ಸೌತ್ ಇಂಡಿಯಾದ ದಿ ಮೋಸ್ಟ್ ಹ್ಯಾಪನಿಂಗ್ ನಟಿ ರಶ್ಮಿಕಾ ಮಂದಣ್ಣ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಟ್ ಸನ್‌ ಫ್ಲವರ್‌ ತರಹದ ಫೋಟೋ ಅಪ್ಲೋಡ್ ಮಾಡಿ ಸುದ್ದಿಯಾಗುತ್ತಿದ್ದಾರೆ.

'ಕರ್ನಾಟಕದ ಕ್ರಶ್' ಕೈಯಲ್ಲಿ ಸಾಲು ಸಾಲು ಸಿನಿಮಾಗಳು ಇದ್ದು ಕೆಲ ದಿನಗಳ ಹಿಂದೆ ಹೈ ಪೇಮೆಂಟ್ ಡಿಮ್ಯಾಂಡ್‌ ಮಾಡಿರುವುದಾಗಿ ಕೆಲ ಮೂಲಗಳಿಂದ ಮಾತುಗಳು ಕೇಳಿಬರುತಿತ್ತು. ಈಗ ಈ ನಟಿ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಫೋಟೋ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ.

ರಶ್ಮಿಕಾ ಮಂದಣ್ಣ ಸಕ್ಸಸ್ ಏರುತ್ತಿದ್ದಂತೆ ಸಂಭಾವನೆಯೂ ಏರುತ್ತಿದೆ!

ಆಫೀಸಿನ ವಾತಾವರಣದಲ್ಲಿ ಹಳದಿ ಬಣ್ಣದ ಟಾಪ್‌ ಧರಿಸಿ ಬಿಗ್‌ ಸ್ಮೈಲ್‌ ಕೊಟ್ಟಿರುವ ಫೋಟೋ ಮತ್ತೊಂದರಲ್ಲಿ ಹಾಫ್‌ ಶರ್ಟ್‌ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

View post on Instagram

ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಹೃದಯ ಕದ್ದಿರುವ ರಶ್ಮಿಕಾ 'ಗೀತಾ ಗೋವಿಂದಂ' ಚಿತ್ರದ ಲಿಪ್ ಲಾಕ್‌ ಸೀನ್‌ ಹೆಚ್ಚು ಚರ್ಚೆ ಆಗುವಂತೆ ಮಾಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಇರುವ ಈ 'ಕಿರಿಕ್ ಪಾರ್ಟಿ' ನಟಿ ಪ್ರತಿಯೊಬ್ಬ ಫ್ಯಾನ್‌ ಕೇಳುವ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಲು ಪ್ರಯತ್ನಿಸುತ್ತಾರೆ.

View post on Instagram