ಆರ್. ಕೇಶವ ಮೂರ್ತಿ, ಕನ್ನಡ ಪ್ರಭ

1)ತುಂಬಾ ವರ್ಷಗಳ ನಂತರ ಪ್ರೇಕ್ಷಕರ ಮುಂದೆ ಮತ್ತೆ ಬರುತ್ತಿದ್ದೀರಲ್ಲ?

ಹೌದು, ನನಗೆ ಸಾರ್ವಜನಿಕ ಜೀವನ, ಸ್ಟಾರ್‌ಡಮ್, ಇಮೇಜ್ ಕೊಟ್ಟಿದ್ದು ಚಿತ್ರರಂಗ. ಆದರೆ, ರಾಜಕೀಯಕ್ಕೆ ಬಂದ ಮೇಲೆ ಇಲ್ಲೇ ಬ್ಯುಸಿಯಾದೆ. ಶಿವಣ್ಣ ಜತೆ ನಟಿಸಿದ ‘ಆರ್ಯನ್’ ನನ್ನ ನಟನೆಯ ಕೊನೆಯ ಪ್ರದರ್ಶನದ ಸಿನಿಮಾ. ಈಗ ‘ನಾಗರಹಾವು’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿರುವೆ. ತುಂಬಾ ವರ್ಷಗಳ ನಂತರ ಹೆಣ್ಣುಮಗಳು ತನ್ನ ತವರು ಮನೆಗೆ ಹೋದಾಗ ಉಂಟಾಗುವ ಖುಷಿ ಹೇಳಿಕೊಳ್ಳೊಕ್ಕೆ ಆಗಲ್ಲ ನೋಡಿ, ಅಂಥದ್ದೇ ಸಂ‘್ರಮ ಈಗ ನನ್ನದು. ಈ ಕಾರಣಕ್ಕೂ ‘ನಾಗರಹಾವು’ ನನಗೆ ತುಂಬಾ ಮಹತ್ವದ ಸಿನಿಮಾ ಅನಿಸುತ್ತಿದೆ. ಹಾಗಂತ ಇದು ನನ್ನ ರೀ ಎಂಟ್ರಿ ಸಿನಿಮಾ ಅಲ್ಲ.

2)ಹಾಗಾದರೆ ಈ ಚಿತ್ರದ ನಂತರ ಮತ್ತೆ ನೀವು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವ ಸಾ‘್ಯತೆಗಳು ಇಲ್ಲವೇ?

ಇದು ನನ್ನ ರೀ ಎಂಟ್ರಿ ಸಿನಿಮಾ ಆಗಿದ್ದರೆ ಈ ಪ್ರಶ್ನೆಗೆ ಉತ್ತರಿಸಬಹುದಿತ್ತು. ನಿಮಗೇ ಗೊತ್ತಿರುವಂತೆ ನಾನು ಚಿತ್ರರಂಗದಲ್ಲಿ ಇದ್ದಾಗಲೇ ಒಪ್ಪಿಕೊಂಡ ಸಿನಿಮಾ ಇದು. ನಾಲ್ಕೆ‘ದು ವರ್ಷಗಳ ಹಿಂದೆಯೇ ಶುರುವಾಗಿತ್ತು. ಬೇರೆ ಬೇರೆ ಕಾರಣಗಳಿಗೆ ತಡವಾಗುತ್ತ ಬಂತು. ಹೀಗಾಗಿ ನಾನು ಚಿತ್ರರಂಗ ಬಿಟ್ಟು ರಾಜಕೀಯಕ್ಕೆ ಬಂದ ಮೇಲೆ ತೆರೆ ಕಾಣುತ್ತಿದೆ. ಒಂದು ಒಳ್ಳೆಯ ಸಿನಿಮಾ, ಕನ್ನಡದ ಮಾರುಕಟ್ಟೆಯನ್ನು ವಿಸ್ತರಿಸುವ ಚಿತ್ರ ಎನ್ನುವ ಕಾರಣಕ್ಕೆ ರಾಜಕೀಯದ ಒತ್ತಡಗಳ ನಡುವೆಯೂ ಈ ಚಿತ್ರದ ಪ್ರಚಾರಕ್ಕೆ ಬಂದಿದ್ದೇನೆ. ಹೀಗಾಗಿ ಈ ಚಿತ್ರದ ನಂತರ ಮತ್ತೆ ಚಿತ್ರರಂಗಕ್ಕೆ ಬರುವ ಯೋಚನೆ ಸದ್ಯಕ್ಕೆ ನನ್ನ ತಲೆಯಲ್ಲಿ ಇಲ್ಲ. ಆದರೆ, ದೂರದಲ್ಲೇ ನಿಂತು ಚಿತ್ರರಂಗವನ್ನು ವೀಕ್ಷಿಸುತ್ತಿರುತ್ತೇನೆ.

