ಬೆಂಗಳೂರು (ಮಾ. 30): ನಟಿ ರಶ್ಮಿಕಾ ಮಂದಣ್ಣ ಕನ್ನಡ-ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಡಿಯರ್ ಕಾಮ್ರೆಡ್ ಸಿನಿಮಾದ ಟೀಸರ್ ನಲ್ಲಿ ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ಸೀನ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸೆನ್ಸೇಷನ್ ಆಗಿದ್ದರು. ಇದನ್ನು ಬಿಟ್ಟರೆ ತೀರಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಮಾತನಾಡಿದ್ದು ಕಡಿಮೆ. 

ಇದೀಗ ಇಂದು ಸಂಜೆ 6 ಗಂಟೆಗೆ ಪ್ರಕಟಣೆಯೊಂದನ್ನು ಮಾಡಲಿದ್ದೇನೆ ಎಂದು ಅಚ್ಚರಿ ಮೂಡಿಸಿದ್ದಾರೆ. ಯಾವ ವಿಷಯದ ಬಗ್ಗೆ ಇರಬಹುದು ಎಂಬ ಕುತೂಹಲ ಅಭಿಮಾನಿಗಳದ್ದು. ಟ್ವೀಟ್ ನಲ್ಲಿ ಸಿಂಗಲ್ ಫಾರ್ ಎವರ್ ಎಂದು ಬರೆದಿದ್ದು ಕುತೂಹಲ ಹೆಚ್ಚಾಗುವಂತೆ ಮಾಡಿದೆ. 

 

ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಆದ ನಂತರ ವಿಜಯ್ ದೇವರಕೊಂಡ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಲವ್ ಬ್ರೇಕ್ ಅಪ್ ಆದ ನಂತರ ಸಿಂಗಲ್ ಫಾರ್ ಎವರ್ ಎಂದು ಹಾಕಿರುವುದು ನೋಡಿದರೆ ನಾನಿನ್ನು ಸಿಂಗಲ್ ಆಗಿರುತ್ತೇನೆ ಎಂದಿರಬಹುದಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.