಂತೆ ನಿರ್ದೇಶಕ ಕುಮಾರ್ ಕೂಡಾ ಸಾಥ್ ಕೊಟ್ಟಿದ್ದರಿಂದಲೇ ಸಮರ್ಥವಾಗಿ ನಟಿಸಲು ಸಾಧ್ಯವಾಯ್ತೆನ್ನೋದು ಸಂಜನಾ ಅಭಿಪ್ರಾಯ. ಈ ಚಿತ್ರ ಖಂಡಿತಾ ಸೂಪರ್ ಹಿಟ್ಟಾಗುತ್ತದೆ ಎಂಬ ಭರವಸೆ ಹೊಂದಿರೋ ಸಂಜನಾ ಈ ಚಿತ್ರದ ಪ್ರಭೆಯಲ್ಲಿಗೇ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿದ್ದಾರಂತೆ!