3)ಒಂದು ವೇಳೆ ಚಿತ್ರರಂಗ, ನಿಮ್ಮ ಅಭಿಮಾನಿಗಳಿಂದ ಒತ್ತಡ ಬಂದರೆ ಸಿನಿಮಾಗಳಲ್ಲಿ ನಟಿಸುತ್ತೀರಾ?

ಅಯ್ಯೋ ಇಲ್ಲ. ನಾನು ರಾಜಕಾರಣದಲ್ಲೇ ತುಂಬಾ ಬ್ಯುಸಿಯಾಗಿದ್ದೇನೆ. ಸಿನಿಮಾಗಳನ್ನು ಒಪ್ಪಿಕೊಂಡು ಪಾತ್ರ ಮಾಡುವಷ್ಟು ಸಮಯ ನನ್ನ ಬಳಿ ಇಲ್ಲ. ಆದರೆ, ಬಿಡುವಿದ್ದಾಗ ಚಿತ್ರರಂಗಕ್ಕೆ ಸಂಬಂಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ. ಯಾಕೆಂದರೆ ಇಲ್ಲಿವರೆಗೂ ನಾನು ನಟಿಯಾಗಿ ಜನರಿಗೆ ಹತ್ತಿರವಾಗಿದ್ದೆ. ಈಗ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಅವರಿಗೆ ಮತ್ತಷ್ಟು ಸನಿಹವಾಗಬೇಕಿದೆ.

4)ವಿಷ್ಣು ಮರುಸೃಷ್ಟಿ ಇಮೇಜ್ ಮುಂದೆ ನೀವು ಕಾಣಿಸಿಕೊಂಡ ಅನು‘ವ ಹೇಗಿತ್ತು?

ನನ್ನ ಬಹು ವರ್ಷಗಳ ಆಸೆ ಈಡೇರಿದ ‘ಾವನೆ ನನ್ನದು. ಯಾಕೆಂದರೆ ನಾನು ವಿಷ್ಣುವ‘ರ್ನ್ ಅವರ ಜತೆ ಸಿನಿಮಾ ಮಾಡಬೇಕೆಂದು ಸಾಕಷ್ಟು ಬಾರಿ ಪ್ರಯತ್ನಿಸಿದ್ದೆ. ಅವರಿಗೂ ನನ್ನೊಟ್ಟಿಗೆ ಸಿನಿಮಾ ಮಾಡುವ ಆಸೆ ಇತ್ತು. ಆದರೆ ಇಬ್ಬರಿಗೂ ಅಂಥ ಅವಕಾಶ ಬರಲೇ ಇಲ್ಲ. ಅವರ ಕೊನೆಯ ಚಿತ್ರಗಳಾದ ‘ಆಪ್ತಮಿತ್ರ’ ಹಾಗೂ ‘ಆಪ್ತರಕ್ಷಕ’ ಚಿತ್ರಗಳನ್ನು ಹಲವು ಬಾರಿ ನೋಡಿದ್ದೇನೆ. ಆದರೆ, ಅವರೊಂದಿಗೆ ನಟಿಸಬೇಕೆಂಬ ನನ್ನ ಕನಸು ‘ನಾಗರಹಾವು’ ಚಿತ್ರದಿಂದ ಈಡೇರಿದೆ.

5)ಸಿನಿಮಾ ಸೆಟ್ಟೇರುವಾಗಲೇ ವಿಷ್ಣು ಅವರನ್ನು ಮರು ಸೃಷ್ಟಿಸುವ ಯೋಚನೆ ಇತ್ತಾ?

