ರಶ್ಮಿಕಾ ಸಿನಿಮಾ ಅಂತಾನೋ ಅಥವಾ ವಿಜಯ್ ದೇವರಕೊಂಡ ಕನ್ನಡದಲ್ಲಿ ಅಲೆ ಎಬ್ಬಿಸುತ್ತಾರೋ ಅಂತಾನೋ ಏನೋ ಗೊತ್ತಿಲ್ಲ ಬಟ್ ಡಿಯರ್ ಕಾಮ್ರೇಡ್ ಸಿನಿಮಾ ಮಾತ್ರ ಒಂದಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದೆ.

ಪ್ರೇಮಂ ನಟಿ 2 ಕೋಟಿ ರೂ. ಆ್ಯಡ್ ರಿಜೆಕ್ಟ್ ಮಾಡಿದ್ದು ಇದಕ್ಕಂತೆ!

ಡಿಯರ್ ಕಾಮ್ರೇಡ್ ಮೊದಲ ಪ್ರೆಸ್ ಮೀಟ್‌ಗೆಂದು ಬೆಂಗಳೂರಿಗೆ ಆಗಮಿಸಿದ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಸಿನಿಮಾ ಶೂಟಿಂಗ್ ಸಮಯದಲ್ಲಿ ನಡೆದ ತಮಾಷೆ, ಚಿತ್ರದ ಆಯ್ಕೆ ಬಗ್ಗೆ ಮಾತನಾಡುತ್ತಿದ್ದರು. ವಿಷಯವೇನೆಂದರೆ ಡಿಯರ್ ಕಾಮ್ರೇಡ್‌ ಚಿತ್ರಕ್ಕೆ ಮೊದಲು ಸಾಯಿ ಪಲ್ಲವಿಯನ್ನು ಅಪ್ರೋಚ್ ಮಾಡಲಾಗಿತ್ತಂತೆ. ಆದರೆ ಕಾರಣಾಂತರದಿಂದ ಅವರು ಒಪ್ಪಲಿಲ್ಲ. ನಂತರ ರಶ್ಮಿಕಾ ಕಥೆ ಕೇಳಿ ಓಕೆ ಮಾಡಿದ್ರಂತೆ!

ಚಿತ್ರ ಫ್ಲಾಪ್: ಅರ್ಧ ಸಂಭಾವನೆ ಮರಳಿಸಿದ ಮೊದಲ ನಟಿ!

ರಶ್ಮಿಕಾ ಮಂದಣ್ಣ ಬದಲು ಸಾಯಿ ಪಲ್ಲವಿ ಈ ಸಿನಿಮಾದಲ್ಲಿ ನಟಿಸಿದ್ದರೆ ಈ ಮಟ್ಟಿಗೆ ಸುದ್ದಿಯಾಗುತ್ತಿತ್ತೋ ಇಲ್ವೋ ಗೊತ್ತಿಲ್ಲ ಬಟ್ ರಶ್ಮಿಕಾ- ವಿಜಯ್ ಮಾತ್ರ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.