ಟಾಲಿವುಡ್ ಮೊಸ್ಟ್ ಬ್ಯೂಟಿಪುಲ್, ಬ್ರಿಲಿಯಂಟ್ ನಟಿ ಸಮಂತಾ ಕಂಡ್ರೆ ಯಾರ್ತಾನೆ ಫಿದಾ ಅಗೋಲ್ಲ ಹೇಳಿ? ಆಕೆ ಲೈಫ್‌ಸ್ಟೈಲ್ ಹಾಗೂ ಹ್ಯಾಬಿಟ್‌ನ ಫಾಲೋ ಮಾಡುವವರು ಒಬ್ಬರಾ ಇಬ್ಬರಾ.? 

ಶೂಟಿಂಗ್‌ಗೂ ಮುನ್ನ ನರ್ವಸ್ ಆಗ್ತಾರಂತೆ ಈ ಬಹುಭಾಷಾ ನಟಿ

ಇನ್ನು ನೀರು ಬಗ್ಗೆ ಯಾಕೀ ನಿರ್ಧಾರ ಅಂತಾನಾ, ಹೌದು ಸಮಂತಾ ಈಗ ಹೊಸ ಚಾಲೆಂಜ್‌ ಸ್ವೀಕರಿಸಿದ್ದಾರೆ ಅದುವೇ ನೀರನ್ನು ಮಿತವಾಗಿ ಬಳಸುವುದು. ಹೈದರಬಾದ್‌ನಲ್ಲಿ  ನೀರಿನ ಕೊರತೆ ಹೆಚ್ಚಾಗಿದ್ದು ಈ ಕಾರಣಕ್ಕೆ ಸರ್ಕಾರವು ಬೋರ್ ಹಾಕಲು ಮುಂದಾಗಿರುವುದನ್ನು ತಡೆಯಬೇಕಿದ್ದು, ಇದಕ್ಕಾಗಿ ಕಡಿಮೆ ನೀರು ಬಳಕೆ ಮಾಡಬೇಕಿದೆ. 

ಜೂಲೈ 21ರಂದು 'ಒನ್ ಬಕೆಟ್ ವಾಟರ್ ನಲ್ಲಿ' ಎಂಬ ಅಭಿಯಾನ ಶುರು ಮಾಡುತ್ತಿದ್ದಾರೆ.  ಆ ದಿನದಂದು ಯಾರು ಬ್ರಶ್ ಮಾಡಲು, ಸ್ನಾನ ಮಾಡಲು, ಕೈ ತೊಳೆಯಲು ಹಾಗೂ ಇನ್ನಿತರ ಕೆಲಸಕ್ಕೆ ಒಂದೇ ಬಕೆಟ್‌ನಲ್ಲಿ ನೀರು ಬಳಸಬೇಕು. ಇದರ ಬಗ್ಗೆ ಸ್ವತಃ ಸಮಂತಾ ರೀಟ್ವೀಟ್ ಮಾಡಿ ಅಭಿಮಾನಿಗಳಿಗೂ ಪಾಲಿಸುವಂತೆ ಕೇಳಿಕೊಂಡಿದ್ದಾರೆ.