ಇಲ್ಲ. ‘ನಾಗರಹಾವು’ ಎನ್ನುವ ಹೆಸರಿನಲ್ಲಿ ನಾನು ಮತ್ತು ದಿಗಂತ್ ಜೋಡಿಯಾಗಿ ನಟಿಸಿಸುವುದು ಎನ್ನುವುದಕ್ಕೆ ನಮ್ಮ ಮುಂದಿದ್ದ ಯೋಚನೆ. ಜತೆಗೆ ಅದೇ ರೀತಿ ಅ‘ರ್ ಸಿನಿಮಾ ಮಾಡಿ ಮುಗಿಸಿದ ಮೇಲೆ ಚಿತ್ರದ ರಷಸ್ ನೋಡಿದ್ವಿ. ಚಿತ್ರಕ್ಕೆ ಏನೋ ಬೇಕು ಅನಿಸುತ್ತಿತ್ತು. ಜತೆಗೆ ಕೋಡಿ ರಾಮಕೃಷ್ಣ ಕೂಡ ಇದು ತಮ್ಮ ್ಲೇವರ್ ಸಿನಿಮಾ ಅಲ್ಲ. ತೀರಾ ಸಾ‘ಾರಣ ಸಿನಿಮಾ ಅಂತ ಅವರಿಗೇ ಅನಿಸಿತು. ಈ ಕಾರಣಕ್ಕೆ ಚಿತ್ರಕ್ಕೆ ಇನ್ನೂ ಏನೋ ಬೇಕು ಎನಿಸಿ ವಿಷ್ಣು ಅವರನ್ನು ಮರು ಸೃಷ್ಟಿ ಮಾಡುವ ಯೋಚನೆಗೆ ನಿರ್ದೇಶಕರೇ ಚಾಲನೆ ಕೊಟ್ಟರು. ಈಗಿನ ಟೆಕ್ನಾಲಜಿ ಬಳಸಿಕೊಂಡು ವಿಷ್ಣು ಅವರನ್ನು ಮರು ಸೃಷ್ಟಿ ಮಾಡಲು ಸಾ‘್ಯವಿಲ್ಲವೇ? ಅವರದ್ದೇ ನಟನೆಯ ಹೆಸರು ಬಳಸಿಕೊಂಡಿರುವುದರಿಂದ ಅವರನ್ನೇ ಚಿತ್ರದಲ್ಲಿ ತರುವ ಬಗ್ಗೆ ಯೋಚಿಸಿದಾಗ ಮೂಡಿದ್ದೇ ವಿಷ್ಣು ಮರುಸೃಷ್ಟಿಯ ಜಾದು. ಆಗ ಸಾಜಿದ್ ಖುರೇಷಿ ಅವರು ಒಪ್ಪಿಕೊಂಡು ಬಹು ಕೋಟಿ ವೆಚ್ಚ ಮಾಡಿ 9 ನಿಮಿಷಗಳ ಕಾಲ ವಿಷ್ಣು ಅವರನ್ನು ತೆರೆ ಮೇಲೆ ತಂದಿದ್ದಾರೆ. ಇದು ನಿರ್ಮಾಪಕ ಮತ್ತು ನಿರ್ದೇಶಕರ ಸಾಹಸ ಅಂತಲೇ ಹೇಳಬೇಕು.

6)ನೀವು ದಿ. ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ನೋಡಿದ್ದೀರಾ?

ಆ ಚಿತ್ರವನ್ನು ಯಾರು ನೋಡಿಲ್ಲ ಹೇಳಿ. ವಿಷ್ಣು ಅವರಿಗೆ ಬೇರೆ ರೀತಿಯ ಇಮೇಜ್ ಕೊಟ್ಟ ಸಿನಿಮಾ. ಹೀಗಾಗಿ ಪುಟ್ಟಣ್ಣ ಅವರು ನಿರ್ದೇಶನ ಮಾಡಿದ ‘ನಾಗರಹಾವು’ ಎಷ್ಟು ಬಾರಿ ನೋಡಿದರೂ ಬೇಸರವಾಗಲ್ಲ. ಎವರ್‌ಗ್ರೀನ್ ಸಿನಿಮಾ ಅದು. ನನ್ನ ಮೆಚ್ಚಿನ ಚಿತ್ರಗಳಲ್ಲಿ ನಾಗರಹಾವು ಕೂಡ ಒಂದು.

7)ಸರಿ, ಪುಟ್ಟಣ್ಣ ಅವರ ‘ನಾಗರಹಾವು’ ಚಿತ್ರಕ್ಕೂ, ನಿಮ್ಮ ನಾಗರಹಾವಿಗೂ ಏನು ಸಂಬಂ‘?

