ಬಹುಭಾಷ ನಟಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್‌ನಲ್ಲಿ ಮತ್ತೊಂದು ಕಿರಿಕ್ ಎದುರಿಸಬೇಕಾಗಿದೆ. ಇದಕ್ಕೆ ಅವರೊಂದಿಗೆ ಸಾಥ್ ನೀಡಲು ತಮಿಳು ನಟ ಕಾರ್ತಿಕ್ ಜೊತೆಯಾಗಿದ್ದಾರೆ. ಏನಪ್ಪಾ ಇದು ಅಂತಾನಾ? ಇಲ್ಲಿದೆ ನೋಡಿ. 

ಟಾಲಿವುಡ್‌ನಲ್ಲಿ ಹೊಸದೊಂದು ಸಿನಿಮಾ ಮಾಡುವುದಾಗಿ ರಶ್ಮಿಕಾ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಚಿತ್ರದ ಟೈಟಲ್ ಇನ್ನೂ ಪಕ್ಕಾ ಆಗದಿದ್ದರೂ ಪಾತ್ರಧಾರಿಗಳು ಯಾರೆಂದು ಚಿತ್ರತಂಡ ತೀರ್ಮಾನ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ರಶ್ಮಿಕಾಗೆ ಜೋಡಿ ಆಗಿ ತಮಿಳು ನಟ ಕಾರ್ತಿಕ್ ಜೋಡಿಯಾಗುತ್ತಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ಗರುಡ ಅಲಿಯಾಸ್ ರಾಮ್ ವಿಲನ್ ಆಗಿ ನಟಿಸುತ್ತಿದ್ದಾರೆ. ಕೆಜಿಎಫ್ ಚಿತ್ರದ ಮೂಲಕ ಬಿಗ್ ಹಿಟ್ ಕಂಡಂತಹ ವಿಲನ್‌ಗಳಲ್ಲಿ ರಾಮ್ ಕೂಡಾ ಒಬ್ಬರು.

’ಸಿಂಗಲ್ ಫಾರ್ ಎವರ್’; ರಶ್ಮಿಕಾ ಮಂದಣ್ಣ ಕೊಡಲಿದ್ದಾರೆ ಇಂಟರೆಸ್ಟಿಂಗ್ ನ್ಯೂಸ್!

ಈ ಚಿತ್ರವನ್ನು ಭಾಗ್ಯರಾಜ್‌ ಕಣ್ಣನ್ ನಿರ್ಮಾಣ ಮಾಡುತ್ತಿದ್ದು ಇದರಲ್ಲಿ ಗರುಡಾ ರಾಮ್ ರಶ್ಮಿಕಾಳಿಗೆ ವಿಲನ್ ಆಗಿ ಎದುರಾಗುತ್ತಿದ್ದಾರೆ.