ಟಾಲಿವುಡ್ ನಟಿ ಸಮಂತಾ ಅಭಿನಯದ ‘ಓಹ್ ಬೇಬಿ’ ಸಿನಿಮಾ ಭರ್ಜರಿ ಯಶಸ್ಸಿನಿಂದ ಮುನ್ನುಗ್ಗುತ್ತಿದೆ. ಚಿತ್ರ ಬಿಡುಗಡೆಯಾದ ಮೊದಲ ವಾರವೇ 20 ಕೋಟಿ ಕಲಕ್ಷನ್ ಮಾಡಿದೆ. 

'ಪದ್ಮಾವತಿ' ಜಪ ಮಾಡಿದ್ಲು ಪದ್ದು; ಹುಡುಗರು ಜಪ ಮಾಡಿದ್ದು ಇವರದ್ದು!

ಈಗ ಸಮಂತಾ ಓಹ್ ಬೇಬಿಗೆ ಗುಡ್ ಬೈ ಹೇಳಿದ್ದಾರೆ. ಅರೇ, ಸಿನಿಮಾ ಸಕ್ಸಸ್ ನಲ್ಲಿದೆ, ಎಲ್ಲವೂ ಚೆನ್ನಾಗಿದೆ ಎನ್ನುವಾಗ ಸಮಂತಾ ಯಾಕೆ ಗುಡ್ ಬೈ ಹೇಳಿದ್ರು ಎಂದು ಅಚ್ಚರಿಪಡಬೇಡಿ. ಅವರು ಗುಡ್ ಬೈ ಹೇಳಿದ್ದು ಓಹ್ ಬೇಬಿ ಸಿನಿಮಾ ಪ್ರಮೋಶನ್ ಗೆ.

'ಕೋಟ್ಯಧಿಪತಿ'ಯಲ್ಲಿ ಐಎಎಸ್‌ ಆಕಾಂಕ್ಷಿಗೂ ಗೊತ್ತಿಲ್ಲ ಈ ಪ್ರಶ್ನೆಗೆ ಉತ್ತರ! 

ತಮಿಳು, ಕನ್ನಡದಲ್ಲಿ ಹಿಟ್ ಆಗಿದ್ದ '96' ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ಸಮಂತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ನಾಗಾರ್ಜುನ ಅಭಿನಯದ ಮನ್ಮಥುಡು 2 ನಲ್ಲಿ ಗಸ್ಟ್ ಅಪಿಯರೆನ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಬೇರೆ ಬೇರೆ ಪ್ರಾಜೆಕ್ಟ್ ನಲ್ಲಿ ಬ್ಯುಸಿ ಇರುವುದರಿಂದ ಓಹ್ ಬೇಬಿ ಪ್ರಮೋಶನ್ ಗೆ ಗುಡ್ ಬೈ ಹೇಳಿದ್ದಾರೆ.