ಕತೆ, ಪಾತ್ರಗಳ ವಿಚಾರದಲ್ಲಿ ಯಾವುದೇ ರೀತಿಯ ಸಂಬಂ‘ ಇಲ್ಲ. ಕೇವಲ ಹೆಸರು ಮಾತ್ರ ಮರು ಬಳಕೆಯಾಗಿದೆ. ಆ ಹೆಸರಿಗೆ ಯಾವುದೇ ರೀತಿಯಲ್ಲೂ ಕೆಟ್ಟ ಹೆಸರು ಬಾರದಂತೆ ಈ ಚಿತ್ರವನ್ನು ಮಾಡಿದ್ದಾರೆ ಕೋಡಿ ರಾಮಕೃಷ್ಣ ಅವರು. ಹಳೇ ನಾಗರಹಾವು ಚಿತ್ರದಂತೆ ಈ ಹೊಸ ನಾಗರಹಾವು ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತದೆಂಬ ‘ರವಸೆ ಇದೆ. ಇಂದಿನ ಟ್ರೆಂಡ್‌ಗೆ ರೆಡಿ ಮಾಡಿರುವ ಸಿನಿಮಾ. ಜತೆಗೆ ಟೆಕ್ನಿಕಲಿ ಕೂಡ ಸ್ಟ್ರಾಂಗ್ ಆಗಿರುವ ಸಿನಿಮಾ. ಸಾಜಿದ್ ಖುರೇಷಿ ಅವರು ಯಾವುದಕ್ಕೂ ಕಡಿಮೆ ಮಾಡಿಲ್ಲ. ಹೀಗಾಗಿ ಸಿನಿಮಾ ತುಂಬಾ ಅದ್ಧೂರಿಯಾಗಿ ಬಂದಿದೆ.

8)ಈ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗೆ ಮೂಡಿ ಬಂದಿದೆ? ಯಾವ ರೀತಿಯ ಪಾತ್ರ ಮಾಡಿದ್ದೀರಿ?

ನೀವು ಈಗಾಗಲೇ ಚಿತ್ರದ ಟ್ರೈಲರ್ ನೋಡಿದ್ದೀರಿ ಅಂದುಕೊಳ್ಳುತ್ತೇನೆ. ಟ್ರೈಲರ್‌ನಲ್ಲೇ ನನ್ನ ಪಾತ್ರ ಹೇಗಿದೆ ಎನ್ನುವ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ನಾನಿಲ್ಲಿ ದ್ವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಒಂದು ನಾಗಿಣಿಯ ಅವತಾರವಾದರೆ, ಮತ್ತೊಂದು ಸಾಮಾನ್ಯ ಹೆಣ್ಣು ಮಗಳ ಪಾತ್ರ. ನಾಗಿಣಿ ಅಥವಾ ನಾಗ ಕನ್ಯೆಯ ಪಾತ್ರದಲ್ಲಿ ಯಾಕೆ ಕಾಣಿಸಿಕೊಳ್ಳುತ್ತೇನೆ, ವಿಷ್ಣು ಮತ್ತು ನನ್ನ ನಡುವಿನ ನಂಟು ಯಾವ ರೀತಿಯದ್ದು ಎಂಬುದಕ್ಕೆ ನೀವು ಸಿನಿಮಾ ನೋಡಬೇಕು. ಅಲ್ಲದೆ 15ನೇ ಶತಮಾನದ ಹೆಣ್ಣು ಹಾಗೂ ಈ ಕಾಲದ ಹುಡುಗಿ ಈ ಎರಡು ಪಾತ್ರಗಳ ಪೈಕಿ ಯಾವುದು ನಾಗಿಣಿ ಪಾತ್ರ ಎಂಬುದು ಕೂಡ ಚಿತ್ರದ ಮತ್ತೊಂದು ಕುತೂಹಲದ ಅಂಶ.

9)ರಾಜಕೀಯದ ನಡುವೆಯೂ ಈ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೀರಿ. ಚಿತ್ರದ ಮೇಲಿನ ಈ ಪ್ರೀತಿಗೆ ಕಾರಣ ಏನು?

