ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಸಿನಿಮಾ ಇಂಡಸ್ಟ್ರೊಯಲ್ಲಿ ಮಿಂಚುತ್ತಿದ್ದಾರೆ. ಖ್ಯಾತ ನಟ ವಿಜಯ್ ಗೆ ನಾಯಕಿಯಾಗಿ ತಮಿಳು ಇಂಡಸ್ಟ್ರಿಗೂ ಕಾಲಿಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದೊಂದು ಬಿಗ್ ಬಜೆಟ್ ಸಿನಿಮಾವಾಗಿದ್ದು ರಶ್ಮಿಕಾ ಸಂಭಾವನೆಯೂ ಹೆಚ್ಚಾಗಿದೆ ಎನ್ನಲಾಗಿದೆ. 

ಟ್ರೋಲ್ ಆಯ್ತು ಸಮೀರಾ ರೆಡ್ಡಿ ಅಂಡರ್‌ವಾಟರ್ ಫೋಟೋಶೂಟ್‌!

ರಶ್ಮಿಕಾ ವಿಜಯ್ ಜೊತೆ ತಳಪತಿ 64 ಎನ್ನುವ ಸಿನಿಮಾದಲ್ಲಿ ನಟಿಸಲಿದ್ದು ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. 

ಈ ಚಿತ್ರದಲ್ಲಿ ರಶ್ಮಿಕಾ ಮಾತ್ರವಲ್ಲ ರಾಶಿ ಖನ್ನಾ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಪಡೆದ ಸಂಭಾವನೆ ಬರೋಬ್ಬರಿ 1 ಕೋಟಿ! 

ಅವಿವಾಹಿತ ಈ ನಟಿಗೆ 3 ವರ್ಷದ ಮಗಳಿದ್ದಾಳೆ!

ರಶ್ಮಿಕಾ ಸಕ್ಸಸ್ ಗ್ರಾಫ್ ಏರಿದಂತೆ ಸಂಭಾವನೆಯೂ ಏರಿದೆ. ತಳಪತಿ 64 ಚಿತ್ರಕ್ಕೆ ಬರೋಬ್ಬರಿ 1 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಬೇರೆ ಎಲ್ಲಾ ಚಿತ್ರಗಳನ್ನು ಬಿಟ್ಟು ಈ ಚಿತ್ರಕ್ಕೆ ಒಪ್ಪಿಕೊಂಡಿದ್ದಕ್ಕೆ ಚಿತ್ರತಂಡ 1 ಕೋಟಿ ಆಫರ್ ಮಾಡಿದೆ ಎನ್ನಲಾಗಿದೆ. ಇನ್ನೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.