ಬೆಂಗಳೂರು (ಡಿ. 07): ರೆಬೆಲ್ ಸ್ಟಾರ್ ಅಂಬರೀಶ್ ಅಂತ್ಯ ಸಂಸ್ಕಾರಕ್ಕೆ ರಮ್ಯಾ ಬಾರದೇ ಇದ್ದುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆಕೆಯ ಮೇಲೆ ಟೀಕಾಸ್ತ್ರ ಪ್ರಯೋಗಗಳೇ ನಡೆದವು.  

ಮಂಡ್ಯಕ್ಕೆ ರಮ್ಯಾ ಬೈ ಬೈ!

ಕೊನೆಗೆ ಮೌನ ಮುರಿದ ರಮ್ಯಾ ಅಂಬಿ ಅಂತಿಮ ಸಂಸ್ಕಾರಕ್ಕೆ ಬರದೇ ಇರಲು ಕಾಲು ನೋವೇ ಕಾರಣ ಎಂದು ಸ್ಪಷ್ಟನೆ ನೀಡಿದರು. ಜೊತೆಗೆ ಕಾಲಿಗೆ ಬ್ಯಾಂಡೇಜ್ ಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಇದು ರೋಗದ ಬಗೆಗೆ ಅನುಮಾನವನ್ನು ಹುಟ್ಟು ಹಾಕಿತ್ತು.  ಕಾಲಿಗೆ ಬ್ಯಾಂಡೇಜ್ ಸುತ್ತಲಾಗಿದ್ದು ನಡೆಯಲಾಗದ ಸ್ಥಿತಿ ತಲುಪಿದ್ದರು.

ರಮ್ಯಾಗೆ ಬಿಸಿ ಮುಟ್ಟಿಸಿದ ಅಭಿಮಾನಿಯ ಪತ್ರ...8 ಸಂಗತಿಗಳು ವೈರಲ್ 

ಇದೀಗ ಇನ್ಸ್ಟ್ರಾಗ್ರಾಮ್ ನಲ್ಲಿ ನಡೆದಾಡುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋವನ್ನು ನೋಡಿದ್ರೆ  ಗುಣಮುಖರಾದಂತೆ ಕಾಣಿಸುತ್ತದೆ. ತುಸು ಸಮಾಧಾನ ನೀಡಿದೆ. ಪ್ರತಿಸಲ ಹೊಡತ ಬಿದ್ದಾಗಲೂ ನಾನು ಇನ್ನಷ್ಟು ಗಟ್ಟಿಯಾಗುತ್ತಿದ್ದೇನೆ. ನನ್ನ ಮನೋಸ್ಥೈರ್ಯ ಇನ್ನಷ್ಟು ಹೆಚ್ಚಾಗಿದೆ. ಯಾರೇನೇ ಅಂದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರ ಟೀಕೆಗೂ ಬಗ್ಗುವುದಿಲ್ಲ ಎಂದು ಫೋಟೋ ಮೇಲೆ ಬರೆದುಕೊಂಡಿದ್ದಾರೆ. 

ಹಕ್ಕಿ ಹಿಕ್ಕೆಗೆ ಪ್ರಧಾನಿ ಹೋಲಿಸಿದ ರಮ್ಯಾ!

ಇನ್ನಾದರೂ ಸಾರ್ವಜನಿಕ ಕಾರ್ಯಕ್ರಮಗಳಿಗೆ, ಸಮಾರಂಭಗಳಿಗೆ ರಮ್ಯಾ ಬರುತ್ತಾರಾ? ಕಾದು ನೋಡಬೇಕಿದೆ.