ನಿಮಗೆ ತೆಲುಗಿನ ಕೋಡಿ ರಾಮಕೃಷ್ಣ ಅವರ ಬಗ್ಗೆ ಗೊತ್ತಿರಬೇಕಲ್ಲ, ದೊಡ್ಡ ನಿರ್ದೇಶಕ. ಹಲವು ಹಿಟ್ ಸಿನಿಮಾಗಳನ್ನು ಕೊಟ್ಟ ಲೆಜೆಂಡ್ ಡೈರೆಕ್ಟರ್. ಸಾಮಾನ್ಯವಾಗಿ ಅವರ ನಿರ್ದೇಶನದ ಸಿನಿಮಾಗಳಲ್ಲಿ ನಟಿಸುವುದಕ್ಕೆ ಬಹಳಷ್ಟು ಕಲಾವಿದರು ಉತ್ಸಾಹ ತೋರುತ್ತಾರೆ. ನಾನು ಕೂಡ ಮೊದಲು ಚಿತ್ರ ಒಪ್ಪಿಕೊಳ್ಳುವುದಕ್ಕೆ ನಿರ್ದೇಶಕರೇ ಕಾರಣ. ಅಲ್ಲದೆ ಬಾಕ್ಸ್ ಅಫೀಸ್‌ನಲ್ಲಿ ದೊಡ್ಡ ಹಿಟ್ ಕೊಟ್ಟ ‘ಅರುಂ‘ತಿ’ಯಂತಹ ಸಿನಿಮಾ ಕೊಟ್ಟ ನಿರ್ದೇಶಕನ ಸಿನಿಮಾ ಎಂದ ಮೇಲೆ ಆ ಚಿತ್ರದ ಮೇಲೆ ಅಭಿಮಾನ, ಪ್ರೀತಿ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಅಲ್ಲದೆ ಚಿತ್ರದಲ್ಲಿ ವಿಷ್ಣು ದಾದಾ ಇದ್ದಾರೆ. ಈ ಕಾರಣಕ್ಕೆ ಸಿನಿಮಾ ಮುಗಿಸಿ ವರ್ಷಗಳು ಕಳೆದರೂ ಅದರ ಬಿಡುಗಡೆಯ ಪ್ರಚಾರಕ್ಕೆ ಬರುತ್ತಿದ್ದೇನೆ. ಜತೆಗೆ ಒಳ್ಳೆಯ ಕತೆಯ ಸಿನಿಮಾ ಇದು.

10)ಈ ಚಿತ್ರದ ಪಾತ್ರಕ್ಕಾಗಿ ನಿಮ್ಮ ತಯಾರಿ ಹೇಗಿತ್ತು?

ಮೊದಲೇ ಹೇಳಿದಂತೆ ಈ ಚಿತ್ರದಲ್ಲಿ ನಾನು ಎರಡು ಭಿನ್ನ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರಿಂದ ಸಾಕಷ್ಟು ಸಿದ್ಧತೆ ಮಾಡಿಕೊಂಡೇ ಕ್ಯಾಮೆರಾ ಮುಂದೆ ಹೋಗುತ್ತಿದ್ದೆ. ಅದರಲ್ಲೂ 15ನೇ ಶತಮಾನದ ಹೆಣ್ಣಿನ ಪಾತ್ರಕ್ಕಾಗಿ ವಿಶೇಷವಾದ ಕಾಸ್ಟ್ಯೂಮ್, ಆ‘ರಣಗಳು, ಮೇಕಪ್ ಎಲ್ಲವೂ ಬೇರೆಯದ್ದೇ ಆಗಿತ್ತು. ಬೆಳ್ಳಗ್ಗೆ 4 ಗಂಟೆಗೆ ಎದ್ದು ಮೇಕಪ್ ಹಾಕಿಕೊಳ್ಳುತ್ತಿದ್ದೆ. ಹೀಗೆ ತಯಾರಿ ಮಾಡಿಕೊಳ್ಳುವಾಗಲೇ ಈ ದಿನ ಎಷ್ಟು ದೃಶ್ಯಗಳನ್ನು ಚಿತ್ರೀಕರಣ ಮಾಡುತ್ತಾರೆ, ಮುಂದಿನ ದೃಶ್ಯ ಯಾವುದು ಎಂಬುದರ ಬಗ್ಗೆಯೂ ಯೋಚಿಸುತ್ತಿದೆ. ತಿಂಡಿ, ಊಟ ಮಾಡುವಾಗಲೂ ಪಾತ್ರದ ಬಗ್ಗೆಯೇ ಚಿಂತೆ. ಅದರಲ್ಲೂ ಹಳ್ಳಿ ಕಾಯುವ ಹೆಣ್ಣಿನ ಪಾತ್ರವಂತೂ ತುಂಬಾ ರೋಚಕವಾಗಿತ್ತು. ಕಷ್ಟವಾದರೂ ಪ್ರೀತಿಯಿಂದ ಪೂರ್ವ ತಯಾರಿ ಮಾಡಿಕೊಂಡು ನಟಿಸಿದ ಚಿತ್ರವಿದು.

