ಪೋಸ್ಟರ್‌ಗಳಿಂದಲೇ ಗಮನ ಸೆಳೆಯುತ್ತಿದೆ ’ಕೆಮಿಸ್ಟ್ರಿ ಆಫ್ ಕರಿಯಪ್ಪ’

ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ತೆರೆಗೆ ಬರಲು ಸಿದ್ಧವಾಗಿ ನಿಂತಿದೆ.  ತಾಜಾತನದಿಂದ ಕೂಡಿದ ಪೋಸ್ಟರ್ ಗಳ  ಮೂಲಕ ಗಮನ ಸೆಳೆಯುತ್ತಾ, ಟ್ರೈಲರ್ ಮೂಲಕ ಒಟ್ಟಾರೆ ಆಂತರ್ಯವನ್ನ ತೆರೆದಿಟ್ಟಿರೋ ಈ ಚಿತ್ರವೀಗ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿದೆ. 

Sandalwood movie Chemistry Of Kariyappa funny combination of father and son

ಬೆಂಗಳೂರು (ಫೆ. 14): ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ತೆರೆಗೆ ಬರಲು ಸಿದ್ಧವಾಗಿ ನಿಂತಿದೆ.  

ತಾಜಾತನದಿಂದ ಕೂಡಿದ ಪೋಸ್ಟರ್ ಗಳ  ಮೂಲಕ ಗಮನ ಸೆಳೆಯುತ್ತಾ, ಟ್ರೈಲರ್ ಮೂಲಕ ಒಟ್ಟಾರೆ ಆಂತರ್ಯವನ್ನ ತೆರೆದಿಟ್ಟಿರೋ ಈ ಚಿತ್ರವೀಗ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿದೆ. ಇದರ ಮೂಲಕವೇ ಕಿರಿಕ್ ಪಾರ್ಟಿ ಚಿತ್ರದಲ್ಲಿ ಕರ್ಣನ ಗ್ಯಾಂಗಿನಲ್ಲಿದ್ದ ಹುಡುಗ ಚಂದನ್ ಆಚಾರ್ ನಾಯಕನಾಗಿ ನವ ಯಾನ ಆರಂಭಿಸಿದ್ದಾರೆ.

ಸಿಕ್ಕಾಪಟ್ಟೆ ಎಂಟರ್‌ಟೇನ್ಮೆಂಟ್ ನೀಡಲಿದೆ ’ಕೆಮಿಸ್ಟ್ರಿ ಆಫ್ ಕರಿಯಪ್ಪ’!

ರಂಗಿತರಂಗದಲ್ಲೊಂದು ಪುಟ್ಟ ಪಾತ್ರದ ಮೂಲಕವೇ ನಟನಾಗಿ ಬೆಳಕಿಗೆ ಬಂದವರು ಚಂದನ್. ಆ ಬಳಿಕ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಮತ್ತಷ್ಟು ಗುರುತಾಗಿದ್ದ ಚಂದನ್ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಲ್ಲಿ ಅದೃಷ್ಟವೆಂಬಂಥಾ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಇದು ಅಪ್ಪ ಮಗನ ಕೆಮಿಸ್ಟ್ರಿಯ ಸುತ್ತಾ ಸುತ್ತೋ ಕಥೆ ಹೊಂದಿರುವ ಸಿನಿಮಾ. ತಬಲಾ ನಾಣಿ ಮತ್ತು ಚಂದನ್ ಪಾತ್ರಗಳೇ ಇಡೀ ಚಿತ್ರದ ಕೇಂದ್ರ ಬಿಂದು. ನಟನೆಗೆ ಅವಕಾಶವಿರುವ, ಸವಾಲುಗಳೂ ಧಾರಾಳವಾಗಿರೋ ಪಾತ್ರವದು. ಅದನ್ನ ಚಂದನ್ ಸಲೀಸಾಗಿಯೇ ನಿಭಾಯಿಸಿದ್ದಾರಂತೆ. ವಿಭಿನ್ನವಾದ, ತಾಜಾ ತಾಜ ಕಥೆ ಹೊಂದಿರೋ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಚಂದನ್ ಸಿನಿ ಕರಿಯರಿಗೊಂದು ಹೊಸ ದಾರಿ ಗೋಚರಿಸೋ ಲಕ್ಷಣಗಳಿವೆ ಎನ್ನಲಾಗುತ್ತಿದೆ. 

Latest Videos
Follow Us:
Download App:
  • android
  • ios