11)ನಿಮ್ಮ ಎರಡೂ ಪಾತ್ರಗಳೂ ಇಲ್ಲಿ ಸೌಮ್ಯವಾಗಿರುತ್ತವೆಯೇ?

ಇಲ್ಲ, ನಾಗಿಣಿ ಪಾತ್ರಕ್ಕೆ ಬಂದಾಗ ಸಾಹಸ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದೇನೆ. ಅದರಲ್ಲೂ ದೊಣ್ಣೆ ವರಸೆಯಂತೂ ತುಂಬಾ ರಿಸ್ಕ್ ತೆಗೆದುಕೊಂಡು ಮಾಡಿದ್ದೇನೆ. ರವಿವರ್ಮ ಅವರ ಸಾಹಸ ಸಂಯೋಜನೆಯಲ್ಲಿ ಸ್ಟಂಟ್ ಮಾಡಿದ್ದು ನನಗೆ ವಿಶೇಷ ಅನು‘ವ ನೀಡಿತು. ಇಡೀ ಚಿತ್ರದಲ್ಲಿ ನಾನು ವಿಷ್ಣು ಮುಂದೆ ನಿಂತುಕೊಳ್ಳುವುದು ಹಾಗೂ ದೊಣ್ಣೆ ವರಸೆ ಮಾಡಿದ್ದು ನನ್ನ ನೆಚ್ಚಿನ ದೃಶ್ಯಗಳು ಕೂಡ.

12)ಗ್ರಾಫಿಕ್ಸ್, ವಿಷ್ಣುವರ್ಧರ್ನ್ ಹಾಗೂ ನಿಮ್ಮ ಪಾತ್ರದ ಸುತ್ತವೇ ‘ನಾಗರಹಾವು’ ಸದ್ದು ಮಾಡುತ್ತಿದೆ. ಆದರೆ, ನಿಮ್ಮ ಮತ್ತು ದಿಗಂತ್ ಕಾಂಬಿನೇಷನ್ ಈ ಚಿತ್ರದಲ್ಲಿ ಹೇಗಿದೆ?

ಹಾಗೇನು ಇಲ್ಲ. ವಿಷ್ಣುವ‘ರ್ನ್ ಅವರೇ ಸೌಂಡು ಮಾಡುತ್ತಿದ್ದಾರೆ ಅಂದರೆ ನಾವು ದೊಡ್ಡ ನಟನಿಗೆ ಕೊಟ್ಟ ಗೌರವ ಅದು. ನನ್ನ ಎರಡು ಪಾತ್ರಗಳ ಪೈಕಿ ಮಾರ್ಡನ್ ಹುಡುಗಿಯಾಗಿ ಕಾಣಿಸಿಕೊಂಡಿರುವ ಪಾತ್ರಕ್ಕೆ ದಿಗಂತ್ ನಾಯಕ. ದಿಗಂತ್ ಒಳ್ಳೆಯ ನಟ ಎಂಬುದರಲ್ಲಿ ಎರಡು ಮಾತಿಲ್ಲ. ತುಂಬಾ ನೀಟಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಸೆಟ್‌ನಲ್ಲಿದ್ದಾಗ ದಿಗಂತ್ ಅವರನ್ನು ತುಂಬಾ ರೇಗಿಸುತ್ತಿದ್ದೆ. ಕೀಟಲೇ ಮಾಡಿಕೊಂಡು ಸಿನಿಮಾ ಮಾಡಿದ್ದೇವೆ. ಹೀಗಾಗೆ ತೆರೆ ಮೇಲೂ ನಮ್ಮ ಜೋಡಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆಂಬ ನಂಬಿಕೆ ಇದೆ.--